ಬೆಳಗಾವಿ:ಕುಂದಾನಗರಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿ ಮತಬೇಟಿ ನಡೆಸಿದರು. ಸಮಾವೇಶದ ವೇದಿಕೆಗೆ ಮೋದಿ ಆಗಮನಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪತ್ನಿ ಹಾಗೂ ಸೊಸೆಯಂದಿರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದರು.
ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಮಾತನಾಡಿ, "ಮೋದಿ ಅವರು ಬರುತ್ತಿರುವುದು ಮತ್ತು ಲಕ್ಷಾಂತರ ಜನ ಸೇರಿದ್ದು ತುಂಬಾ ಖುಷಿ ತಂದಿದೆ. ಪ್ರಧಾನಿಗೆ ಆತ್ಮೀಯ ಸ್ವಾಗತ ಕೋರುತ್ತೇವೆ. ನಾವು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂಬುದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ" ಎಂದರು.
ಸೊಸೆ ಶ್ರದ್ಧಾ ಶೆಟ್ಟರ್ ಮಾತನಾಡಿ, "ಜನರ ಅಭಿಮಾನ ಕಂಡು ತುಂಬಾ ಸಂತೋಷವಾಗುತ್ತಿದೆ. ಇವತ್ತೇ ನಾವು ಗೆಲುವು ಸಾಧಿಸಿದ್ದೇವೆ ಎಂದು ನಮಗನ್ನಿಸುತ್ತಿದೆ. ನಾನು ಕೂಡ ಮೋದಿ ಅವರನ್ನು ನೋಡಲು ಕಾತುರಳಾಗಿದ್ದೇನೆ. ಹಿಂದೆಯೂ ಜನ ನಮ್ಮ ಕೈ ಹಿಡಿದಿದ್ದಾರೆ, ಈ ಬಾರಿಯೂ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು.