ಕೊಪ್ಪಳ:ಕೊಪ್ಪಳ ತಾಲೂಕಿನ ಹೊಸಲಿಂಗಾಪುರದಲ್ಲಿ ಮೂರು ಜನ ಅನುಮಾನಾಸ್ಪದ ಸಾವು ಪ್ರಕರಣ ಮಂಗಳವಾರ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣವನ್ನ ಭೇದಿಸಿರುವ ಜಿಲ್ಲಾ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ವಸಂತ ಕುಮಾರಿಯನ್ನು ಪ್ರೀತಿಸಿ ಮದುವೆಯಾದವನ ಸಹೋದರನಿಂದಲೇ ಮೂರು ಜನರ ಕೊಲೆಯಾಗಿರುವುದು ಗೊತ್ತಾಗಿದೆ.
ವಸಂತಕುಮಾರಿ ಆರೀಫ್ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆರೀಫ್ ಸಹೋದರ ಆಸೀಫ್ನಿಗೆ ಇದರಿಂದ ಅಸೂಯೆ ಉಂಟಾಗಿತ್ತು. ಜೊತೆಗೆ ವಸಂತ ಕುಮಾರಿಯಿಂದಾಗಿ ಆರೀಫ್ ಮನೆಯಲ್ಲಿ ಮನಸ್ತಾಪವಾಗುತ್ತಿತ್ತು. ಇದೇ ಕಾರಣಕ್ಕೆ ಆಸೀಫ್ ವಸಂತಕುಮಾರಿಯನ್ನ ಗೋಡೆಗೆ ನೂಕಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸೋಮವಾರ ಸಂಜೆ ವಸಂತಕುಮಾರಿ ಬರುವ ಮುನ್ನ ಆಕೆ ತಾಯಿ ರಾಜೇಶ್ವರಿ ಹಾಗೂ ಮಗು ಧರ್ಮತೇಜ್ರನ್ನು ಆಸೀಫ್ ಕೊಲೆ ಮಾಡಿದ್ದ ಎಂದು ಎಸ್ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.