ಕರ್ನಾಟಕ

karnataka

ETV Bharat / state

ಸಿಹಿ ಹಣ್ಣೆಂದು ವಿಷಪೂರಿತ ಕಾಯಿ ಸೇವಿಸಿ ಮಕ್ಕಳು ಸೇರಿ 12 ಮಂದಿ ಅಸ್ವಸ್ಥ - FOOD POISONING

ಚಾಮರಾಜನಗರದ ಕುಣಿಕೆರಿ ತಾಂಡದಲ್ಲಿ ಸಿಹಿ ಹಣ್ಣೆಂದು ವಿಷಪೂರಿತ ಕಾಯಿ ಸೇವಿಸಿ ಮಕ್ಕಳು ಸೇರಿ ಹಲವರು ಅಸ್ವಸ್ಥಗೊಂಡಿದ್ದಾರೆ.

POISONOUS FRUITS CONSUMPTION
ವಿಷಪೂರಿತ ಕಾಯಿ (ETV Bharat)

By ETV Bharat Karnataka Team

Published : Nov 28, 2024, 8:23 AM IST

ಚಾಮರಾಜನಗರ:ವಿಷಪೂರಿತ ಕಾಯಿ ತಿಂದು ವಾಂತಿ, ಭೇದಿ ಕಾಣಿಸಿಕೊಂಡು ಮಕ್ಕಳು ಸೇರಿದಂತೆ 12 ಮಂದಿ ಕೂಲಿ ಕಾರ್ಮಿಕರು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ನಡೆಯಿತು.

ಕೊಪ್ಪಳ ಜಿಲ್ಲೆಯ ಕುಣಿಕೆರಿ ತಾಂಡ ಗ್ರಾಮದ ಯುವರಾಜು(4), ವೆಂಕಟೇಶ್ (8), ಪ್ರೀತಮ್ (10), ಪವನ್ (10), ಅನುಷಾ, (10) ಅಂಕಿತಾ (10), ಅರ್ಜುನ(10), ಬದ್ರಿಬಾಯಿ (32), ಸೀತಾಬಾಯಿ (48) , ಲಕ್ಷ್ಮೀ (35) ಸರಸ್ವತಿ (42), ಲಲಿತಾ(45) ಆಸ್ಪತ್ರೆಗೆ ದಾಖಲಾಗಿರುವ ಕಾರ್ಮಿಕರು.

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಗ್ರಾಮದ ಸಮೀಪ ಕಬ್ಬು ಕಟಾವಿಗೆ ಒಂದು ತಿಂಗಳ ಹಿಂದೆ ಆಗಮಿಸಿದ್ದ ಮೂರು ಕುಟುಂಬ, ಎಂದಿನಂತೆ ಬುಧವಾರ ಕಟಾವು ಮಾಡಲು ತೆರಳಿದ್ದರು. ಈ ವೇಳೆ ಪಕ್ಕದಲ್ಲಿ ಆಟವಾಡುತ್ತಿದ್ದ ಅನುಷಾ ಎಂಬ ಬಾಲಕಿ ಮರಳ ಕಾಯಿ (Jatropha) ತಿಂದು ಸಿಹಿಯಾಗಿದೆ ಎಂದಿದ್ದು, ಜೊತೆಯಲ್ಲಿದ್ದವರೂ ಕಾಯಿಯ ಒಳಗಡೆಯ ಬೀಜ ತಿಂದಿದ್ದಾರೆ. ಮಕ್ಕಳು ಸಿಹಿ ಕಾಯಿ ಅನ್ನುತ್ತಿದ್ದಂತೆ ಪೋಷಕರೂ ಸಹ ಕಾಯಿ ಮತ್ತು ಬೀಜ ಸೇವಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಮಕ್ಕಳು ಸೇರಿ ಹಲವರಿಗೆ ವಾಂತಿ, ಭೇದಿಯಾಗಿದೆ. ತಕ್ಷಣ ಆಟೋ ರಿಕ್ಷಾ ಮೂಲಕ ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಜೊತೆಯಲ್ಲಿದ್ದ ಕೂಲಿ ಕಾರ್ಮಿಕರು ಮಾಹಿತಿ ನೀಡಿದ್ದಾರೆ.

ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಶೃತಿ, ಡಾ.ಸೌಮ್ಯ, ಡಾ.ವೈಭವ್ ಇತರರು ಸಕಾಲದಲ್ಲಿ ಚಿಕಿತ್ಸೆ ನೀಡಿದ್ದಾರೆ. ಅಸ್ವಸ್ಥರ ಪೈಕಿ ಯುವರಾಜ್ ಎಂಬ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರನಗರಕ್ಕೆ ಕಳುಹಿಸಲಾಗಿದೆ.

ಗ್ರಾಮಾಂತರ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಅಸ್ವಸ್ಥರು ಹಾಗು ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ರಾಯಚೂರು: ಊಟ ಸೇವಿಸಿದ್ದ ಒಂದೇ ಕುಟುಂಬದ 7 ಜನರು ಅಸ್ವಸ್ಥ

ABOUT THE AUTHOR

...view details