ಕರ್ನಾಟಕ

karnataka

ETV Bharat / state

ಅದ್ಧೂರಿಯಾಗಿ ಜರುಗಿದ ಹಿಂದೂ ಮಹಾಗಣಪತಿ ಶೋಭಾಯಾತ್ರೆ; ಡಿಜೆ ಸದ್ದಿಗೆ ಹೆಜ್ಜೆಹಾಕಿದ ಯುವಕ - ಯುವತಿಯರು - HINDU MAHA GANAPATHI IMMERSION - HINDU MAHA GANAPATHI IMMERSION

ದಾವಣಗೆರೆಯಲ್ಲಿ ಹಿಂದೂ ಮಹಾಗಣಪತಿ ನಿಮಜ್ಜನ ಶೋಭಾಯಾತ್ರೆ ಅತ್ಯಂತ ಅದ್ಧೂರಿಯಾಗಿ ಜರುಗಿತು. ಇಡೀ ದಾವಣಗೆರೆ ಕೇಸರಿ ಅಲಂಕಾರದಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು.

Hindu Maha Ganapathi Nimajjana
ಹಿಂದೂ ಮಹಾಗಣಪತಿ ಶೋಭಾಯಾತ್ರೆ (ETV Bharat)

By ETV Bharat Karnataka Team

Published : Oct 5, 2024, 7:09 PM IST

Updated : Oct 5, 2024, 7:56 PM IST

ದಾವಣಗೆರೆ : ಬೆಣ್ಣೆನಗರಿಯಲ್ಲಿ ಏಳನೇ ವರ್ಷದ ಹಿಂದೂ ಮಹಾಗಣಪತಿ ನಿಮಜ್ಜನ ಶೋಭಾಯಾತ್ರೆ ಸಂಭ್ರಮದಿಂದ ಜರುಗಿತು. 29 ದಿನಗಳ ಕಾಲ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶನಿಗೆ ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಬಾತಿ ಕೆರೆಯಲ್ಲಿ ನಿಮಜ್ಜನ ನೆರವೇರಿಸಲಾಯಿತು.

ಹಿಂದೂ ಮಹಾಗಣಪತಿ ನಿಮಜ್ಜನ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. ಇದರಿಂದ ಇಡೀ ದಾವಣಗೆರೆ ಕೇಸರಿ ಅಲಂಕಾರದಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ವಿಶೇಷ ಎಂದರೆ ಐದು ಡಿಜೆಗಳನ್ನು ತರಿಸಲಾಗಿದ್ದು, ಡಿಜೆ ಸದ್ದಿಗೆ ಯುವತಿಯರು ಭರ್ಜರಿ ಸ್ಟೆಪ್​ಗಳನ್ನು ಹಾಕಿದರು. ಯುವತಿಯರಿಗಿಂತ ನಾವೇನು ಕಡಿಮೆ ಇಲ್ಲ ಎಂಬಂತೆ ಯುವಕರು ಕುಣಿದು ಕುಪ್ಪಳಿಸಿದರು.

ಹಿಂದೂ ಮಹಾಗಣಪತಿ ಶೋಭಾಯಾತ್ರೆ (ETV Bharat)

ಎಲ್ಲೆಲ್ಲಿ ಸಾಗಿತು ಶೋಭಾಯಾತ್ರೆ ?ಶನಿವಾರಬೆಳಗ್ಗೆ 10.30ಕ್ಕೆ ಆರಂಭವಾದ ಶೋಭಾಯಾತ್ರೆ, ಹೈಸ್ಕೂಲ್‌ ಮೈದಾನದಿಂದ ಹೊರಟು, ಎವಿಕೆ ಕಾಲೇಜ್ ರಸ್ತೆ, ಅಂಬೇಡ್ಕರ್‌ ವೃತ್ತ, ಜಯದೇವ ವೃತ್ತ, ಲಾಯರ್‌ ರೋಡ್‌ ಮೂಲಕ ಪಿಬಿ ರಸ್ತೆ ತಲುಪಿ, ಅಲ್ಲಿಂದ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿ ಮುಕ್ತಾಯವಾಯಿತು.

ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಲು ಐದು ಡಿಜೆ ಹಾಗೂ ಕಲಾ ತಂಡಗಳ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು, ಯುವತಿಯರಿಗೆ ಡ್ಯಾನ್ಸ್ ಮಾಡಲು ಪ್ರತ್ಯೇಕವಾಗಿ ಒಂದು ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರ ಸರ್ಪಗಾವಲಿನಲ್ಲಿ ಯುವತಿಯರು ಕುಣಿದು ಕುಪ್ಪಳಿಸಿದರು. ಪುರುಷರಿಗೆ ಪ್ರತ್ಯೇಕವಾಗಿ ನಾಲ್ಕು ಡಿಜೆ ವ್ಯವಸ್ಥೆ ಮಾಡಿದ್ದರಿಂದ ಯುವಕರು ಭರ್ಜರಿ ಸ್ಟೆಪ್ ಹಾಕಿದರು. ‌

ಶೋಭಾಯಾತ್ರೆಯಲ್ಲಿ ಭೀಮ್ ಬಾಯ್ಸ್ ಆರ್ಭಟ : ಎಲ್ಲರೂ ಕೇಸರಿ ಧ್ವಜ ಹಿಡಿದು ಡ್ಯಾನ್ಸ್ ಮಾಡ್ತಿದ್ರೆ ಕೆಲ ಯುವಕರು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅಭಿಮಾನಿಗಳು ಅಂಬೇಡ್ಕರ್ ಅವರ ಚಿತ್ರ ಇರುವ ನೀಲಿ ಧ್ವಜ ಹಿಡಿದು ಭರ್ಜರಿ ಡ್ಯಾನ್ಸ್​ ಮಾಡಿದ್ದು ವಿಶೇಷವಾಗಿತ್ತು. ಕೇಸರಿ ಧ್ವಜಗಳ ಮಧ್ಯೆ ನೀಲಿ ಧ್ವಜಗಳು ಆಕರ್ಷಿಸುತ್ತಿದ್ದವು. ಇನ್ನು, ಈ ಶೋಭಾಯಾತ್ರೆಯಲ್ಲಿ ದಾವಣಗೆರೆ ಮಾಜಿ ಸಂಸದ ಜಿ. ಎಂ ಸಿದ್ದೇಶ್ವರ್ ಅವರ ಪತ್ನಿ ಹಾಗೂ ಲೋಕಸಭಾ ಕ್ಷೇತ್ರದ ಚುನಾಣೆಯ ಪರಾಜಿತ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್, ಮಾಜಿ ಶಾಸಕ ಎಂ. ಪಿ ರೇಣುಕಾಚಾರ್ಯ ಕೂಡ ಭಾಗಿಯಾಗಿದ್ದರು.‌ ಎಂ. ಪಿ ರೇಣುಕಾಚಾರ್ಯ ಶೋಭಾಯಾತ್ರೆಯಲ್ಲಿ ಜನರ ಮಧ್ಯೆ ಭರ್ಜರಿ ಹೆಜ್ಜೆ ಹಾಕಿದರು.

ಬಿಗಿ ಪೊಲೀಸ್ ಬಂದೋಬಸ್ತ್ : ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾ ಪೊಲೀಸ್‌ ಇಲಾಖೆ ಮುಂಜಾಗ್ರತೆ ಕ್ರಮ ವಹಿಸಿತ್ತು. ಚಿತ್ರದುರ್ಗ, ಇದರ ಬೆನ್ನಲ್ಲೇ ನಗರದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್ಪಿ ಉಮಾ ಪ್ರಶಾಂತ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಪರೇಡ್ ಮಾಡಿದರು. ಇನ್ನು ಪೊಲೀಸ್​ ಸಿಬ್ಬಂದಿಯೊಂದಿಗೆ ಕಳೆದ ದಿನ ರೂಟ್ ಮಾರ್ಚ್ ಕೂಡ ಮಾಡಿ ​ಇಲಾಖೆ ಶಕ್ತಿ ಪ್ರದರ್ಶಿಸಿತ್ತು.

ಇದನ್ನೂ ಓದಿ :ಹಿಂದೂ ಮಹಾಗಣಪತಿ ನಿಮಜ್ಜನ ಮಹೋತ್ಸವ ಉದ್ಘಾಟಿಸಿದ ಕೇಂದ್ರ ಸಚಿವ ವಿ ಸೋಮಣ್ಣ - Hindu Maha Ganapathi Nimajjana

Last Updated : Oct 5, 2024, 7:56 PM IST

ABOUT THE AUTHOR

...view details