ದೇವನಹಳ್ಳಿ:ಲೇಔಟ್ಗೆ ಕೇಬಲ್ ಹಾಕುವ ವಿಚಾರಕ್ಕೆ ವಿದ್ಯುತ್ ಗುತ್ತಿಗೆದಾರನಿಂದ ಲಂಚ ಸ್ವೀಕರಿಸುತ್ತಿದ್ದ ಕುಂದಾಣ ಗ್ರಾಮ ಪಂಚಾಯಿತಿ ಪಿಡಿಒ ಲೋಕಾಯಕ್ತರ ಬಲೆಗೆ ಬಿದ್ದಿದ್ದಾರೆ.
₹5 ಲಕ್ಷ ಬೇಡಿಕೆ:ದೇವನಹಳ್ಳಿ ತಾಲೂಕು ಕುಂದಾಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮನಾಭ, ಲೇಔಟ್ಗೆ ನೆಲದಡಿ ಕೇಬಲ್ ಅಳವಡಿಸಲು ಎನ್‌ಒಸಿಗೆ 5 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ವಿದ್ಯುತ್ ಗುತ್ತಿಗೆದಾರ ಮಲ್ಲಿಕಾರ್ಜುನ್ ಈ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.