ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ 79,770 ಕೋಟಿ ರೂ.ನಷ್ಟ: ಸಿದ್ದರಾಮಯ್ಯ ಪ್ರತಿಪಾದನೆ - 16ನೇ ಹಣಕಾಸು ಆಯೋಗದಿಂದ ಹೆಚ್ಚಿನ ನೆರವಿನ ಆಶಾಭಾವನೆ - Finance Commission Meeting

ಪ್ರಾದೇಶಿಕ ಅಸಮಾನತೆಯ ನಿವಾರಣೆಗಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (IANS)

By PTI

Published : Aug 29, 2024, 1:44 PM IST

ಬೆಂಗಳೂರು: ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಾದೇಶಿಕ ಅಸಮತೋಲನ ಮತ್ತು ನಗರೀಕರಣದ ಸವಾಲುಗಳನ್ನು ಎದುರಿಸುತ್ತಿರುವ ಕರ್ನಾಟಕಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಪ್ರತಿಪಾದಿಸಿದ್ದಾರೆ.

16ನೇ ಹಣಕಾಸು ಆಯೋಗದ ಸಭೆಯಲ್ಲಿ, ಆಯೋಗದ ಅಧ್ಯಕ್ಷ ಅರವಿಂದ್ ಪನಗರಿಯಾ ಮತ್ತು ಅದರ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿಗೆ 55,586 ಕೋಟಿ ರೂ.ಗಳ ಹಣಕಾಸು ಅಗತ್ಯವಿದೆ. ಇದರಲ್ಲಿ 27,793 ಕೋಟಿ ರೂ.ಗಳಷ್ಟು ಅನುದಾನ ನೀಡುವಂತೆ ರಾಜ್ಯವು ಕೇಂದ್ರಕ್ಕೆ ಕೋರಿದೆ ಎಂದು ಹೇಳಿದರು.

ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದ ಸಮಾನ ಅಭಿವೃದ್ಧಿಗಾಗಿ ರಾಜ್ಯವು 25,000 ಕೋಟಿ ರೂ.ಗಳನ್ನು ವ್ಯಯ ಮಾಡುತ್ತಿದ್ದು, ಇದಕ್ಕಾಗಿ 16ನೇ ಹಣಕಾಸು ಆಯೋಗದಿಂದ ಐದು ವರ್ಷಗಳಲ್ಲಿ 25,000 ಕೋಟಿ ರೂ.ಗಳ ಸಮಾನ ಅನುದಾನವನ್ನು ಕೋರಿದೆ. ಪಶ್ಚಿಮ ಘಟ್ಟಗಳಲ್ಲಿ ವಿಪತ್ತು ತಗ್ಗಿಸುವಿಕೆ ಮತ್ತು ಸಕಾಲಿಕ ಪರಿಹಾರ ಮತ್ತು ಪುನರ್ವಸತಿ ಕ್ರಮಗಳಿಗಾಗಿ ರಾಜ್ಯವು ಕೇಂದ್ರದಿಂದ 10,000 ಕೋಟಿ ರೂ.ಗಳ ಅನುದಾನವನ್ನು ಕೋರಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಈ ಶಿಫಾರಸು ಸ್ವೀಕರಿಸದ ಕೇಂದ್ರ, ಸಿಎಂ ಆರೋಪ:15 ನೇ ಹಣಕಾಸು ಆಯೋಗದ ತೀರ್ಪು ಕರ್ನಾಟಕದ ಪಾಲನ್ನು 4.713 ರಿಂದ 3.647 ಕ್ಕೆ ತೀವ್ರವಾಗಿ ಕಡಿಮೆ ಮಾಡಿದೆ. ಇದು 2021-26 ರಿಂದ ಐದು ವರ್ಷಗಳ ಅವಧಿಯಲ್ಲಿ 68,275 ಕೋಟಿ ರೂ.ಗಳ ನಷ್ಟಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಕರ್ನಾಟಕದ ಅನುದಾನ ಪ್ರಮಾಣವನ್ನು ತೀವ್ರವಾಗಿ ಕಡಿತ ಮಾಡಿರುವದರ ಬಗ್ಗೆ ಹಣಕಾಸು ಆಯೋಗವು ಜಾಗೃತವಾಗಿದೆ ಮತ್ತು 11,495 ಕೋಟಿ ರೂ.ಗಳ ರಾಜ್ಯ ನಿರ್ದಿಷ್ಟ ಅನುದಾನ ನೀಡುವಂತೆ ಶಿಫಾರಸು ಮಾಡಿದೆ. ಆದರೆ ಭಾರತ ಸರ್ಕಾರವು ಈ ಶಿಫಾರಸನ್ನು ಸ್ವೀಕರಿಸಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

"ಹೀಗಾಗಿ ಕರ್ನಾಟಕವು ಈ ಅನುದಾನಗಳಿಂದ ವಂಚಿತವಾಗಿದೆ. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಒಟ್ಟು 79,770 ಕೋಟಿ ರೂ.ಗಳ ನಷ್ಟವಾಗಿದೆ" ಎಂದು ಸಿದ್ದರಾಮಯ್ಯ ಹೇಳಿದರು. 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಬರಬೇಕಿದ್ದ ವರ್ಷಕ್ಕೆ 35,000-40,000 ಕೋಟಿ ರೂ.ಗಳ ಆದಾಯವನ್ನು ಇತರ ರಾಜ್ಯಗಳಿಗೆ ವರ್ಗಾಯಿಸಲಾಗಿದೆ. ಇದು ಅದರ ಜಿಎಸ್​ಡಿಪಿಯ 1.8 ಪ್ರತಿಶತದಷ್ಟಿದೆ ಎಂದು ಅವರು ಹೇಳಿದರು.

ಕೇಂದ್ರದಿಂದ ಸಿಗುವ ಅನುದಾನದ ಅಸಮತೋಲನದಿಂದಾಗಿ ಕರ್ನಾಟಕ ಮತ್ತು ಅದೇ ರೀತಿಯ ಸ್ಥಾನದಲ್ಲಿರುವ ರಾಜ್ಯಗಳು ಆರ್ಥಿಕವಾಗಿ ಮತ್ತು ಜನಸಂಖ್ಯಾಶಾಸ್ತ್ರದಲ್ಲಿ ಉತ್ತಮ ಕೆಲಸ ಮಾಡಿದರೂ, ಅದಕ್ಕಾಗಿಯೇ ಬೆಲೆ ತೆರುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಇದನ್ನೂ ಓದಿ : ತಿರುಪತಿ ದೇವಸ್ಥಾನದ ಪ್ರಸಾದಕ್ಕೆ ನಂದಿನಿ ತುಪ್ಪ ಸರಬರಾಜು: ತುಪ್ಪದ ಟ್ಯಾಂಕರ್​ಗೆ ಸಿಎಂ ಸಿದ್ದರಾಮಯ್ಯ ಚಾಲನೆ - Nandini Ghee for Tirupati

ABOUT THE AUTHOR

...view details