ಮೈಸೂರು:ಕೆಪಿಎಸ್‌ಸಿ ನೇಮಕಾತಿ ಪರಿಷ್ಕೃತ ಪಟ್ಟಿ ಕಳವು ಪ್ರಕರಣದಲ್ಲಿ ದೊಡ್ಡ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಈ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕೆಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಗ್ರಹಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್‌ಸಿ ಮುಖ್ಯಮಂತ್ರಿಗಳ ನೇರ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಿದ್ದರೂ 2016 ರ ಅಧಿಕಾರಿಗಳ ಆಯ್ಕೆಗೆ ಸಂಬಂಧಿಸಿದ ಪಟ್ಟಿ ಕಳವು ಆಗಿದೆ ಎಂದು ವಿಧಾನಸೌಧದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪಟ್ಟಿ ಕಂಪ್ಯೂಟರ್‌ನಲ್ಲಿ ಸೇವ್ ಆಗಿರಬಹುದು. ಅದನ್ನು ನೋಡುವ ಬದಲು ಕಳ್ಳತನವಾಗಿದೆ ಎಂದು ದೂರು ನೀಡಿದ್ದು, ಈ ರೀತಿ ಜನರನ್ನು ಮರುಳು ಮಾಡಲು ಯತ್ನಿಸಿರುವುದು ಸರಿಯಲ್ಲ ಎಂದರು.
ಕರ್ನಾಟಕ ಲೋಕಸೇವಾ ಆಯೋಗ ಒಂದು ಹಿರಿಯ ನಾಗರಿಕ ಸಂಸ್ಥೆ ಇದು, ನಾಡಿನ ಆಡಳಿತ ಚುಕ್ಕಾಣಿ ಹಿಡಿದು ನಾಡ ಅಭಿವೃದ್ಧಿಗೆ ಶ್ರಮಿಸುವಂತಹ ಅಧಿಕಾರಿಗಳನ್ನು ಆಯ್ಕೆ ಮಾಡುವಂತಹ ಸಂಸ್ಥೆ, ಉದ್ಯೋಗ ಕೊಡುವಂತ, ಸರ್ಕಾರಿ ಉದ್ಯೋಗಿಗಳನ್ನು ಆಯ್ಕೆ ಮಾಡುವಂತ ನಾಡಜನರ ಸಂಸ್ಥೆ, ವಿವಾದದ ಆರಾಜಕತೆಯ, ಭ್ರಷ್ಟಾಚಾರ ಗೊಂದಲದ ಗೂಡಾಗಿರುವದು ಶೂಚನೀಯವಾದುದು ಎಂದು ಖೇದ ವ್ಯಕ್ತಪಡಿಸಿದರು.