ಕರ್ನಾಟಕ

karnataka

ETV Bharat / state

ಇಟಲಿಯಲ್ಲಿ ಮಿಂಚಿದ ಹುಬ್ಬಳ್ಳಿ ಹುಡುಗಿ: ವಿಶ್ವ ಸ್ಕೇಟಿಂಗ್​ ಕ್ರೀಡಾಕೂಟದಲ್ಲಿ ಕಂಚು ಗೆದ್ದ ತ್ರಿಶಾ ಪ್ರವೀಣ್​ - World Skating Games - WORLD SKATING GAMES

ಇಟಲಿಯಲ್ಲಿ ನಡೆದ ವಿಶ್ವ ಸ್ಕೇಟಿಂಗ್​ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹುಬ್ಬಳಿಯ ಹುಡುಗಿ ತ್ರಿಷಾ ಪ್ರವೀಣ್​ ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Trisha Pravin
ತ್ರಿಷಾ ಪ್ರವೀಣ್​ (ETV Bharat)

By ETV Bharat Sports Team

Published : Sep 23, 2024, 1:10 PM IST

ಹುಬ್ಬಳ್ಳಿ:ಹುಬ್ಬಳ್ಳಿಯ ಯುವ ಸ್ಕೇಟರ್ ತ್ರಿಷಾ ಪ್ರವೀಣ್ ಜಡಲಾ, ಇಟಲಿಯಲ್ಲಿ ನಡೆದ ಪ್ರತಿಷ್ಠಿತ ವಿಶ್ವ ಸ್ಕೇಟಿಂಗ್​ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ವಾಣಿಜ್ಯ ನಗರಿ ಹುಬ್ಬಳ್ಳಿ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಅದ್ಭುತ ಸಾಧನೆ ಮಾಡಿದ ಹುಬ್ಬಳ್ಳಿಯ ಮೊದಲ ಮತ್ತು ಏಕೈಕ ಬಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ಕಳೆದ ಒಂಬತ್ತು ವರ್ಷಗಳಿಂದ ಸ್ಕೇಟಿಂಗ್ ಅಭ್ಯಾಸ ಮಾಡುತ್ತಿರುವ ತ್ರಿಶಾ, ಈ ಹಂತವನ್ನು ತಲುಪಲು ಅವರ ನಿರಂತರ ಪರಿಶ್ರಮ, ಶಿಸ್ತು, ಅವರ ತರಬೇತುದಾರರು ಮತ್ತು ಕುಟುಂಬದ ಅಚಲ ಬೆಂಬಲಕ್ಕೆ ಸಾಕ್ಷಿಯಾಗಿದೆ.

ತ್ರಿಷಾ ಪ್ರವೀಣ್​ (ETV Bharat)

ತನ್ನ ಸಾಧನೆಯ ಬಗ್ಗೆ ಮಾತನಾಡಿದ ತ್ರಿಶಾ, "ಇದು ಸುದೀರ್ಘ ಮತ್ತು ಸವಾಲಿನ ಪ್ರಯಾಣವಾಗಿದೆ. ಆದರೆ ಈ ಪದಕವು ಎಲ್ಲಾ ಕಠಿಣ ಪರಿಶ್ರಮವನ್ನು ಸಾರ್ಥಕಗೊಳಿಸುತ್ತದೆ ಮತ್ತು ಇದು ನಮ್ಮ ಪ್ರದೇಶದ ಇತರ ಯುವ ಕ್ರೀಡಾಪಟುಗಳಿಗೆ ತಮ್ಮ ಕನಸುಗಳನ್ನು ದೃಢವಾಗಿ ಮುಂದುವರಿಸಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.

ಇವರ ಸಾಧನೆ ಹುಬ್ಬಳ್ಳಿ- ಧಾರವಾಡ ಜಿಲ್ಲೆಯ ಜನತೆಗೆ ಹೆಮ್ಮೆ ತಂದಿದ್ದು, ಕ್ರೀಡೆಯಲ್ಲಿ ತಮ್ಮ ಛಾಪು ಮೂಡಿಸುವ ಹಂಬಲವಿರುವ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ತ್ರಿಷಾ ಅವರ ಗೆಲುವು ವೈಯಕ್ತಿಕ ವಿಜಯ ಮಾತ್ರವಲ್ಲದೆ, ಸ್ಕೇಟಿಂಗ್‌ನಲ್ಲಿ ಅಂತಹ ಸಾಧನೆಯನ್ನು ಹಿಂದೆಂದೂ ನೋಡದ ಅವರ ಜಿಲ್ಲೆಗೆ ಮಹತ್ವದ ಮೈಲಿಗಲ್ಲು ಆಗಿದೆ.

ಇದನ್ನೂ ಓದಿ:ಚೆಸ್ ಒಲಿಂಪಿಯಾಡ್: ಭಾರತದ 'ರಾಜ', 'ರಾಣಿ'ಯರಿಗೆ ಐತಿಹಾಸಿಕ ಚಿನ್ನ - Chess Olympiad 2024

ABOUT THE AUTHOR

...view details