ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಐವರು ಅಭ್ಯರ್ಥಿಗಳು ಹಾಗೂ ಅತಿ ಕಡಿಮೆ ಅಂತರದಲ್ಲಿ ಜಯಿಸಿದ ಐವರು ಅಭ್ಯರ್ಥಿಗಳು ಇವರೇ ನೋಡಿ.
ಹೆಚ್ಚು ಅಂತರದಿಂದ ಗೆದ್ದವರು:
- ಉತ್ತರ ಕನ್ನಡಕ್ಷೇತ್ರ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 3,37,872 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಕಾಗೇರಿ 7,80,494 ಮತಗಳನ್ನು ಪಡೆದರೆ ಇವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ.ಅಂಜಲಿ ನಿಂಬಾಳ್ಕರ್ 4,42,622 ಮತಗಳನ್ನು ಗಳಿಸಿದ್ದಾರೆ.
- ಮಂಡ್ಯ: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ 2,84,620 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಕುಮಾರಸ್ವಾಮಿ 8,51,881 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು 5,67,261 ಮತಗಳನ್ನು ಪಡೆದಿದ್ದಾರೆ.
- ಬೆಂಗಳೂರು ಗ್ರಾಮಾಂತರ: ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ 2,69,647 ಮತಗಳ ಲೀಡ್ನಿಂದ ಜಯ ಗಳಿಸಿದ್ದಾರೆ. ಮಂಜುನಾಥ್ 10,79,002 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಡಿ.ಕೆ.ಸುರೇಶ್ 8,09,355 ಮತಗಳನ್ನು ಪಡೆದಿದ್ದಾರೆ.
- ಬೆಂಗಳೂರು ದಕ್ಷಿಣ:ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ 2,77,083 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತೇಜಸ್ವಿ 7,50,830 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಸೌಮ್ಯ ರೆಡ್ಡಿ 4,73,747 ಮತ ಗಳಿಸಿದ್ದಾರೆ.
- ಬೆಂಗಳೂರು ಉತ್ತರ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 2,59,476 ಮತಗಳ ಅಂತರದಿಂದ ವಿಜಯದ ನಗೆ ಬೀರಿದ್ದಾರೆ. ಕರಂದ್ಲಾಜೆ 9,86,049 ಮತಗಳನ್ನು ಪಡೆದರೆ, ರಾಜೀವ್ ಗೌಡ ಅವರಿಗೆ 7,26,573 ಮತಗಳು ಲಭಿಸಿವೆ.