ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ಪಹಣಿಯಲ್ಲಿ ಆಯಾ ದೇವಸ್ಥಾನಗಳ ಹೆಸರಿಗೆ ಒಟ್ಟು 15,413.17 ಎಕರೆ ಜಾಗದ ಖಾತೆ ಬದಲಾವಣೆ ಮಾಡಲಾಗಿದೆ.
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಕಂದಾಯ ಇಲಾಖೆಗೆ ಮಾಡಿ ಆಯಾ ದೇವಸ್ಥಾನಗಳ ಹೆಸರಿಗೆ ಪಹಣಿ ಬದಲಾಯಿಸಲು ಸೂಚಿಸಿದ್ದರು. ಅದರಂತೆ ಒಟ್ಟು 15,413.17 ಎಕರೆ ಜಾಗವನ್ನು ಆಯಾ ದೇವಸ್ಥಾನದ ಹೆಸರಿಗೆ ಖಾತೆ ಇಂಡೀಕರಣ ಮಾಡಲಾಗಿದೆ.
ಬೆಳಗಾವಿ, ವಿಜಯಪುರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಯಚೂರು ಜಿಲ್ಲೆಗಳ ಮಾಹಿತಿಯನ್ನು ತಹಶೀಲ್ದಾರ್ಗಳಿಂದ ಪಡೆದುಕೊಂಡು ನಮೂದಿಸಲಾಗಿದೆ. ಕೊಡಗು, ರಾಮನಗರ, ಯಾದಗಿರಿ, ಉಡುಪಿ, ಧಾರವಾಡ , ಕೋಲಾರ ಜಿಲ್ಲೆಗಳಲ್ಲಿ ಮುಜರಾಯಿ ದೇವಾಲಯಗಳ ವಿವಿಧ ಸರ್ವೇ ನಂಬರ್ಗಳಲ್ಲಿ ಗ್ರಾಮ ಠಾಣೆ ಹೊಂದಿರುವ ಆಸ್ತಿಗಳ ವಿವರ, ಸಮೀಕ್ಷೆ, ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಬೀದರ್ ಜಿಲ್ಲೆಯ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಅಳತೆ ಆಗಿರುವ ದೇವಾಲಯಗಳ ಒಟ್ಟು ಸರ್ವೆ ನಂಬರ್ಗಳು ಹಾಗೂ ಜಮೀನಿನ ಮಾಹಿತಿ ನಮೂದಿಸಲಾಗಿದೆ.
ಜಿಲ್ಲಾವಾರು ಇಂಡೀಕರಣ ಮಾಡಲಾದ ವಿವರ:
ಬೆಳಗಾವಿ ಜಿಲ್ಲೆ:
ಒಟ್ಟು 243 ಸರ್ವೆ ನಂಬರ್ಗಳು
868 ಎಕರೆ 36 ಗುಂಟೆ
ಬಾಗಲಕೋಟೆ ಜಿಲ್ಲೆ:
ಎರಡು ಸರ್ವೆ ನಂಬರ್ಗಳು
8 ಎಕರೆ 37 ಗುಂಟೆ
ಕಲಬುರಗಿ ಜಿಲ್ಲೆ:
286 ಸರ್ವೆ ನಂಬರ್ಗಳು
1172 ಎಕರೆ 13 ಗುಂಟೆ
ಬೀದರ್ ಜಿಲ್ಲೆ:
250 ಸರ್ವೆ ನಂಬರ್ಗಳು
446 ಎಕರೆ 11 ಗುಂಟೆ
ಗದಗ ಜಿಲ್ಲೆ:
34 ಸರ್ವೆ ನಂಬರ್ಗಳು
613 ಎಕರೆ 13 ಗುಂಟೆ
ಧಾರವಾಡ ಜಿಲ್ಲೆ:
ಒಂದು ಸರ್ವೆ ನಂಬರ್
7 ಎಕರೆ 22 ಗುಂಟೆ
ಉತ್ತರ ಕನ್ನಡ ಜಿಲ್ಲೆ:
345 ಸರ್ವೆ ನಂಬರ್ಗಳು
372 ಎಕರೆ 22 ಗುಂಟೆ
ಹಾವೇರಿ ಜಿಲ್ಲೆ:
329 ಸರ್ವೆ ನಂಬರ್ಗಳು
758 ಎಕರೆ
ಬಳ್ಳಾರಿ ಜಿಲ್ಲೆ:
13 ಸರ್ವೆ ನಂಬರ್ಗಳು
50 ಎಕರೆ 38.8 ಗುಂಟೆ
ಚಿತ್ರದುರ್ಗ ಜಿಲ್ಲೆ:
10 ಸರ್ವೆ ನಂಬರ್ಗಳು
86 ಎಕರೆ 24 ಗುಂಟೆ
ದಾವಣಗೆರೆ ಜಿಲ್ಲೆ:
9 ಸರ್ವೆ ನಂಬರ್ಗಳು
18 ಎಕರೆ 11 ಗುಂಟೆ
ಶಿವಮೊಗ್ಗ ಜಿಲ್ಲೆ:
156 ಸರ್ವೆ ನಂಬರ್ಗಳು
552 ಎಕರೆ 7.08 ಗುಂಟೆ