ಕರ್ನಾಟಕ

karnataka

ETV Bharat / state

ಲೋಕಸಭೆ ಚುನಾವಣೆ: ರಾಜ್ಯದಲ್ಲಿ ನಗದು ಸೇರಿ 262 ಕೋಟಿ ಮೌಲ್ಯದ ವಿವಿಧ ವಸ್ತುಗಳು ಜಪ್ತಿ - LOK SABHA ELECTION - LOK SABHA ELECTION

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈವರೆಗೆ ಒಟ್ಟು 262 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ, ವಸ್ತುಗಳು ಹಾಗೂ ನಗದು ವಶಕ್ಕೆ ಪಡೆಯಲಾಗಿದೆ.

lok-sabha-elections-
ಲೋಕಸಭೆ ಚುನಾವಣೆ ಅಕ್ರಮ: ರಾಜ್ಯದಲ್ಲಿ ನಗದು ಸೇರಿ 262 ಕೋಟಿ ಮೌಲ್ಯದ ವಿವಿಧ ವಸ್ತುಗಳು ಜಪ್ತಿ

By ETV Bharat Karnataka Team

Published : Apr 7, 2024, 7:05 AM IST

ಬೆಂಗಳೂರು:ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ವಿವಿಧ ತನಿಖಾ ತಂಡಗಳು ರಾಜ್ಯದಲ್ಲಿ ಈವರೆಗೆ 35 ಕೋಟಿ ರೂ. ನಗದು ಸೇರಿದಂತೆ 262 ಕೋಟಿ ರೂ. ಮೊತ್ತದ ವಿವಿಧ ವಸ್ತುಗಳನ್ನು ಜಪ್ತಿ ಮಾಡಿವೆ.

ಇದುವರೆಗೆ 133 ಕೋಟಿ ರೂ. ಮೌಲ್ಯದ 1.33 ಕೋಟಿ ಲೀಟರ್‌ ಮದ್ಯ, 5.48 ಕೋಟಿ ರೂ. ಮೌಲ್ಯದ 323 ಕೆಜಿ ಮಾದಕ ವಸ್ತು, 9.49 ಕೋಟಿ ರೂ. ಮೌಲ್ಯದ 16.10 ಕೆಜಿ ಚಿನ್ನ, 27 ಲಕ್ಷ ರೂ. ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ನಗದು, ಮದ್ಯ ಸೇರಿದಂತೆ ವಶಪಡಿಸಿಕೊಂಡ ವಿವಿಧ ವಸ್ತುಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ 1,337 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಗುಂಜೂರಪಾಳ್ಯದಲ್ಲಿ 10 ಲಕ್ಷ ರೂ. ಮೌಲ್ಯದ 5.5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬ್ಯಾಂಕಿನ ಹಣವನ್ನೇ ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು: ಏಕೆ ಗೊತ್ತಾ? - Money seized

ಹುಬ್ಬಳ್ಳಿ ಬಳಿ ನಗದು ಹಣ ವಶಕ್ಕೆ:ಧಾರವಾಡ ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್​​ಗಳಲ್ಲಿ ವಾಹನ ತಪಾಸಣೆ ತೀವ್ರಗೊಳಿಸಿದ್ದು, ಸ್ಥಿರ ಕಾವಲು ತಂಡದ ಅಧಿಕಾರಿ ಷಣ್ಮುಖಪ್ಪ ದೇಸಾಯಿ ನೇತೃತ್ವದಲ್ಲಿ ಪುಣೆ- ಬೆಂಗಳೂರು ರಸ್ತೆಯಲ್ಲಿರುವ ತಡಸ ಕ್ರಾಸ್ ಚೆಕ್ ಪೋಸ್ಟ್​​ನಲ್ಲಿ 1,10,000 ರೂ. ವಶಕ್ಕೆ ಪಡೆಯಲಾಗಿದೆ. ವಾಹನ ತಪಾಸಣೆ ವೇಳೆ ದಾಖಲೆ ರಹಿತ ನಗದು ಹಣ ಪತ್ತೆ ಆಗಿದೆ.

ತಪಾಸಣೆ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಸಂತೋಷ ರಾಗಿಕೊಪ್ಪ ಎಂಬುವರು ಕಾರಿನಲ್ಲಿ ದಾಖಲೆ ಇಲ್ಲದ 1,10,000 ರೂ. ಸಾಗಿಸುತ್ತಿದ್ದರು. ನಗದು ವಶಕ್ಕೆ ಪಡೆದು ಮತ್ತು ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯದ 14 ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳ ಮೇಲಿರುವ ಕ್ರಿಮಿನಲ್ ಮೊಕದ್ದಮೆಗಳೇನು? - Criminal Cases

ABOUT THE AUTHOR

...view details