ಕರ್ನಾಟಕ

karnataka

ETV Bharat / state

ಮನುಷ್ಯನ ಆರೋಗ್ಯವು ಪ್ರಾಣಿ, ಪಕ್ಷಿ ಮತ್ತು ಪರಿಸರದ ಮೇಲೆ ಅವಲಂಬಿತವಾಗಿದೆ: ವೆಂಕಯ್ಯ ನಾಯ್ಡು - poultry farming

ವಿಶ್ವದಲ್ಲಿ ಭಾರತವು ಮೊಟ್ಟೆ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಬ್ರೈಲರ್‌ಗಳ ಉತ್ಪಾದನೆಯಲ್ಲಿ ಇಂದು ಐದನೇ ಸ್ಥಾನದಲ್ಲಿದೆ. 2022ರಲ್ಲಿ ಈ ವ್ಯಾಪಾರ ಮೌಲ್ಯ ₹ 1 ಲಕ್ಷದ 40 ಸಾವಿರ ಕೋಟಿ ಆಗಿದೆ. ಕೋಳಿ ಮೊಟ್ಟೆ ಉತ್ಪಾದನೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಹರಿಯಾಣ ಶೇ.70 ರಷ್ಟು ಪಾಲು ಹೊಂದಿವೆ.

Etv Bharat
Etv Bharat

By ETV Bharat Karnataka Team

Published : Feb 16, 2024, 8:58 AM IST

ಬೆಂಗಳೂರು: ಮನುಷ್ಯನ ಆರೋಗ್ಯವು ಜಾನುವಾರು ಮತ್ತು ಪರಿಸರದ ಮೇಲೆ ಅವಲಂಬಿತವಾಗಿದೆ. ಸಮಗ್ರ ಆರೋಗ್ಯಕ್ಕೆ ಸಮಗ್ರ ತಂತ್ರಗಳ ಅಗತ್ಯವಿದ್ದು, ಪೌಷ್ಠಿಕ ಆಹಾರದಲ್ಲಿ ಕುಕ್ಕಟ ಉದ್ಯಮದ ಕೊಡುಗೆ ಇದ್ದು, ಕುಕ್ಕಟ ಉದ್ಯಮವನ್ನು ದೇಶದ್ಯಾಂತ ವಿಸ್ತರಿಸಬೇಕೆಂದು ಭಾರತದ ಮಾಜಿ ಉಪ ರಾಷ್ಟಪತಿ ವೆಂಕಯ್ಯನಾಯ್ದು ತಿಳಿಸಿದರು.

ಬೆಂಗಳೂರಲ್ಲಿ ಗುರುವಾರ ನಡೆದ ವಿಶ್ವ ಪಶುವೈದ್ಯಕೀಯ ಕೋಳಿ ಸಂಘದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, 'ಆರೋಗ್ಯ ಎಂದರೆ ಯಾವುದೇ ವ್ಯಕ್ತಿಯ ಆರೋಗ್ಯವಲ್ಲ, ಇಡೀ ಮಾನವೀಯತೆ, ಜಾನುವಾರು ಮತ್ತು ಪರಿಸರದ ಆರೋಗ್ಯವನ್ನು ಒಂದಾಗಿ ಕಾಣಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಅನುಗುಣವಾಗಿ ಒಂದೇ ಭೂಮಿ, ಒಂದು ಆರೋಗ್ಯವಾಗಿದೆ. ಇಡೀ ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಸಮಗ್ರ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದರು.

ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಭದ್ರತೆ ಒದಗಿಸುವ ಅಗತ್ಯವಿದೆ. ಭಾರತೀಯ ಕೋಳಿ ವಲಯವು ಈ ಸವಾಲನ್ನು ತೆಗೆದುಕೊಳ್ಳಬೇಕು. ವಿಶ್ವದಾದ್ಯಂತ ಮಾನವಕುಲಕ್ಕೆ ಪ್ರೋಟಿನ್ ಭರಿತ ಆಹಾರ ಒದಗಿಸುವಲ್ಲಿ ಕೋಳಿ ಉದ್ಯಮದ ಭಾಗವಹಿಸುವಿಕೆ ಮುಖ್ಯವಾಗಿದೆ. ಈ ಉದ್ಯಮದ ಬೆಳವಣಿಗೆಯಲ್ಲಿ ಪಶುವೈದ್ಯರು, ಸಿಬ್ಬಂದಿ ಮತ್ತು ಸಂಬಂಧಿತ ವಲಯಗಳ ಕೊಡುಗೆ ಗಮನಾರ್ಹವಾಗಿದೆ. ಭಾರತೀಯ ಕೋಳಿ ವಲಯವು ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು.

ವಿಶ್ವದಲ್ಲಿ ಭಾರತವು ಮೊಟ್ಟೆಗಳ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಬ್ರೈಲರ್‌ಗಳ ಉತ್ಪಾದನೆಯಲ್ಲಿ ಇಂದು ಐದನೇ ಸ್ಥಾನದಲ್ಲಿದೆ. 2022ರಲ್ಲಿ ಈ ವ್ಯಾಪಾರ ಮೌಲ್ಯ ₹ 1 ಲಕ್ಷದ 40 ಸಾವಿರ ಕೋಟಿ ಆಗಿದೆ. ಭಾರತದ ಕೋಳಿ ವಲಯವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 50 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುವ ಕ್ಷೇತ್ರವಾಗಿದೆ. 2050ರ ವೇಳೆಗೆ ಭಾರತದ ಜನಸಂಖ್ಯೆ 165 ಕೋಟಿ ತಲುಪುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ಜನಸಂಖ್ಯೆಯನ್ನು ಪೂರೈಸಲು, ಮಾಂಸ ಉತ್ಪನ್ನಗಳಲ್ಲಿನ ಪೌಷ್ಟಿಕಾಂಶದ ಮಟ್ಟವನ್ನು ಪೂರೈಸಲು ದೇಶದ ಎಲ್ಲ ಭಾಗಗಳಲ್ಲಿ ಕೋಳಿ ಸಾಕಾಣಿಕೆಯನ್ನು ವಿಸ್ತರಿಸಬೇಕೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸೂಚನೆ ನೀಡಿದೆ ಎಂದು ಮಾಹಿತಿ ನೀಡಿದರು.

ಕೋಳಿ ಮೊಟ್ಟೆ ಮತ್ತು ಕೋಳಿ ಮಾಂಸದಿಂದ ಗುಣಮಟ್ಟದ ಪ್ರೊಟೀನ್ ಸಿಗುತ್ತಿದೆ, ಕೋಳಿ ಮೊಟ್ಟೆ ಸಂಪೂರ್ಣ ಆಹಾರವಾಗಿದೆ. ಕೋಳಿ ಮೊಟ್ಟೆ ಉತ್ಪಾದನೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಹರಿಯಾಣ ಶೇ.70 ರಷ್ಟು ಪಾಲು ಹೊಂದಿವೆ. ಹೆಚ್ಚುತ್ತಿರುವ ಜನಸಂಖ್ಯೆಯ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ದೇಶದ ಎಲ್ಲಾ ಭಾಗಗಳಲ್ಲಿ ಕೋಳಿ ಸಾಕಣೆಯನ್ನು ವಿಸ್ತರಿಸುವ ಅಗತ್ಯವಿದೆ ಎಂದರು.

ವಿಶೇಷವಾಗಿ ಈಶಾನ್ಯ ರಾಜ್ಯಗಳು, ಪಶ್ಚಿಮ ಭಾರತ ಮತ್ತು ಮಧ್ಯ ಭಾರತದ ಬುಡಕಟ್ಟು ಪ್ರದೇಶಗಳಲ್ಲಿ ಕೋಳಿ ಉದ್ಯಮ ಹೆಚ್ಚಿಸಬೇಕು. ಏವಿಯನ್,
ಹಕ್ಕಿಜ್ವರದಂತಹ ರೋಗಗಳಿಂದ ಕೋಳಿಗಳನ್ನು ರಕ್ಷಿಸಬೇಕು. ಈ ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ಭಾರತೀಯ ಕೋಳಿ ವಲಯಕ್ಕಿದೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಳ್ಳುಳ್ಳಿ ಬೆಲೆ ಕೆಜಿಗೆ 500- 550ಕ್ಕೆ ಏರಿಕೆ: ಬೀದಿ ಬದಿ ವ್ಯಾಪಾರಿಗಳಿಗೂ ತಟ್ಟಿದ ಬಿಸಿ

ABOUT THE AUTHOR

...view details