ಕರ್ನಾಟಕ

karnataka

ETV Bharat / state

ಭಾರತೀಯ ರೈಲ್ವೆಯ 150ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನವರಾತ್ರಿ ವಿಶೇಷ ಥಾಲಿ ಊಟ ಪ್ರಾರಂಭ - NAVARATRI SPECIAL THALI

ನವರಾತ್ರಿ ವ್ರತದ ಅಂಗವಾಗಿ ವಿಶೇಷ ಥಾಲಿಯನ್ನು ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್​ಸೈಟ್​ನಲ್ಲಿ ಆನ್​ಲೈನ್ ಮೂಲಕ ಆರ್ಡರ್ ಮಾಡಬಹುದು.

Indian Railways has started Navaratri special thali meal
ನವರಾತ್ರಿ ವಿಶೇಷ ಥಾಲಿ ಊಟ ಪ್ರಾರಂಭ (ETV Bharat)

By ETV Bharat Karnataka Team

Published : Oct 9, 2024, 12:02 PM IST

Updated : Oct 9, 2024, 1:03 PM IST

ಹುಬ್ಬಳ್ಳಿ:ಭಾರತೀಯ ರೈಲ್ವೆ 150ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ನವರಾತ್ರಿ ವ್ರತ ವಿಶೇಷ ಥಾಲಿ ಊಟ ಪ್ರಾರಂಭಿಸಿದೆ. ನವರಾತ್ರಿ ಹಬ್ಬದ ಋತುವಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ಅನುಕೂಲವಾಗಲಿದೆ. ಪ್ರಯಾಣಿಕರು ಈ ರುಚಿಕರವಾದ ನವರಾತ್ರಿ ವ್ರತ ವಿಶೇಷ ಥಾಲಿಯನ್ನು ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್​ಸೈಟ್​ನಲ್ಲಿ, ಆನ್​ಲೈನ್ ಮೂಲಕ ಆರ್ಡರ್ ಮಾಡಬಹುದು ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವರಾತ್ರಿ ವ್ರತವನ್ನು ಆಚರಿಸುವ ಪ್ರಯಾಣಿಕರು ಆಹಾರ ಮತ್ತು ಪಾನೀಯಗಳಿಗೆ ಸಂಬಂಧಿಸಿದಂತೆ ವಿವಿಧ ಸವಾಲುಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ಪರಿಹರಿಸಲು, ಭಾರತೀಯ ರೈಲ್ವೆ ಮುಂಬೈ ಸೆಂಟ್ರಲ್, ದೆಹಲಿ ಜಂಕ್ಷನ್, ಸೂರತ್, ಜೈಪುರ, ಲಕ್ನೋ, ಪಾಟ್ನಾ ಜಂಕ್ಷನ್, ಲುಧಿಯಾನ, ದುರ್ಗ್, ಚೆನ್ನೈ ಸೆಂಟ್ರಲ್, ಸಿಕಂದರಾಬಾದ್, ಅಮರಾವತಿ, ಹೈದರಾಬಾದ್, ತಿರುಪತಿ, ಜಲಂಧರ್ ಸಿಟಿ, ಉದಯಪುರ ಸಿಟಿ, ಬೆಂಗಳೂರು ಕಂಟೋನ್ಮೆಂಟ್, ನವದೆಹಲಿ, ಥಾಣೆ, ಪುಣೆ, ಮಂಗಳೂರು ಸೆಂಟ್ರಲ್ ನಿಲ್ದಾಣ ಸೇರಿದಂತೆ 150ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನವರಾತ್ರಿ ವಿಶೇಷ ಥಾಲಿಯನ್ನು ಪರಿಚಯಿಸಿದೆ.

ಐಆರ್​ಸಿಟಿಸಿ ಪೋಸ್ಟರ್​ (IRCTC)

ನವರಾತ್ರಿಯ ಸಾರವನ್ನು ಗೌರವಿಸುವ ವ್ರತ ಥಾಲಿ ತಯಾರಿಕೆಯಲ್ಲಿ ಗುಣಮಟ್ಟ ಮತ್ತು ಪೌಷ್ಠಿಕಾಂಶವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಕಾಳಜಿ ವಹಿಸಲಾಗಿದೆ. ಐಆರ್​ಸಿಟಿಸಿ ಅಪ್ಲಿಕೇಶನ್​ನಲ್ಲಿ ತಮ್ಮ ಪಿಎನ್ಆರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಅಥವಾ ಐಆರ್​ಸಿಟಿಸಿ ಇ-ಕ್ಯಾಟರಿಂಗ್ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಪ್ರಯಾಣಿಕರು ತಮ್ಮ ಥಾಲಿಯನ್ನು ಸುಲಭವಾಗಿ ಕಾಯ್ದಿರಿಸಬಹುದಾಗಿದೆ‌.

ಇದನ್ನೂ ಓದಿ:ದಸರಾ: ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರ ಆರಂಭ

Last Updated : Oct 9, 2024, 1:03 PM IST

ABOUT THE AUTHOR

...view details