ಬೆಂಗಳೂರು: ಹೈದರಾಬಾದ್ ಮೂಲದ ಫುಡ್ ಸಂಸ್ಥೆಯೊಂದರ ಶಾಖೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೇಘನಾ ಫುಡ್ಸ್ ಗ್ರೂಪ್ ಒಡೆತನದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ಕೋರಮಂಗಲ, ಇಂದಿರಾನಗರ, ಜಯನಗರದಲ್ಲಿರುವ ಮೇಘನಾ ಫುಡ್ಸ್ ಶಾಖೆಗಳು ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಪರಿಶೀಲನೆ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ, ದಾಖಲೆಗಳ ಪರಿಶೀಲನೆ - IT Raid
ಬೆಂಗಳೂರಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು 10ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
![ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ, ದಾಖಲೆಗಳ ಪರಿಶೀಲನೆ Etv Bharat](https://etvbharatimages.akamaized.net/etvbharat/prod-images/19-03-2024/1200-675-21019660-thumbnail-16x9-newsd.jpg)
Etv Bharat
Published : Mar 19, 2024, 10:44 AM IST
|Updated : Mar 19, 2024, 12:09 PM IST
ಮೇಘನಾ ಫುಡ್ಸ್ ಕಂಪನಿ ನಗರದ ವಿವಿಧೆಡೆ ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ನಡೆಸುತ್ತಿದೆ. ಕರ್ನಾಟಕ ಮತ್ತು ಗೋವಾ ವಿಭಾಗದ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೆಂಗಳೂರು: ಸಿಐಡಿಯಿಂದ ತನಿಖೆ ನಡೆಸಲ್ಪಟ್ಟ ಮೂರು ಪ್ರಕರಣಗಳಿಗೆ ಒಂದೇ ವಾರದಲ್ಲಿ ಶಿಕ್ಷೆ ಪ್ರಕಟ
Last Updated : Mar 19, 2024, 12:09 PM IST