ಹುಬ್ಬಳ್ಳಿ:ನಗರದ ಕಾಲೇಜು ಕ್ಯಾಂಪಸ್ನಲ್ಲಿ ಇಂದು ನಡೆದ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಮಾಹಿತಿ ನೀಡಿದ್ದಾರೆ. ಮೃತ ಯುವತಿ ನೇಹಾಳನ್ನು ಪ್ರೀತಿಸುತ್ತಿದ್ದುದಾಗಿ ಆರೋಪಿ ಫಯಾಜ್ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎಂದು ಅವರು ಹೇಳಿದರು.
" ತನ್ನನ್ನು ನೇಹಾ ಅವೈಯ್ಡ್ ಮಾಡುತ್ತಿದ್ದಳು ಎಂದು ವಿಚಾರಣೆ ವೇಳೆ ಆರೋಪಿ ಫಯಾಜ್ ಹೇಳಿಕೆ ನೀಡಿದ್ದಾನೆ. ಇದು ಆತನ ಹೇಳಿಕೆ ಆಗಿದ್ದು, ಇತರ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ‘‘ ಎಂದು ಕಮಿಷನರ್ ತಿಳಿಸಿದ್ದಾರೆ.
ಆರೋಪಿಯ ತಂದೆ-ತಾಯಿ ಶಿಕ್ಷಕರು:"ಆರೋಪಿ ಬೆಳಗಾವಿ ಜಿಲ್ಲೆಯವ. ಆತನ ತಂದೆ-ತಾಯಿ ಇಬ್ಬರು ಶಿಕ್ಷಕರೆಂದು ಗೊತ್ತಾಗಿದೆ. ಕೊಲೆ ಮಾಡಿ ತಪ್ಪಿಸಿಕೊಳ್ಳಲು ಆರೋಪಿ ಯತ್ನಿಸಿದ್ದಾನೆ. ಆದರೆ ಒಂದೇ ಗಂಟೆಯೊಳಗೆ ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವವರ ಮೇಲೆ ನಿಗಾ ವಹಿಸಲಾಗಿದೆ. ಸಂಘಟನೆಗಳ ಜೊತೆಗೂ ಮಾತನಾಡುತ್ತೇವೆ" ಎಂದರು.