ಕರ್ನಾಟಕ

karnataka

ETV Bharat / state

ಪ್ರಯಾಣಿಕನಿಗೆ ₹2.5 ಲಕ್ಷ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ KSRTC ಬಸ್ ಕಂಡಕ್ಟರ್, ಚಾಲಕ - Honest Bus Conductor - HONEST BUS CONDUCTOR

ಪ್ರಯಾಣಿಕರೊಬ್ಬರು ಬಸ್​ನಲ್ಲಿ ಬಿಟ್ಟು ಹೋಗಿದ್ದ ಎರಡುವರೆ ಲಕ್ಷ ರೂ. ಹಣ ಹಿಂತಿರುಗಿಸುವ ಮೂಲಕ ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್ ಹಾಗೂ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

CASH BAG RETURNED
ಪ್ರಯಾಣಿಕನಿಗೆ ಹಣ ಹಿಂತಿರುಗಿಸಿ ಮಾದರಿಯಾದ ಬಸ್ ಕಂಡಕ್ಟರ್, ಚಾಲಕ (ETV Bharat)

By ETV Bharat Karnataka Team

Published : Jun 19, 2024, 4:05 PM IST

Updated : Jun 19, 2024, 5:27 PM IST

ಪ್ರಾಮಾಣಿಕತೆ ಮೆರೆದ KSRTC ಬಸ್ ಕಂಡಕ್ಟರ್, ಚಾಲಕ (ETV Bharat)

ರಾಯಚೂರು: ಬಸ್​ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಪ್ರಯಾಣಿಕನಿಗೆ ಹಿಂತಿರುಗಿಸುವ ಮೂಲಕ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಹಾಗೂ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಘಟಕ 1ರಲ್ಲಿ ಕೆಲಸ ಕಾರ್ಯ ನಿರ್ವಹಿಸುತ್ತಿರುವ ಚಾಲಕ ಹನುಮಂತರಾಯ ಹಾಗೂ ನಿರ್ವಾಹಕ ಮಂಜುನಾಥ ಅವರು ಬಸ್​ನಲ್ಲಿ ​ದೊರೆತ ಹಣವನ್ನು ಪ್ರಯಾಣಿಕ ಸೋಮಶೇಖರ್ ಪಾಟೀಲ್‌ ಅವರಿಗೆ ಮರಳಿಸಿದ್ದಾರೆ.

ಹುಬ್ಬಳ್ಳಿಯಿಂದ ಹೈದರಾಬಾದ್​ಗೆ ತೆರಳುತ್ತಿದ್ದ ಬಸ್​ನಲ್ಲಿ ಸೋಮಶೇಖರ್ ಪಾಟೀಲ್ ಅವರು ಮಾನ್ವಿ ಪಟ್ಟಣದಿಂದ ರಾಯಚೂರಿಗೆ ಬರುತ್ತಿದ್ದರು. ಆದರೆ ರಾಯಚೂರಿನಲ್ಲಿ ಇಳಿಯುವಾಗ ಹಣದ ಚೀಲವನ್ನು ಬಸ್‌ನಲ್ಲಿಯೇ ಬಿಟ್ಟು ಹೋಗಿದ್ದರು. ಬಸ್​ ಹೈದರಾಬಾದ್​ ತಲುಪಿದ ನಂತರ ಚೀಲವನ್ನು ಗಮನಿಸಿದ ಚಾಲಕ ಹಾಗೂ ನಿರ್ವಾಹಕರು ಪರಿಶೀಲಿಸಿದ್ದು, 2.5 ಲಕ್ಷ ನಗದು ಜೊತೆಯಲ್ಲಿ ಪ್ರಯಾಣಿಕನ ಬ್ಯಾಂಕ್​ ಪಾಸ್​ಬುಕ್​ ಹಾಗೂ ಮೊಬೈಲ್ ನಂಬರ್​ ಸಿಕ್ಕಿದೆ. ನಂತರ ಅವರು, ಸೋಮಶೇಖರ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಹೈದರಾಬಾದ್‌ನಿಂದ ಇಂದು ಮರಳಿ ಹುಬ್ಬಳ್ಳಿ ಕಡೆ ತೆರಳುವಾಗ ಪ್ರಯಾಣಿಕ ಹಣವನ್ನು ಮರಳಿಸಿ ಪ್ರಮಾಣಿಕತೆ ತೋರಿದ್ದಾರೆ.

ಕಂಡಕ್ಟರ್ ಮಂಜುನಾಥ ನವಲಗುಂದ ಮಾತನಾಡಿ, "ಪ್ರಯಾಣಿಕರೊಬ್ಬರು ನಮ್ಮ ಬಸ್​ನಲ್ಲಿ ರಾಯಚೂರಿಗೆ ಬರುತ್ತಿದ್ದರು. ಗಡಿಬಿಡಿಯಲ್ಲಿ ಹಣದ ಚೀಲವನ್ನು ಬಸ್​ನಲ್ಲಿಯೇ ಬಿಟ್ಟು ಹೋಗಿದ್ದರು. ನಾವು ಹೈದರಾಬಾದ್​ಗೆ ತಲುಪಿದ ನಂತರ ಚೀಲವನ್ನು ನೋಡಿದ್ದೆವು. ಪರಿಶೀಲಿಸಿದಾಗ ಎರಡುವರೆ ಲಕ್ಷ ಹಣ ಇತ್ತು. ಜೊತೆಗೆ ಫೋನ್​ ನಂಬರ್​, ಬ್ಯಾಂಕ್​ ಪಾಸ್​ಬುಕ್​ ಇತ್ತು. ಬಳಿಕ ನಾವು ನಿನ್ನೆ ಅವರನ್ನು ಸಂಪರ್ಕಸಿ ಇಂದು ಬಸ್​ ನಿಲ್ದಾಣಕ್ಕೆ ಬರಲು ತಿಳಿಸಿದ್ದೆವು. ಇಂದು ರಾಯಚೂರು ಬಸ್​ ನಿಲ್ದಾಣಾಧಿಕಾರಿ ಸಮ್ಮುಖದಲ್ಲಿ ಪ್ರಯಾಣಿಕನಿಗೆ ಹಣವನ್ನು ಮರಳಿಸಿದ್ದೇವೆ" ಎಂದರು.

ಸೋಮಶೇಖರ್ ಪಾಟೀಲ್ ಮಾತನಾಡಿ, "ನಾನು ಮಾನ್ವಿ ಪಟ್ಟಣದಿಂದ ರಾಯಚೂರಿಗೆ ಬಸ್​ನಲ್ಲಿ ಪ್ರಯಾಣಿಸಿದ್ದೆ. ಆದರೆ ಹಣವಿದ್ದ ಬ್ಯಾಗ್​ ಅನ್ನು ಬಸ್​ನಲ್ಲಿಯೇ ಬಿಟ್ಟು ರಾಯಚೂರಿನಲ್ಲಿ ಇಳಿದಿದ್ದೆ. ಬ್ಯಾಗ್​ನಲ್ಲಿ ಎರಡುವರೆ ಲಕ್ಷ ಹಣವಿತ್ತು. ಬಸ್​ ಹೈದರಾಬಾದ್​ ತಲುಪಿದ ಬಳಿಕ ಕಂಡಕ್ಟರ್ ಹಾಗೂ ಬಸ್​ ಚಾಲಕ ಬ್ಯಾಗ್​ ಗಮನಿಸಿ ಅದರಲ್ಲೇ ಸಿಕ್ಕ ನನ್ನ ನಂಬರ್​ಗೆ ಕರೆ ಮಾಡಿ ವಿಷಯ ತಿಳಿಸಿದರು. ಇಂದು ರಾಯಚೂರು ಬಸ್​ ನಿಲ್ದಾಣಾಧಿಕಾರಿ ಸಮ್ಮುಖದಲ್ಲಿ ನನಗೆ ಹಣವನ್ನು ಮರಳಿಸುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ:ರಾಯಚೂರು: 371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ - ARTICLE 371 J

Last Updated : Jun 19, 2024, 5:27 PM IST

ABOUT THE AUTHOR

...view details