ಬೆಂಗಳೂರು:ಯಾವುದೇ ಇಲಾಖೆವಾರು ತನಿಖೆ ಕೈಗೊಳ್ಳದೇ ನಿವೃತ್ತಿಯ ನಂತರದ ಸೌಲಭ್ಯಗಳನ್ನು ತಡೆ ಹಿಡಿದಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ(ಹೆಸ್ಕಾಂ) ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಒಂದು ಲಕ್ಷ ರೂ ದಂಡ ವಿಧಿಸಿದೆ. ಹೆಸ್ಕಾಂನ ನಿವೃತ್ತ ಎಂಜಿನಿಯರ್ ಮಕಾಂದಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ ದಂಡದ ಮೊತ್ತವನ್ನು ಅರ್ಜಿದಾರರಿಗೆ ಪಾವತಿ ಮಾಡಲು ಹೆಸ್ಕಾಂಗೆ ಸೂಚನೆ ನೀಡಿದೆ. ಅಲ್ಲದೇ ನಿವೃತ್ತಿ ನಂತರ ಲಭ್ಯವಾಗಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಶೇ.6 ರಷ್ಟು ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕು ಎಂದು ಪೀಠ ಸೂಚನೆ ನೀಡಿದೆ.
ಜತೆಗೆ, ಅರ್ಜಿದಾರರ ಹೆಸ್ಕಾಂ ಸಂಸ್ಥೆಗೆ ನೇಮಕಗೊಂಡಿದ್ದಾರೆ, ಪ್ರವರ್ತಕರಗಳನ್ನು ಹಿಂದಿರುಗಿಸದ ಆರೋಪ ಕುರಿತ ಯಾವುದೇ ಇಲಾಖಾವಾರು ತನಿಖೆ ಕೈಗೊಳ್ಳದೇ ದಂಡವನ್ನು ವಸೂಲಿ ಮಾಡಲಾಗಿದೆ. ಆದರೂ ನಿವೃತ್ತರಾದ ಬಳಿಕ ನಿವೃತ್ತಿ ಸೌಲಭ್ಯಗಳನ್ನು ತಡೆ ಹಿಡಿಯಲಾಗಿದೆ. ಉದ್ಯೋಗದಾತ ಸಂಸ್ಥೆಯು ಉದ್ಯೋಗಿಗಳ ಹಕ್ಕುಗಳ ಮೇಲೆ ನಡೆಸುವ ದಾಳಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಈ ರೀತಿಯಲ್ಲಿ ನಿವೃತ್ತ ಸೌಲಭ್ಯಗಳನ್ನು ತಡೆ ಹಿಡಿಯುವುದು ನೈಸರ್ಗಿಕ ನ್ಯಾಯದ ಉಲ್ಲಂಘನೆಯಾಗಿದೆ ಎಂದು ಪೀಠ ತಿಳಿಸಿದೆ.
ಜತೆಗೆ, ಅರ್ಜಿದಾರರ ವಿರುದ್ಧ ಯಾವುದೇ ರೀತಿಯ ಇಲಾಖೆವಾರು ವಿಚಾರಣೆ ನಡೆಸದೇ ಪಿಂಚಣಿ ಸೌಲಭ್ಯಗಳನ್ನು ತಡೆ ಹಿಡಿದಿರುವುದು ಸರಿಯಾದ ಕ್ರಮವಲ್ಲ ಎಂದು ಪೀಠ ತಿಳಿಸಿದೆ.