ಕರ್ನಾಟಕ

karnataka

ETV Bharat / state

ದಾವಣಗೆರೆ ಕಲ್ಲು ತೂರಾಟ ಪ್ರಕರಣ: 18 ಮಂದಿ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ - Davanagere Stone Pelting Case - DAVANAGERE STONE PELTING CASE

ಕಲ್ಲು ತೂರಾಟ ಪ್ರಕರಣ ಸಂಬಂಧ ದಾವಣಗೆರೆ ಪೊಲೀಸರು 18 ಜನ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

davangere stone pelting
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Sep 20, 2024, 3:55 PM IST

ದಾವಣಗೆರೆ:ಗಣೇಶ ನಿಮಜ್ಜನ ಮೆರವಣಿಗೆ ವೇಳೆ ನಗರದಬೇತೂರು ರಸ್ತೆ, ಅರಳಿಮರ ವೃತ್ತ ಬಳಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ 18 ಮಂದಿ ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಗುರುವಾರ ಸಂಜೆ ನಡೆದ ಘಟನೆ ಸಂಬಂಧ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದರು. ಆರೋಪಿಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಧೀಶರ ಮನೆಗೆ ಕರೆತರಲಾಗಿತ್ತು. ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್​ನಲ್ಲಿರುವ ನ್ಯಾಯಾಧೀಶರಾದ ಪ್ರಶಾಂತ್ ಅವರ ನಿವಾಸಕ್ಕೆ ಆರೋಪಿಗಳನ್ನು ಕರೆತಂದು ಹಾಜರುಪಡಿಸಲಾಯಿತು.

ಘಟನೆ ಬಗ್ಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಆರ್. ಮಾಹಿತಿ (ETV Bharat)

ಘಟನೆ ಬಗ್ಗೆ ಎಡಿಜಿಪಿ ಹೇಳಿದ್ದೇನು?:''ಗಣೇಶನ ಮೆರವಣಿಗೆ ವೇಳೆ ಕಲ್ಲು ತೂರಾಟ ಆಗಿದೆ. ಇದು ಪ್ರಚೋದನಾತ್ಮಕ ಭಾಷಣದಿಂದ ಈ ಘಟನೆ ನಡೆದಿದೆ. ಈಗಾಗಲೇ ತನಿಖೆ ನಡೆಯುತ್ತಿದೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ‌‌'' ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಆರ್. ಮಾಹಿತಿ ನೀಡಿದರು.

ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು, ''ಆರೋಪಿಗಳ ಪತ್ತೆ ಮಾಡಲು ಸಿಸಿಟಿವಿ, ಮೊಬೈಲ್ ವಿಡಿಯೋ ಪರಿಶೀಲನೆ ನಡೆಸುತ್ತಿದ್ದೇವೆ. ಖಾಲಿ ಬಿಯರ್ ಬಾಟಲ್ ನಮಗೆ ಕಂಡು ಬಂದಿಲ್ಲ, ಯಾರು ಬಿಯರ್ ಬಾಟಲ್ ತಂದಿದ್ದಾರೆಯೋ ಅದರ ಸಿಸಿಟಿವಿ ಫುಟೇಜ್ ಇದೆ. ಅದನ್ನು ಪರಿಶೀಲಿಸುತ್ತಿದ್ದೇವೆ‌'' ಎಂದರು.

''ಪ್ರಚೋದನಾತ್ಮಕ ಭಾಷಣ ಮಾಡಿದ್ದಕ್ಕಾಗಿ ಒಬ್ಬ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ನಡೆಸುತ್ತಿದ್ದು, ಕ್ರಮ ತೆಗೆದುಕೊಳ್ಳುತ್ತೇವೆ. ಘಟನೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಗಾಯಳಾಗಿರುವ ಮಾಹಿತಿ ಇಲ್ಲ. ವ್ಯಕ್ತಿಯೊಬ್ಬರು ತಮ್ಮ ಮೇಲೆ ಕೆಲವರಿಂದ ಹಲ್ಲೆ ನಡೆದಿರುವ ಬಗ್ಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಿದೆ. ದೂರುಗಳ ಆಧಾರದ ಮೇಲೆ ಎರಡು ಪ್ರಕರಣ ಹಾಗೂ ಎರಡು ಸುಮೋಟೊ ಕೇಸ್ ಸೇರಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ'' ಎಂದು ಎಡಿಜಿಪಿ ತಿಳಿಸಿದರು.

''ಸದ್ಯ ಅರಳಿಮರ ವೃತ್ತ ಶಾಂತಿಯುತವಾಗಿದೆ. ದಾವಣಗೆರೆ ನಗರದಲ್ಲಿರುವ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲು ಸೂಚಿಸಿದ್ದೇವೆ. ಹಿಂದೂ ಮಹಾಗಣಪತಿ ನಿಮಜ್ಜನವು ಮುಂದಿನ ತಿಂಗಳು 5ರಂದು ನಡೆಯಲಿದೆ. ಅಂದು ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲು ಕ್ರಮ ವಹಿಸಲಾಗುವುದು. ಪ್ರಚೋದನಾತ್ಮಕ ಭಾಷಣ ಹಾಗೂ ಕಲ್ಲು ತೂರಾಟದಿಂದ ಜನರ ಮನಸ್ಸು ಸರಿ ಇಲ್ಲ. ಈ ಗಲಾಟೆಗೆ ಹೊರಗಿನಿಂದ ಯಾರೂ ಬಂದಿಲ್ಲ. ಎರಡು ಕಡೆಯ ಮುಖಂಡರೊಂದಿಗೆ ಶಾಂತಿ ಸಭೆ ಮಾಡುತ್ತೇವೆ‌. ಕೆಲವು ಕಡೆ ಶಾಂತಿ ಸಭೆಗಳು ಸಫಲವಾಗಿವೆ'' ಎಂದು ಎಡಿಜಿಪಿ ಹಿತೇಂದ್ರ ಆರ್. ಮಾಹಿತಿ ನೀಡಿದರು.

ಇದನ್ನೂ ಓದಿ:ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 30 ಆರೋಪಿಗಳು ಅರೆಸ್ಟ್, ದಾವಣಗೆರೆ ಶಾಂತ - Davanagere Stone Pelting Case

ABOUT THE AUTHOR

...view details