ಕರ್ನಾಟಕ

karnataka

ETV Bharat / state

ಜಮೀ‌ರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇನೆ : ಟಿ ಜೆ ಅಬ್ರಹಾಂ ಎಚ್ಚರಿಕೆ - T J Abraham - T J ABRAHAM

ಸಾಮಾಜಿಕ ಕಾರ್ಯಕರ್ತ ಟಿ. ಜೆ ಅಬ್ರಹಾಂ ಅವರು ಸಚಿವ ಜಮೀರ್ ಕುರಿತು ಮಾತನಾಡಿದ್ದಾರೆ. ಜಮೀರ್ ಹೈಕೋರ್ಟ್​ ತೀರ್ಪಿನ ಬಗ್ಗೆ ಮಾತನಾಡುವುದು ಅಂದರೆ ಹುಡುಗಾಟನಾ? ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್​ ದಾಖಲಿಸುವೆ ಎಂದು ಎಚ್ಚರಿಸಿದ್ದಾರೆ.

zameer-ahmed-khan
ಹಿರಿಯ ವಕೀಲ ಟಿ ಜೆ ಅಬ್ರಹಾಂ (ETV Bharat)

By ETV Bharat Karnataka Team

Published : Sep 26, 2024, 7:32 PM IST

Updated : Sep 26, 2024, 8:01 PM IST

ಉಡುಪಿ : ಸಚಿವ ಜಮೀರ್ ಹೈಕೋರ್ಟ್ ತೀರ್ಪು ಬಗ್ಗೆ ಮಾತನಾಡುವುದು ಅಂದರೆ ಹುಡುಗಾಟನಾ? ರಾಜಕಾರಣದಲ್ಲಿ ಭಾಷಣ ಬಿಗಿದ ಹಾಗೆ ಮಾತನಾಡಿದರೆ ಆಗುತ್ತಾ? ನಾಲಿಗೆ ಬಿಗಿಯಿಲ್ಲದೇ ಮಾತನಾಡಿದ್ದು ಸರಿಯಲ್ಲ. ಈ ತೀರ್ಪಿನ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸುವೆ ಎಂದು ಸಾಮಾಜಿಕ ಕಾರ್ಯಕರ್ತ ಟಿ. ಜೆ ಅಬ್ರಹಾಂ ಗುಡುಗಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನ್ಯಾಯಾಧೀಶರನ್ನು ರಾಜಕಾರಣಿಗಳ ಸಮಾನಕ್ಕೆ ಇಳಿಸುತ್ತೀರಾ? ನ್ಯಾಯಾಲಯದ ಬಗ್ಗೆ ಭಯ ಭಕ್ತಿ ಬೇಡ್ವಾ? ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಗೊತ್ತಿದೆಯಾ? ಜಮೀರ್ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಟಿ. ಜೆ ಅಬ್ರಹಾಂ (ETV Bharat)

ನ್ಯಾಯಾಲಯದ ಬಗ್ಗೆ ಈ ರೀತಿ ಮಾತನಾಡಬೇಡಿ. ಸಾರಿಗೆ ಸಿಬ್ಬಂದಿ ಹತ್ತಿರ ಮಾತನಾಡಿದ ಹಾಗೆ ಮಾತನಾಡಿದ್ದಾರೆ. ನನ್ನ ಬಗ್ಗೆ ಮಾತನಾಡಿ ಪರ್ವಾಗಿಲ್ಲ. ನ್ಯಾಯಾಲಯದ ಬಗ್ಗೆ ಈ ರೀತಿ ಮಾತನಾಡಬೇಡಿ. ನಿಮಗೆ ನ್ಯಾಯಾಲಯದ ಬಗ್ಗೆ ಭಯ ಬರಬೇಕು. ನಾಳೆ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇನೆ ಎಂದು ಇದೇ ವೇಳೆ ಅಬ್ರಾಹಂ ಎಚ್ಚರಿಕೆ ನೀಡಿದರು.

ಇದನ್ನೂ ಓದಿ :ಸಿದ್ದರಾಮಯ್ಯ ಪತ್ನಿಗೆ ನೀಡಿರುವ ನಿವೇಶನಗಳನ್ನು ವಾಪಸ್ ಪಡೆಯಿರಿ: ಮುಡಾಗೆ ಟಿ.ಜೆ.ಅಬ್ರಹಾಂ ಮನವಿ - T J Abraham

Last Updated : Sep 26, 2024, 8:01 PM IST

ABOUT THE AUTHOR

...view details