ಕರ್ನಾಟಕ

karnataka

ETV Bharat / state

ಸಾಕ್ಷ್ಯಾಧಾರ ಕೊರತೆ: ಪೆಟ್ರೋಲಿಯಂ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್ - High Court - HIGH COURT

ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿ ಎಸ್ ಎಂ ಮಣ್ಣನ್ ವಿರುದ್ಧ ಸಿಬಿಐ ದಾಖಲಿಸಿದ್ದ ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಒದಗಿಸದ ಹಿನ್ನೆಲೆ ಹೈಕೋರ್ಟ್ ಈ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.

high court
ಹೈಕೋರ್ಟ್ (Etv Bharat)

By ETV Bharat Karnataka Team

Published : May 10, 2024, 8:37 PM IST

ಬೆಂಗಳೂರು: ಲಂಚ ಸ್ವೀಕಾರ ಆರೋಪದಡಿ ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿ ಎಸ್ ಎಂ ಮಣ್ಣನ್ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳ ಒದಗಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.

ಸಿಬಿಐ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಮಣ್ಣನ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ ಸಿಬಿಐ ಅಧಿಕಾರಿಗಳು ಎನ್ವಲಪ್ ಕವರ್(ಲಕೋಟೆ) ಬಣ್ಣ ಮತ್ತು ಅದರದಲ್ಲಿದ್ದ ನಗದು ಆಧರಿಸಿ ಪ್ರಕರಣದ ದಾಖಲಿಸಿದೆ. ಆದರೆ, ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪ್ರಕರಣ ರದ್ದುಗೊಳಿಸಿ ಅರ್ಜಿದಾರರನ್ನು ಖುಲಾಸೆಗೊಳಿಸಿದೆ.

ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಲಂಚದ ಆರೋಪ ಹೊರಿಸಲಾಗಿದೆ. ಆದರೆ, ಲಂಚಕ್ಕೆ ಬೇಡಿಕೆ ಇಟ್ಟ ಮತ್ತು ಸ್ವೀಕರಿಸಿದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಪ್ರಕರಣ ಊರ್ಜಿತವಾಗುವುದಿಲ್ಲ ಎಂದು ಪೀಠ ತಿಳಿಸಿದೆ.

ಅಲ್ಲದೇ ಸಿಬಿಐ ಅಧಿಕಾರಿಗಳು ಅವರನ್ನು ಟ್ರ್ಯಾಪ್ ಮಾಡಿಲ್ಲ, ಶೋಧ ಕಾರ್ಯವನ್ನು ಕಾನೂನು ಬದ್ಧವಾಗಿ ನಡೆಸಿಲ್ಲ. ಅರ್ಜಿದಾರರನ್ನು ಟ್ರ್ಯಾಪ್ ಮಾಡಲು ಕಾನೂನು ರೀತಿಯಲ್ಲಿ ಅನುಮತಿ ಪಡೆದಿಲ್ಲ. ಈ ಎಲ್ಲ ಅಂಶಗಳು ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿವೆ. ಎಲ್ಲ ಅಂಶ ಗಮನಿಸಿದರೆ ಸಿಬಿಐ ಲಕೋಟೆಯಲ್ಲಿ ಹಣವಿತ್ತು ಎಂದು ಅರ್ಜಿದಾರರಿಗೆ ಕಳಂಕ ತರಲು ಪ್ರಯತ್ನ ನಡೆಸಿದಂತಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ರಾಮನಗರ ಜಿಲ್ಲೆಯಲ್ಲಿ ಎಲ್‌ಪಿಜಿ ದಾಸ್ತಾನು ಘಟಕದ ಲೈಸನ್ಸ್ ರದ್ದತಿ ಆದೇಶವನ್ನು ಜಾರಿಗೊಳಿಸುವಂತೆ ಸಿಬಿಐನ ಡೆಪ್ಯೂಟಿ ಸೂಪರಿಂಟೆಂಡೆಟ್(ಭ್ರಷ್ಟಾಚಾರ ನಿಗ್ರಹ ದಳ) ಗ್ಲಾಡೈಸ್ ಜಯಂತಿ, ಮಣ್ಣನ್ ಅವರಿಗೆ ನಿರ್ದೇಶನ ನೀಡಿದ್ದರು. ಆದರೆ ಮಣ್ಣನ್ ಆ ನಿರ್ದೇಶನವನ್ನು ಪಾಲಿಸಲಾಗದು, ಏಕೆಂದರೆ ಅವರು ಅಕ್ರಮವಾಗಿ ಲೈಸನ್ಸ್ ರದ್ದತಿ ಕೋರಿದ್ದಾರೆ ಎಂದು ವಿವರಿಸಿದ್ದರು.

ಆದರೆ ಸಿಬಿಐ ಅಧಿಕಾರಿ ಸಾಂಘವಿ ಸಿಲಿಂಡರ್ ಪ್ರವೈಟ್ ಲಿಮಿಟೆಡ್​​ಗೆ ಮತ್ತಿಬ್ಬರ ಜತೆ ಭೇಟಿ ನೀಡುವಂತೆ ಸೂಚಿಸಿದ್ದರು. ಆದರೆ 2019ರ ಸೆ.22ರಂದು ಸಿಬಿಐ ಮಣ್ಣನ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಮರು ದಿನ ಸೆ.23ರಂದು ಕೇಂದ್ರ ಗೃಹ ಸಚಿವಾಲಯ ಮಣ್ಣನ್ ಅವರ ಮೊಬೈಲ್ ಟ್ರ್ಯಾಪ್ ಮಾಡಲು ಆದೇಶ ನೀಡಿತ್ತು. ಅದರಲ್ಲಿ ಕುಮಾರ್ ಎಂಬುವರು ಮಣ್ಣನ್ ಎಂಬುವರಿಗೆ ಕರೆ ಮಾಡಿದ್ದರು, ಆಗ ಮಣ್ಣನ್ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಂಗತಿ ಹೊರಬಿತ್ತು. ಮರು ದಿನ ಮಣ್ಣನ್, ಕುಮಾರ್ ಎಂಬುವರು ಕಳುಹಿಸಿದ್ದ ರಿಷಬ್ ಬಿಪಿನ್ ದೇಸಾಯಿ ಅವರಿಂದ 50 ಸಾವಿರ ಲಂಚ ಪಡೆದರು ಎನ್ನಲಾಗಿದೆ.

ಸಿಬಿಐ ಅಕಾರಿಗಳು ಮಣ್ಣನ್ ಮೇಲೆ ದಾಳಿ ನಡೆಸಿದಾಗ ಎನ್‌ವಲಪ್​​​ನಲ್ಲಿ 50ಸಾವಿರ ನಗದು ಇದ್ದಿದ್ದು ಕಂಡು ಬಂದಿತು. ಹಾಗಾಗಿ ಸಿಬಿಐ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರನ್ನು ಹಿರಿಯ ಅಧಿಕಾರಿಗಳ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ.

ಇದು ಗ್ಲಾಡೈಸ್ ಜಯಂತಿ ಅವರು ತನಗೆ ನೀಡುತ್ತಿರುವ ಕಿರುಕುಳವಾಗಿದೆ. ಮೊಬೈಲ್ ಟ್ರ್ಯಾಪ್ ಮಾಡಿದ್ದು, ಅಕ್ರಮ. ತಾವು ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಮತ್ತು ಸ್ವೀಕರಿಸಿದ್ದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಆದರೆ ಸಿಬಿಐ ಎನ್ವಲಪ್​​​ನಲ್ಲಿ ಹಣವಿತ್ತು ಎಂದು ಹೇಳುತ್ತಿದೆ. ಆದರೆ ಅದಕ್ಕೆ ಆಧಾರವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಇದನ್ನೂಓದಿ:ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಪ್ರಕರಣ; ದೇವರಾಜೇಗೌಡ, ಕಾರ್ತಿಕ್‌ಗೆ ಎಸ್ಐಟಿ ನೋಟಿಸ್ - Hassan Obscene Video Case

ABOUT THE AUTHOR

...view details