ಕರ್ನಾಟಕ

karnataka

ETV Bharat / state

ಅಂತರ್‌ರಾಜ್ಯ ಕಳ್ಳರ ಬಂಧನ: ₹22 ಲಕ್ಷ ಮೌಲ್ಯದ 26 ದ್ವಿಚಕ್ರ ವಾಹನ​ ವಶಕ್ಕೆ - INTERSTATE BIKE THIEVES ARRESTED

ಎರಡು ಪ್ರಕರಣಗಳಲ್ಲಿ ಇಬ್ಬರು ಅಂತರ್‌ರಾಜ್ಯ ಬೈಕ್​ ಕಳ್ಳರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

Interstate bike thieves arrested
ಅಂತರ್‌ರಾಜ್ಯ ಬೈಕ್​ ಕಳ್ಳರ ಬಂಧನ (ETV Bharat)

By ETV Bharat Karnataka Team

Published : Jan 10, 2025, 12:16 PM IST

Updated : Jan 10, 2025, 12:31 PM IST

ಚಿಕ್ಕಬಳ್ಳಾಪುರ:ಅಂತರ್‌ರಾಜ್ಯ ಬೈಕ್‌ ಕಳ್ಳರನ್ನು ಬಂಧಿಸಿರುವ ಚಿಕ್ಕಬಳ್ಳಾಪುರ ಪೊಲೀಸರು, 22 ಲಕ್ಷ ರೂ ಮೌಲ್ಯದ 24 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಆರೋಪಿ ಹಿಂದೂಪುರದ ಮನೋಜ್ ಕುಮಾರ್ ಎಂಬಾತನಿಂದ 14 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿಂದೂಪುರದ ಜಮೀರ್ ಹಾಗೂ ಪೆನುಗೊಂಡದ ಬೋಯಾ ಹರೀಶ್ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಎಸ್ಪಿ ಕುಶಾಲ್ ಚೌಕ್ಸೆ ಮಾಹಿತಿ (ETV Bharat)

ಮತ್ತೊಂದು ಪ್ರಕರಣದಲ್ಲಿ, ಬಂಗಾರಪೇಟೆಯ ಬಂಗಾರಪ್ಪ ಬಂಧಿತ ಆರೋಪಿ. ಈತನಿಂದ 12 ಲಕ್ಷ ರೂ ಮೌಲ್ಯದ 12 ಬೈಕ್​ಗಳನ್ನು ಚಿಂತಾಮಣಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಡಿ.28ರಂದು ಶಿವಕುಮಾರ್ ಎಂಬವರು ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ತಮ್ಮ ಬೈಕ್ ನಿಲ್ಲಿಸಿ ಬೆಂಗಳೂರಿಗೆ ಹೋಗಿದ್ದರು. ಆದರೆ, ಹಿಂತಿರುಗಿದಾಗ ನಾಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು.

ಕಳ್ಳರಿಂದ ವಶಪಡಿಸಿಕೊಂಡ ಬೈಕ್​ಗಳು (ETV Bharat)

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸೇಟ್ ದಿನ್ನೇ ಬಳಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಆರೋಪಿ ಮನೋಜ್​ ಕುಮಾರ್​ನನ್ನು ವಿಚಾರಣೆ ನಡೆಸಿದಾಗ, ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಬೆಂಗಳೂರು ನಗರ ಮತ್ತು ಹಿಂದೂಪುರ ಮುಂತಾದೆಡೆಗಳಲ್ಲಿ ಕದ್ದಿದ್ದ 10 ಲಕ್ಷ ರೂ.ಗೂ ಅಧಿಕ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

ಇದನ್ನೂ ಓದಿ:ಸಾಲ ತೀರಿಸಲು ತಂದೆಯ ಹೆಸರಲ್ಲಿ ಎರಡು ವಿಮೆ ಮಾಡಿಸಿ ಕೊಲ್ಲಿಸಿದ ಪುತ್ರ: ನಾಲ್ವರ ಬಂಧನ

Last Updated : Jan 10, 2025, 12:31 PM IST

ABOUT THE AUTHOR

...view details