ಹುಬ್ಬಳ್ಳಿ:ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಸಣ್ಣ ಮಗು ಸೇರಿದಂತೆ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ಎಂದಿನಂತೆ ಮನೆ ಮಾಲೀಕ ರಾಜೇಸಾಬ ಮತ್ತಿಗಟ್ಟಿ ಮತ್ತು ಕುಟುಂಬ ಸದಸ್ಯರು ಮನೆಯಲ್ಲಿ ಊಟಕ್ಕೆ ಕುಳಿತ್ತಿದ್ದ ಸಂದರ್ಭದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಮನೆಯ ಗೋಡೆ ಮಳೆಯಿಂದ ನೆನೆದು ಕುಸಿದು ಬಿದ್ದಿದೆ. ಊಟ ಮಾಡುತ್ತಿದ್ದ ರಾಜೇಸಾಬ ಮತ್ತಿಗಟ್ಟಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದಂತೆ ಮನೆಯಲ್ಲಿದ್ದ ಸಣ್ಣಮಗು ಸೇರಿದಂತೆ ನಾಲ್ವರು ಪಾರಾಗಿದ್ದಾರೆ.