ಕರ್ನಾಟಕ

karnataka

ETV Bharat / state

ಬಿಜೆಪಿ ಸತ್ಯಶೋಧನಾ ಸಮಿತಿ ವರದಿಯಲ್ಲಿ ಸತ್ಯ ಇದ್ದರೆ ಗಮನಿಸುತ್ತೇವೆ: ಗೃಹ ಸಚಿವ ಜಿ. ಪರಮೇಶ್ವರ್ - Dr G Parameshwar

ಬಿಜೆಪಿಯವರ ಸತ್ಯಶೋಧನಾ ಸಮಿತಿ ಸತ್ಯಾಂಶವಿರುವ ವರದಿ ನೀಡುವುದಾರೆ, ಅದರಿಂದ ನಮ್ಮ ಪೊಲೀಸ್​ ಇಲಾಖೆಗೂ ಸುಲಭವಾಗಲಿದೆ. ಸತ್ಯಾಂಶ ಇದ್ದರೆ ಅವರ ವರದಿಯನ್ನೂ ಗಮನಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದರು.

Home Minister Dr. G Parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್​ (ETV Bharat)

By ETV Bharat Karnataka Team

Published : Sep 14, 2024, 1:28 PM IST

Updated : Sep 14, 2024, 3:20 PM IST

ಬೆಂಗಳೂರು: "ನಾಗಮಂಗಲ ಘರ್ಷಣೆ ಸಂಬಂಧ ಬಿಜೆಪಿಯ ಸತ್ಯಶೋಧನಾ ಸಮಿತಿ ವರದಿಯಲ್ಲಿ ಸತ್ಯ ಇದ್ದರೆ ಗಮನಿಸುತ್ತೇವೆ" ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್​ (ETV Bharat)

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಬಿಜೆಪಿ ಸತ್ಯಶೋಧನಾ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, "ಮಾಡಲಿ, ಬಿಡಲಿ. ಅವರು ಸತ್ಯಶೋಧನೆ ಮಾಡಿ ತಿಳಿಸಲಿ. ನಮಗೂ ಗೊತ್ತಾಗುತ್ತದೆ. ಸತ್ಯಶೋಧನೆಯಲ್ಲಿ ಸತ್ಯ ಇದ್ರೆ ಗಮನಿಸುತ್ತೇವೆ. ನಮ್ಮ ಪೊಲೀಸರಿಗೂ ಸುಲಭವಾಗುತ್ತದೆ" ಎಂದರು.

ನಾಗಮಂಗಲ ಗದ್ದಲ ಕುರಿತು ಮಾತನಾಡಿ, "ಸದ್ಯಕ್ಕೆ ಶಾಂತಿಯುತವಾಗಿದೆ. ಶಾಂತಿ ಸಭೆ ನಡೆಸಲು ಸೂಚನೆ ಕೊಟ್ಟಿದ್ದೇನೆ. ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ. ಹೆಚ್ಚಿನ ಪೊಲೀಸ್ ಭದ್ರತೆ ಹಾಕಲಾಗಿದೆ" ಎಂದರು.

ಎಫ್​ಐಆರ್ ಮೇಲೆ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿ, "ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡ್ತಾರೆ. ನಾವು ಬೇಕಾದ ರೀತಿ ಮಾಡಲು ಆಗಲ್ಲ. ಕಾನೂನು ಪ್ರಕಾರ ಏನಾಗಬೇಕೋ, ಆಗುತ್ತೆ. ಅದರಲ್ಲಿ‌ ಅನುಮಾನ ಪಡುವುದೇನಿದೆ?" ಎಂದು ಪ್ರಶ್ನಿಸಿದರು.

ಯಾದಗಿರಿಯಲ್ಲಿ ಅತ್ಯಾಚಾರ ದೂರು ನೀಡಿದ್ದಕ್ಕೆ ಬಹಿಷ್ಕಾರ ವಿಚಾರವಾಗಿ ಪ್ರತಿಕ್ರಿಯಿಸಿ, "ಈಗಾಗಲೇ ಈ ಬಗ್ಗೆ ವರದಿ ಕೇಳಿದ್ದೇವೆ. ಅತ್ಯಾಚಾರ ಎಂದು ದೂರು ಕೊಟ್ಟಿದ್ದಾರೆ. ದೂರು ಕೊಟ್ರು ಅಂತ ಊರವರು ಬಹಿಷ್ಕಾರ ಹಾಕಿದ್ದಾರೆ. ಐನೂರು ಜನ ಇರುವ ಗ್ರಾಮ ಅದು. ದಲಿತ ಸಮುದಾಯ ಹೆಚ್ಚು ಇದೆ. ಮಕ್ಕಳಿಗೆ ಪುಸ್ತಕ ತೆಗೆದುಕೊಳ್ಳಲು ಬಿಟ್ಟಿಲ್ಲ. ಊರಿನಲ್ಲಿ ನೀರು ತೆಗೆದುಕೊಳ್ಳಲು ಬಿಟ್ಟಿಲ್ಲ. ಅಧಿಕಾರಿಗಳಿಗೂ ಸೂಚನೆ ಕೊಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ" ಎಂದರು.

ಇದನ್ನೂ ಓದಿ:ನನ್ನ ಸಾಮರ್ಥ್ಯ ರಾಜ್ಯದ ಜನತೆಗೆ ಗೊತ್ತಿದೆ: ಗೃಹ ಸಚಿವ ಪರಮೇಶ್ವರ್​​ - Home Minister Parameshwar

Last Updated : Sep 14, 2024, 3:20 PM IST

ABOUT THE AUTHOR

...view details