ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಭಾರಿ ಪ್ರಮಾಣದ ದುಡ್ಡು ಪತ್ತೆ ಪ್ರಕರಣದ ತನಿಖೆ ಪೂರ್ಣ: ಹಣ ಬ್ಯಾಂಕ್​ಗೆ ಶಿಫ್ಟ್ - Cash Found - CASH FOUND

ಧಾರವಾಡದಲ್ಲಿ ಭಾರಿ ಮೊತ್ತದ ಹಣ ಪತ್ತೆ ಪ್ರಕರಣ ಸಂಬಂಧಿಸಿದಂತೆ ಐಟಿ ಅಧಿಕಾರಿಗಳ ತನಿಖೆ ಪೂರ್ಣಗೊಂಡಿದ್ದು, ಹಣವನ್ನು ಹುಬ್ಬಳ್ಳಿಯ ಕೇಶ್ವಾಪುರದ ಎಸ್‌ಬಿಐ ಶಾಖೆಗೆ ವರ್ಗಾಯಿಸಲಾಗಿದೆ.

ಧಾರವಾಡದಲ್ಲಿ ₹18 ಕೋಟಿ ರೂ ಪತ್ತೆ ಪ್ರಕರಣದ ತನಿಖೆ ಪೂರ್ಣ: 18 ಬ್ಯಾಗ್‌ಗಳಲ್ಲಿ ಹಣ ಬ್ಯಾಂಕ್​ಗೆ ಶಿಫ್ಟ್
ಧಾರವಾಡದಲ್ಲಿ ₹18 ಕೋಟಿ ರೂ ಪತ್ತೆ ಪ್ರಕರಣದ ತನಿಖೆ ಪೂರ್ಣ: 18 ಬ್ಯಾಗ್‌ಗಳಲ್ಲಿ ಹಣ ಬ್ಯಾಂಕ್​ಗೆ ಶಿಫ್ಟ್

By ETV Bharat Karnataka Team

Published : Apr 17, 2024, 3:24 PM IST

Updated : Apr 17, 2024, 7:13 PM IST

ಧಾರವಾಡದಲ್ಲಿ ಭಾರಿ ಪ್ರಮಾಣದ ದುಡ್ಡು ಪತ್ತೆ ಪ್ರಕರಣದ ತನಿಖೆ ಪೂರ್ಣ: ಹಣ ಬ್ಯಾಂಕ್​ಗೆ ಶಿಫ್ಟ್

ಧಾರವಾಡ: ನಗರದ ಖಾಸಗಿ ನಿವಾಸವೊಂದರಲ್ಲಿ ಭಾರಿ ಪ್ರಮಾಣದ ಹಣ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳ ತನಿಖೆ ಪೂರ್ಣಗೊಂಡಿದೆ. 18 ಬ್ಯಾಗ್‌ಗಳಲ್ಲಿ ಹಣವನ್ನು ಹುಬ್ಬಳ್ಳಿ ಕೇಶ್ವಾಪುರದ ಎಸ್‌ಬಿಐ ಶಾಖೆಗೆ ವರ್ಗಾಯಿಸಲಾಗಿದೆ.

ಈ ಮನೆ ಮೇಲೆ ಅಧಿಕಾರಿಗಳಿಂದ ಮಂಗಳವಾರ ಸಂಜೆ ದಾಳಿ ನಡೆದಿತ್ತು. ಮನೆಯಲ್ಲಿ ಮದ್ಯ ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಚುನಾವಣಾ ಕ್ಷಿಪ್ರ ಕಾರ್ಯಪಡೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮದ್ಯ ಹುಡುಕಾಡುವಾಗ ತಿಜೋರಿಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು.

ಅಪಾರ ಹಣ ಪತ್ತೆಯಾದ ಹಿನ್ನೆಲೆ ಐಟಿ ಇಲಾಖೆಗೆ ಪ್ರಕರಣ ವರ್ಗಾಯಿಸಲಾಗಿತ್ತು. ಮಂಗಳವಾರ ರಾತ್ರಿ ಪ್ರಕರಣವನ್ನು ತಮ್ಮ ಸುಪರ್ದಿಗೆ ಪಡೆದ ಐಟಿ ಅಧಿಕಾರಿಗಳು, ಹಣ ಎಣಿಕೆ ಮಾಡಿ, ಬ್ಯಾಗ್​ಗಳಲ್ಲಿ ದುಡ್ಡನ್ನು ಬ್ಯಾಂಕ್​ಗೆ ರವಾನೆ ಮಾಡಿದ್ದಾರೆ. ರಾತ್ರಿಯಿಡಿ ಐಟಿ ಅಧಿಕಾರಿಗಳು ಮನೆಯ ಮಾಲೀಕರನ್ನು ವಿಚಾರಣೆಗೊಳಪಡಿಸಿದ್ದರು. ಈ ವ್ಯಕ್ತಿ ಖಾಸಗಿ ಕನ್​​ಸ್ಟ್ರಕ್ಷನ್ ಕಂಪನಿಯಲ್ಲಿ ಅಕೌಂಟೆಂಟ್ ಎಂದು ಹೇಳಿಕೊಂಡಿದ್ದರು. ಈ ಹಿನ್ನೆಲೆ ಕಂಪನಿ ಕಚೇರಿಯನ್ನು ಸಹ ಐಟಿ ಅಧಿಕಾರಿಗಳು ಜಾಲಾಡಿದ್ದರು. ಈ ವ್ಯಕ್ತಿಯ ನಿವಾಸದ ಸಮೀಪದಲ್ಲೇ ಇದ್ದ ‌ಕಚೇರಿಯಲ್ಲಿ ಸಹ ಪರಿಶೀಲನೆ ಮಾಡಲಾಗಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಐಟಿ ತನಿಖೆ ಪೂರ್ಣಗೊಂಡಿದೆ.

ಇದನ್ನೂ ಓದಿ:ಅನುಮತಿ ಇಲ್ಲದ ವಾಹನದಲ್ಲಿ75 ಲಕ್ಷ ರೂ ಹಣ ಸಾಗಣೆ: ಮೋಟೆಬೆನ್ನೂರು ಚೆಕ್​ಪೋಸ್ಟ್​ನಲ್ಲಿ ವಶ - Seized 75 lakh money

Last Updated : Apr 17, 2024, 7:13 PM IST

ABOUT THE AUTHOR

...view details