ಹಾವೇರಿ:ದೇವರ ಕೋಣ ನಾಪತ್ತೆಯಾಗಿದ್ದು, ಹುಡುಕಿ ಕೊಡುವಂತೆ ಗ್ರಾಮಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ.
ಮಕರಿ ಗ್ರಾಮದ ಆರಾಧ್ಯದೈವ ದುರ್ಗಾದೇವಿ. ನಾಲ್ಕು ವರ್ಷಗಳ ಹಿಂದೆ ದುರ್ಗಾದೇವಿಯ ಹೆಸರಿನಲ್ಲಿ ಕೋಣವನ್ನು ಬಿಡಲಾಗಿತ್ತು. ಗ್ರಾಮದಲ್ಲಿಯೇ ಕೋಣ ಓಡಾಡಿಕೊಂಡು ಮೇವು ತಿಂದುಕೊಂಡು ಇತ್ತು. ಈಗ ಎರಡು ತಿಂಗಳ ಹಿಂದೆ ದೇವರ ಕೋಣ ನಾಪತ್ತೆಯಾಗಿದೆ. ಗ್ರಾಮದ ಜನರು ಹಾಗೂ ಸಮಿತಿ ಸದಸ್ಯರು ಹುಡುಕಾಟ ನಡೆಸಿದರೂ ಕೋಣ ಮಾತ್ರ ಪತ್ತೆಯಾಗಿಲ್ಲ. ಇದೀಗ ಗ್ರಾಮಸ್ಥರು ದೇವರ ಕೋಣ ಹುಡುಕಿಕೊಡುವಂತೆ ರಟ್ಟಿಹಳ್ಳಿ ಪೊಲೀಸರಿಗೆ ಮನವಿ ಮಾಡಿದ್ದಾರೆ.