ಕರ್ನಾಟಕ

karnataka

ETV Bharat / state

ನಾನು ಎಂಪಿ ಅಭ್ಯರ್ಥಿ: ಲೋಕಸಭೆ ಚುನಾವಣೆ ಪ್ರಚಾರ ಶುರು ಮಾಡಿದ ಕೆ. ಸುಧಾಕರ್ - ಲೋಕಸಭೆ ಚುನಾವಣೆ ಪ್ರಚಾರ ಶುರು

ಚಿಕ್ಕಬಳ್ಳಾಪುರ ಜಿಲ್ಲೆ ನೂತನ ತಾಲೂಕು ಚೇಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಕೆ. ಸುಧಾಕರ್ ಅವರು ನಾನು ಎಂಪಿ ಅಭ್ಯರ್ಥಿ ಘೋಷಿಸಿಕೊಂಡಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ಪ್ರಚಾರ ಶುರು ಮಾಡಿದ್ದಾರೆ.

ಚಿಕ್ಕಬಳ್ಳಾಪುರ  K Sudhakar  Chikkaballapur  ಲೋಕಸಭೆ ಚುನಾವಣೆ ಪ್ರಚಾರ ಶುರು  ಮಾಜಿ ಸಚಿವ ಕೆ ಸುಧಾಕರ್
ನಾನು ಎಂಪಿ ಅಭ್ಯರ್ಥಿ ಘೋಷಿಸಿಕೊಂಡು ಲೋಕಸಭೆ ಚುನಾವಣೆ ಪ್ರಚಾರ ಶುರು ಮಾಡಿದ ಕೆ. ಸುಧಾಕರ್

By ETV Bharat Karnataka Team

Published : Feb 5, 2024, 8:58 AM IST

ನಾನು ಎಂಪಿ ಅಭ್ಯರ್ಥಿ ಘೋಷಿಸಿಕೊಂಡು ಲೋಕಸಭೆ ಚುನಾವಣೆ ಪ್ರಚಾರ ಶುರು ಮಾಡಿದ ಕೆ. ಸುಧಾಕರ್

ಚಿಕ್ಕಬಳ್ಳಾಪುರ:''ಹಿಂದೆ ಕಾಂಗ್ರೆಸ್​ನಿಂದ ಬಿಜೆಪಿಗೆ ಹೋಗಿ ಸರ್ಕಾರ ರಚನೆ ಮಾಡುವುದರಲ್ಲಿ ನಮ್ಮದು ಹಾಗೂ ಎಂಟಿಬಿ ನಾಗರಾಜ ಅವರು ಪಾತ್ರ ಪ್ರಮುಖವಾಗಿದೆ. ಬಿಜೆಪಿ ಹಿರಿಯ ನಾಯಕ ಬಿ.ಎಸ್​. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವ ಉದ್ದೇಶದಿಂದ ನಾವಿಬ್ಬರೂ ರಿಸ್ಕ್​ ತೆಗೆದುಕೊಂಡು ಬಿಜೆಪಿ ಸೇರ್ಪಡೆಗೊಂಡಿದ್ದೇವೆ. ನನ್ನ ಆಪ್ತರಾದ ಮತ್ತು ಮಂತ್ರಿ ಸ್ಥಾನವನ್ನು ಬಿಟ್ಟು ಎಂಟಿಬಿ ನಾಗರಾಜ ಬಿಜೆಪಿ ಸೇರಿದ್ದಾರೆ. ಆದರೆ, ಈಗ ನಮ್ಮಿಬ್ಬರಿಗೂ ತುಂಬಾ ಅನ್ಯಾಯವಾಗಿದೆ'' ಎಂದು ಮಾಜಿ ಸಚಿವ ಡಾ. ಕೆ. ಸುಧಾಕರ್ ಕಿಡಿಕಾರಿದರು.

ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಂತ್ರಿಯಾಗಿಸಲು ಶ್ರಮ - ಸುಧಾಕರ್:ಚಿಕ್ಕಬಳ್ಳಾಪುರ ಜಿಲ್ಲೆ ನೂತನ ತಾಲೂಕು ಚೇಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನಡೆದ ಮಾತನಾಡಿದ ಅವರು, ''ಈ ದೇಶದ ಅಭಿವೃದ್ಧಿಯತ್ತ ಗಮನಹರಿಸುತ್ತಿದ್ದೇವೆ. ಇದರಿಂದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಂತ್ರಿಯಾಗಿಸಲು ನಾವೆಲ್ಲರೂ ಶ್ರಮಿಸಲು ಮುಂದಾಗಿದ್ದೇವೆ. ಜೊತೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೀವು ಕೆಲಸ ಮಾಡುವಂತೆ ಹಸಿರು ನಿಶಾನೆ ತೋರಿಸಿದ್ದಾರೆ'' ಎಂದರು.

ನಾನು ಮತ್ತೆ ಎಂಪಿಯಾದ ಅಭಿವೃದ್ಧಿಗೆ ಹೆಚ್ಚು ಆದ್ಯತೆ -ಸುಧಾಕರ್:''ಸುಧಾಕರ್ ಅಂದ್ರೆ ಅಭಿವೃದ್ಧಿ, ಅಭಿವೃದ್ಧಿ ಅಂದ್ರೆ ಸುಧಾಕರ್. ನಾನು ಯಾವಗಲೂ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ನಾನು ಮತ್ತೆ ಎಂಪಿಯಾದರೆ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ಕೊಡುತ್ತೇನೆ'' ಎಂದು ಹೇಳುವ ಮೂಲಕ ಮಾಜಿ ಸಚಿವ ಡಾ.ಕೆ. ಸುಧಾಕರ್ ಅವರು ಲೋಕಸಭೆ ಚುನಾವಣೆಯ ಪ್ರಚಾರ ಶುರು ಮಾಡಿದ್ದಾರೆ.

ಸುಧಾಕರ್​ಯಿಂದ ಚುನಾವಣೆ ಪ್ರಚಾರ ಶುರು:ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕೆ. ಸುಧಾಕರ್ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬರುತ್ತಿದ್ದವು. ಸದ್ಯ ಇವೆಲ್ಲವುಗಳಿಗೆ ಸ್ಪಷ್ಟತೆ ಲಭಿಸಿದೆ. ಮಾಜಿ ಸಚಿವ ಕೆ. ಸುಧಾಕರ್, ''ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ'' ಎಂಬ ಮಾಹಿತಿಯನ್ನು ನೀಡಿದ್ದಾರೆ. ಈಗಾಗಲೇ ಮಾಜಿ ಪ್ರಧಾನಿಗಳಾದ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರಿಂದ ಬೆಂಬಲ ಸಿಕ್ಕಿದ್ದು, ಕ್ಷೇತ್ರದಲ್ಲಿ ಚುನಾವಣೆ ಪ್ರಚಾರವನ್ನು ಶುರು ಮಾಡಿ ಎಂದು ಅವರು ತಿಳಿಸಿದ್ದಾರೆ. ಆದ್ದರಿಂದಲೇ ನಾನು ದೇವಮೂಲೆಯಿಂದ ಪ್ರಚಾರವನ್ನು ಶುರು ಮಾಡಿದ್ದೇನೆ. ನಾನು ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ಈ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡುತ್ತೇನೆ ಎಂದು ಭರವಸೆಯನ್ನು ಕೆ. ಸುಧಾಕರ್ ಕೊಟ್ಟಿದ್ದಾರೆ.

ಇದನ್ನೂ ಓದಿ:ನನ್ನ ತೆರಿಗೆ ನನ್ನ ಹಕ್ಕು ಅಭಿಯಾನಕ್ಕೆ ಸಿಎಂ ಬೆಂಬಲ; ಕನ್ನಡಿಗರ ತೆರಿಗೆ ಹಣ ಉತ್ತರ ರಾಜ್ಯಗಳ ಪಾಲು: ಸಿದ್ದರಾಮಯ್ಯ

ABOUT THE AUTHOR

...view details