ಕರ್ನಾಟಕ

karnataka

ETV Bharat / state

ಎನ್‌ಎಸ್‌ಎಲ್‌ಯುನಲ್ಲಿ ತೃತೀಯ ಲಿಂಗಿಗಳಿಗೆ ಶೇ.0.5 ಮೀಸಲಾತಿ ನೀಡುವಂತೆ ಹೈಕೋರ್ಟ್ ಸೂಚನೆ - RESERVATION FOR TRANSGENDERS

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿರ್ವಸಿಟಿಯಲ್ಲಿ ತೃತೀಯ ಲಿಂಗಿಗಳಿಗೆ ಶುಲ್ಕ ರಹಿತವಾಗಿ ಶೇಕಡ 0.5ರಷ್ಟು ಮಧ್ಯಂತರ ಮೀಸಲಾತಿ ನೀಡುವಂತೆ ಹೈಕೋರ್ಟ್ ಸೂಚಿಸಿದೆ.

high court
ಹೈಕೋರ್ಟ್ (ETV Bharat)

By ETV Bharat Karnataka Team

Published : 5 hours ago

ಬೆಂಗಳೂರು :ರಾಜ್ಯದಲ್ಲಿನ ಉದ್ಯೋಗಗಳಲ್ಲಿ ತೃತೀಯ ಲಿಂಗಿಗಳಿಗೆ ಇರುವ ಮೀಸಲಾತಿಯಂತೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿರ್ವಸಿಟಿಯಲ್ಲಿ (ಎನ್‌ಎಸ್‌ಎಲ್‌ಯು) ಶುಲ್ಕ ರಹಿತವಾಗಿ ಶೇಕಡಾ 0.5ರಷ್ಟು ಮಧ್ಯಂತರ ಮೀಸಲಾತಿ ನೀಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ತೃತೀಯ ಲಿಂಗಿಯಾಗಿರುವ ಮುಗಿಲ್ ಅನ್ಬು ವಸಂತ ಎಂಬವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಮುಂಬರುವ ಶೈಕ್ಷಣಿಕ ವರ್ಷದಿಂದ 3 ವರ್ಷದ ಎಲ್‌ಎಲ್‌ಬಿಗೆ ಇತರ ತೃತೀಯ ಲಿಂಗಿ ವಿಧ್ಯಾರ್ಥಿಗಳು ಇಲ್ಲದಿದ್ದಲ್ಲಿ ಅರ್ಜಿದಾರರಿಗೆ ಶುಲ್ಕ ರಹಿಯವಾಗಿ ಅವಕಾಶ ಕಲ್ಪಿಸಬೇಕು ಎಂದು ಸೂಚನೆ ನೀಡಿದೆ. ಶುಲ್ಕ ಭರಿಸುವುದಕ್ಕಾಗಿ ರಾಜ್ಯ ಇಲ್ಲವೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬಹುದಾಗಿದೆ ಎಂದು ಪೀಠ ತಿಳಿಸಿದೆ.

ಈ ಮಧ್ಯಂತರ ಆದೇಶ ಪ್ರಸಕ್ತ ವರ್ಷಕ್ಕೆ ಮಾತ್ರ ಅನ್ವಯವಾಗಲಿದ್ದು, ಈಗಾಗಲೇ ಎಲ್ಲ ಸೀಟುಗಳು ಭರ್ತಿಯಾಗಿದ್ದರೂ, ಹೆಚ್ಚುವರಿ ವಿದ್ಯಾರ್ಥಿ ಎಂದು ಪರಿಗಣಿಸದೇ ಸೀಟು ನೀಡಬೇಕು ಎಂದು ಪೀಠ ಹೇಳಿದೆ.

ತಾರತಮ್ಯದ ಬಗ್ಗೆ ಹೈಕೋರ್ಟ್​ ಬೇಸರ:ಅಲ್ಲದೇ, ಯೂನಿರ್ವಸಿಟಿ ತೃತಿಯ ಲಿಂಗಿಗಳ ಪ್ರವೇಶ ಮತ್ತು ಅವರಿಗೆ ಆರ್ಥಿಕ ನೆರವು ನೀತಿಗಳು ತಾರತಮ್ಯದಿಂದ ಕೂಡಿದ್ದು, ಆ ಮೂಲಕ ಈ ವರ್ಗದವರು ಕಾನೂನು ಪದವಿಗಳನ್ನು ಪಡೆಯುವ ಅವಕಾಶದಿಂದ ವಂಚಿತರಾಗುವಂತೆ ಮಾಡಿವೆ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ. ಆದರೂ, ತೃತೀಯ ಲಿಂಗಿಗಳಿಗೆ ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣ ಪಡೆಯುವುದಕ್ಕೆ ಅವಕಾಶ ಕಲ್ಪಿಸಿರುವ ಯೂನಿರ್ವಸಿಟಿಯ ಕ್ರಮಕ್ಕೆ ಪೀಠ ಮೆಚ್ಚುಗೆ ವ್ಯಕ್ತಪಡಿಸಿದೆ.

ಅರ್ಜಿದಾರರು, ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಮತ್ತು ಟಾಟಾ ಇನ್‌ಸ್ಟಿಟ್ಯೂಟ್‌ನ ಸೋಷಿಲ್ ಸೈನ್ಸ್ ಡೆವಲಪ್​​ಮೆಂಟ್ ಸ್ಟಡೀಸ್ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಅಲ್ಲದೆ, ಲಿಂಗ ಪರಿವರ್ತನೆಯಾದ ಬಳಿಕ ತಮ್ಮ ಹೆಸರು ಮತ್ತು ಲಿಂಗವನ್ನು ಬದಲಾವಣೆಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಬದಲಾಯಿಸಿಕೊಂಡು ಪ್ರಮಾಣಪತ್ರವನ್ನು ಪಡೆದುಕೊಂಡಿದ್ದರು.

ಇದನ್ನೂ ಓದಿ:ತಕ್ಷಣವೇ ಸಿ.ಟಿ.ರವಿ ಬಿಡುಗಡೆಗೆ ಆದೇಶಿಸಿ 'ಜನಪ್ರತಿನಿಧಿಗಳಾಗಿ ಆರೋಪಿ‌, ದೂರುದಾರರ ವರ್ತನೆ ದುರದೃಷ್ಟಕರ‌' ಎಂದ ಹೈಕೋರ್ಟ್‌

2023ರ ಜನವರಿಯಲ್ಲಿ ಎನ್‌ಎಲ್‌ಎಸ್‌ಐಯುನ ಮೂರು ವರ್ಷದ ಎಲ್‌ಎಲ್‌ಬಿ ಪದವಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರವೇಶ ಪರೀಕ್ಷೆಯಲ್ಲಿ ಶೇಕಡ 96.25 ಅಂಕಗಳಿಸಿದ್ದರೂ ಸೀಟು ಸಿಕ್ಕಿರಲಿಲ್ಲ. ಬಳಿಕ ಸುಪ್ರೀಂಕೋರ್ಟ್ ತೀರ್ಪು ಮತ್ತು ಕರ್ನಾಟಕ ರಾಜ್ಯ ತೃತೀಯ ಲಿಂಗಿಗಳ ನೀತಿಯ ಅಡಿಯಲ್ಲಿ ಸೀಟು ಮಂಜೂರು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಸೀಟು ನೀಡುವಂತೆ ಹೈಕೋರ್ಟ್ ಸೂಚನೆ ನೀಡಿ ಆದೇಶಿಸಿದೆ.

ಇದನ್ನೂ ಓದಿ:ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ: 60 ದಿನಗಳ ಬಳಿಕ ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲಾಗದು - ಹೈಕೋರ್ಟ್

ABOUT THE AUTHOR

...view details