ಬೆಂಗಳೂರು:ಡಿಕೆಶಿ ಹಾಗೂ ಸರ್ಕಾರದ ವಿರುದ್ಧ ಆರೋಪ ಏನೇ ಇದ್ದರೂ ಎಸ್ಐಟಿ ತನಿಖೆಯಲ್ಲಿ ಗೊತ್ತಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವ ನಗರದ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರಕ್ಕೆ ಒಂದು ಜವಾಬ್ದಾರಿ ಇದೆ. ಇಂತಹ ಘಟನೆಯನ್ನು ಲೈಟ್ ಆಗಿ ತಗೆದುಕೊಳ್ಳಲು ಆಗಲ್ಲ. ಕುಮಾರಸ್ವಾಮಿ ಅವರಿಗೂ ಅದು ಗೊತ್ತು. ಅವರು ಮುಖ್ಯಮಂತ್ರಿ ಆಗಿದ್ದವರು. ಎಸ್ಐಟಿ ಅಂತಹ ಕಾನೂನಾತ್ಮಕ ಸಂಸ್ಥೆ ಮೇಲೆ ಅನುಮಾನ ಪಟ್ಟರೆ ಹೇಗೆ ಎಂದು ಪ್ರಶ್ನಿಸಿದರು.
ದೇವರಾಜೇಗೌಡ ಆರೋಪಕ್ಕೆ ನಾವು ಏನು ಹೇಳೋಕೆ ಆಗಲ್ಲ. ಎಲ್ಲವನ್ನೂ ಎಸ್ಐಟಿಯವರು ಗಮನಿಸುತ್ತಾರೆ. ಪೆನ್ ಡ್ರೈವ್ ಮೂಲ ಎಲ್ಲವನ್ನೂ ಎಸ್ಐಟಿ ಗಮನ ಹರಿಸುತ್ತದೆ. ಇಂತಹ ಸಂದರ್ಭದಲ್ಲಿ ಹೆಚ್ಡಿಕೆ ಅವರು ಕೋಪಗೊಳ್ಳುವುದು, ಅಸಮಾಧಾನಗೊಳ್ಳುವುದು ಸಹಜವೇ. ಅನುಮಾನ ಪಡುವುದು ಬೇಡ, ಸರ್ಕಾರ ಸರಿಯಾಗಿ ನಿಭಾಯಿಸುತ್ತಿದೆ ಎಂದರು.
ಇದು ಕಾಂಗ್ರೆಸ್ ಮೈತ್ರಿ ಅವಧಿಯ ವಿಡಿಯೋ ಎಂದು ಪ್ರಧಾನಿ ಹೇಳಿದ್ದಾರೆ. ನೋಡೋಣ, ಅದು ಯಾವ ಅವಧಿಯಲ್ಲಿ ಆಗಿದ್ದು ಎಂಬುದನ್ನು. ಎಸ್ಐಟಿ ತನಿಖೆಯಲ್ಲಿ ಅದೂ ಗೊತ್ತಾಗಲಿದೆ. ಒಮ್ಮೆ ತನಿಖೆ ಮುಗಿದ ಮೇಲೆ ಅದು ಪಬ್ಲಿಕ್ ಡೊಮೈನ್ಗೆ ಬರುತ್ತದೆ. ಯಾವುದನ್ನು ಮುಚ್ಚಿಡಲು ಆಗಲ್ಲ. ಬ್ಲೂ ಕಾರ್ನರ್ ನೋಟಿಸ್ ಸಿಬಿಐ ಹೊರಡಿಸಿರಬಹುದು. ಆದರೆ, ನಮಗೆ ಅವರು ಆ ಮಾಹಿತಿ ತಿಳಿಸಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಪತ್ತೆಗೆ ಅಧಿಕೃತವಾಗಿ 'ಬ್ಲ್ಯೂ ಕಾರ್ನರ್ ನೋಟಿಸ್' ಜಾರಿ - Blue Corner Notice