ಕರ್ನಾಟಕ

karnataka

ETV Bharat / state

ಹುಬ್ಬಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾದ ಪೊಲೀಸ್​ ಕಮಿಷನರ್​: 45 ರೌಡಿಶೀಟರ್​ಗಳ ಗಡಿಪಾರು - DEPORTATION OF 45 ROWDY SHEETERS

ಆರೋಪಿಗಳನ್ನು ಬೀದರ್, ಯಾದಗಿರಿ, ದಕ್ಷಿಣ ಕನ್ನಡ, ಚಾಮರಾಜನಗರಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಇವರ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇರಿಸಲಾಗಿದೆ.

hubballi-dharwad-police-commissioner-orders-deportation-of-45-rowdy-sheeters
ಪೊಲೀಸರ ಆದೇಶ (ಈಟಿವಿ ಭಾರತ್​)

By ETV Bharat Karnataka Team

Published : Jan 15, 2025, 4:16 PM IST

ಹುಬ್ಬಳ್ಳಿ: ಅವಳಿ- ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವ 45 ಮಂದಿ ರೌಡಿಶೀಟರ್‌ಗಳಿಗೆ ಗಡಿಪಾರು ಮಾಡಿ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೌಡಿಶೀಟರ್‌ಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಕೊಲೆ, ಸುಲಿಗೆ, ಮಾದಕ ವಸ್ತು ಮಾರಾಟ ಹಾಗೂ ಸೇವನೆ, ಮಟ್ಕಾ, ಭೂ ಮಾಫಿಯಾ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್​ಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆಗಳಿದೆ. ಈ ನಿಟ್ಟಿನಲ್ಲಿ ಶಾಂತಿ ನೆಲೆಸಲು ಕ್ರಮ ಜರುಗಿಸಲಾಗಿದೆ. ಆರೋಪಿಗಳನ್ನು ಬೀದರ್, ಯಾದಗಿರಿ, ದಕ್ಷಿಣ ಕನ್ನಡ, ಚಾಮರಾಜನಗರಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಇವರ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇರಿಸಲಾಗಿದೆ ಎಂದರು.

ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ (ETV Bharat)

ಗಡಿಪಾರಾದ ರೌಡಿಗಳು:ಇಮ್ರಾನ್ ಅಲಿಯಾಸ್ ಕಟಗ ಮನಿಯಾರ್ (33), ಸೈಯದ್ ಸೊಹೆಲ್ ಅಲಿಯಾಸ್ ಅಡ್ಡ ಸೊಹೆಲ್ (21), ಖಾಜುಲೈನ್ ಕೋಟೂರ (24), ಅಮ್ಜದ್ ಶಿರಹಟ್ಟಿ (28,) ರಾಕೇಶ ಮದರಕಲ್ಲ (33) ಉದಯ ಕೆಲಗೇರಿ (24), ಅಶ್ಪಾಕ್ ಅತ್ತಾರ (40), ಮೆಹಬೂಬ್ ಸಾಬ (46), ರಾಹುಲ್ ಪ್ರಭು (35), ವಾಸುದೇವ ಕೊಲ್ಹಾಪುರ (46), ಪರಶುರಾಮ ಕಬಾಡೆ (60), ಮಹಮ್ಮದ್ ಅಜೀಜ್ ಬೇಪಾರಿ (27), ಆಂಜನೇಯ ಪೂಜಾರ (39), ಸುದೀಪ್ ಬಾರಕೇರ್ (21), ಅರ್ಜುನ ವಡ್ಡರ (23), ಅಕ್ಬರ್ ಬಿಜಾಪುರ (26), ವಿಶಾಲ ಬಿಜವಾಡ (25), ರಾಕೇಶ ಜಮಖಂಡಿ (32), ಸುನಿಲ್ ಮಾಳಗಿ (24), ಹಜರತ್ ಅಲಿ ಅಲಿಯಾಸ್ ಪಾಡಾ ಮಕಾಂದರ (22), ಸತೀಶ್ ಅಲಿಯಾಸ್ ಸತ್ಯಾ ಗೋಕಾವಿ (27), ಸಿದ್ದಪ್ಪ ಬಡಕಣ್ಣವರ (38), ಶಂಕರ ಅಥಣಿ (28),ರಾಜೇಶ ಅಲಿಯಾಸ್ ಬಾಂಡ್ ರಾಜಾ ನಾಗನೂರ (21), ಅರವಿಂದ ಭಜಂತ್ರಿ (28), ಕಾರ್ತಿಕ ಮದರಿಮಠ (22), ವಿಜಯಕುಮಾರ್ ಆಲೂರ್ (24), ಮಹಮ್ಮದ್ ಸಾಧಿಕ್ ಅಲಿಯಾಸ್ ಗಿಲಿಗಿಲಿ ಸಾದಿಕ ಬೆಟಗೇರಿ (28), ದಾದಾಫೀರ್ ಚೌಧರಿ (28), ಜುನೇದ್ ಅಲಿಯಾಸ್ ಡೈಮಂಡ್ ಮುಲ್ಲಾ (30), ಅಲ್ತಾಫ್ ಕರಡಿಗುಡ್ಡ (29), ಮಹಮ್ಮದ್ ಸಾಧಿಕ್ ಅಲಿಯಾಸ್ ಬಾಬಾಸಾಧಿಕ್ ಬೇಪಾರಿ (29), ಮಹಮ್ಮದ್ ಸಾಧಿಕ್ ಅಲಿಯಾಸ್ ಮ್ಯಾಟ್ನಿ ಸಾಧಿಕ್ ಮುನವಳ್ಳಿ (22), ಶಾದಾಬ ಕರಡಿಗುಡ್ಡ (32), ಚೇತನ ಮೆಟ್ಟಿ (30), ಕರ್ಣಾ ಮುಂಡಗೋಡ ( 28), ಇಮ್ರಾನ್ ಕಲಾದಗಿ (22), ಅಲ್ಲಾವುದ್ದೀನ್ ಅಲಿಯಾಸ್ ಡಲ್ಯಾ ನದಾಫ್ ( 39), ಸಿದ್ಧಾರ್ಥ ಹೆಗ್ಗಣದೊಡಿ (22), ಇಸರಾರ ಅಲಿಯಾಸ್ ಅಬ್ದುಲ್ ಶೇಖ್ (23), ಸೋಹಿಲ್ ಖಾನ್ ಹಾಲಬಾವಿ (23), ಆನಂದ ಕೊಪ್ಪದ (25), ಕಾರ್ತಿಕ ಮಾನೆ (24), ಕಿರಣ ಕಲಬುರಗಿ (30, ವಿಜಯ ಕಠಾರೆ (24) ಗಡಿಪಾರು ಆದೇಶಕ್ಕೆ ಒಳಗಾದ ರೌಡಿಶೀಟರ್ ಗಳಾಗಿದ್ದಾರೆ.

ಆದೇಶದ ಪ್ರತಿ (ಈಟಿವಿ ಭಾರತ್​​)

ಧಾರವಾಡ ಶಹರ ಪೊಲೀಸ್ ಠಾಣೆಯ 7 ಜನ, ಉಪನಗರ ಪೊಲೀಸ್ ಠಾಣೆಯ 3 ಜನ, ವಿದ್ಯಾಗಿರಿ ಠಾಣೆಯ 7ಜನ, ಮೂವರು ಪೊಲೀಸ್ ಠಾಣೆಯ ವ್ಯಾಪ್ತಿಯ ಒಟ್ಟು 17 ಜನ ಗಡಿಪಾರು ಮಾಡಲಾಗಿದೆ. ಹುಬ್ಬಳ್ಳಿ ನಗರದ ಶಹರ ಠಾಣೆಯ 1, ಉಪನಗರ ಠಾಣೆಯ 1 ಒಬ್ಬ, ಕಮಿರಿಪೇಟ್ ಠಾಣೆಯ 2 ಜನ, ಬೆಂಡಿಗೇರಿ ಠಾಣೆಯ 3ಜನ, ಕಸಬಾ ಪೇಟ್ ಠಾಣೆಯ 9 ಜನ, ಅಶೋಕ ನಗರ ಠಾಣೆ 2 ಜನ, ವಿದ್ಯಾನಗರ ಠಾಣೆಯ 1 ಜನ, ಎಪಿಎಂಸಿ ನವನಗರ ಠಾಣೆಯ 4 ಜನ, ಜತೆಗೆ ಕೇಶ್ವಾಪುರ ಠಾಣೆಯ 5 ಜನ ಸೇರಿ ಹುಬ್ಬಳ್ಳಿಯ ವ್ಯಾಪ್ತಿಯಲ್ಲಿ ಒಟ್ಟು 28 ಜನ ರೌಡಿಶೀಟರಗಳನ್ನು ಗಡಿಪಾರಿಗೆ ಕ್ರಮ ಕೈಗೊಳ್ಳಲಾಗಿದೆ.

ಒಂದು ವೇಳೆ ಗಡಿಪಾರು ಆದೇಶ ಉಲ್ಲಂಘಿಸಿದ್ದಲ್ಲಿ ಈ ರೌಡಿಶೀರಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಅಡ್ಡ ಬಂದ ಹಾವು ತಪ್ಪಿಸಲು ಹೋಗಿ ಕಲ್ಲು ಬಂಡೆಗೆ ಡಿಕ್ಕಿಯಾದ ಕಾರು: ಮಹಿಳೆ ಸಾವು, ಇಬ್ಬರಿಗೆ ಗಾಯ

ABOUT THE AUTHOR

...view details