ಬಳ್ಳಾರಿ:ಬಳ್ಳಾರಿ, ಕುರುಗೋಡು, ಕಂಪ್ಲಿ, ಸಿರುಗುಪ್ಪ ಹಾಗು ಸಂಡೂರು ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಭಾರೀ ಮಳೆ ಸುರಿಯಿತು. ಹಗಲು, ರಾತ್ರಿ ಗುಡುಗುಸಹಿತ ಮಳೆಯಾಗಿದ್ದರಿಂದ ನದಿ, ಹಳ್ಳ-ಕೊಳ್ಳಗಳು ಭರ್ತಿಯಾಗಿವೆ. ಬಿರುಸಿನ ಮಳೆಗೆ ಜಿಲ್ಲೆಯ ಜೀವನಾಡಿ ವೇದಾವತಿ ನದಿ ಮತ್ತು ನಾರಿ ಹಳ್ಳ ಮೈತುಂಬಿ ಹರಿಯುತ್ತಿದೆ.
ಬಳ್ಳಾರಿ ಜಿಲ್ಲೆಯಾದ್ಯಂತ ಭಾರೀ ಮಳೆ; ಹಳ್ಳ-ಕೊಳ್ಳಗಳು ಭರ್ತಿ - Ballari Rain
ಬಳ್ಳಾರಿ ಜಿಲ್ಲೆಯಾದ್ಯಂತ ಸೋಮವಾರ ಎಡಬಿಡದೆ ಸುರಿದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ.
ಮಳೆಯಲ್ಲೇ ತೆರಳುತ್ತಿರುವ ಜನ (ETV Bharat)
Published : Aug 20, 2024, 5:29 PM IST
ಹಲವೆಡೆ ಮನೆಗಳು ಬಿದ್ದ ಬಗ್ಗೆ ವರದಿಯಾಗಿದೆ. ನಗರದ ಪ್ರಮುಖ ಕಾಲೊನಿಗಳಲ್ಲಿ ನೀರು ಸಂಗ್ರಹಗೊಂಡು ಸಾರ್ವಜನಿಕರು, ವಾಹನ ಸವಾರರು ಪರದಾಡಿದ ದೃಶ್ಯ ಕಂಡುಬಂತು. ಹೊಲ-ಗದ್ದೆಗಳು ಸಂಪೂರ್ಣ ಜಲಾವೃತವಾದು. ಇಂದೂ ಕೂಡ ಮೋಡ ಕವಿದ ವಾತಾವರಣವಿದೆ.
ಇದನ್ನೂ ಓದಿ:ತುಮಕೂರು: ರಾತ್ರಿ ಸುರಿದ ಭಾರೀ ಮಳೆಗೆ ತುಂಬಿ ಹರಿದ ಜಯಮಂಗಲಿ ನದಿ - River Jayamangali