ಹಾಸನ:ಇಲ್ಲಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಇಂದು ನಾಮಪತ್ರ ಸಲ್ಲಿಸಿದರು. ಇವರು ತಮ್ಮ ಅಫಿಡವಿಟ್ನಲ್ಲಿ ಘೋಷಿಸಿಕೊಂಡಿರುವಂತೆ 41 ಕೋಟಿ ರೂ. ಮೌಲ್ಯದ ಚರ-ಸ್ಥಿರ ಆಸ್ತಿ ಹೊಂದಿದ್ದಾರೆ. ಪತ್ನಿ ಅಕ್ಷತಾ ಹೆಸರಿನಲ್ಲೂ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಶ್ರೇಯಸ್ ಪಟೇಲ್ ಬಳಿ 1.25 ಲಕ್ಷ ರೂ ನಗದು, ಪತ್ನಿ ಬಳಿ 3.94 ಲಕ್ಷ ರೂ ನಗದು, ವಿವಿಧ ಬ್ಯಾಂಕ್ನಲ್ಲಿ 6.23 ಲಕ್ಷ ರೂ ಠೇವಣಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಶ್ರೇಯಸ್ ಪಟೇಲ್ ಪತ್ನಿಗಿಂತ ಹೆಚ್ಚು ಚಿನ್ನಾಭರಣ ಹೊಂದಿದ್ದು, 59.65 ಲಕ್ಷ ಬೆಲೆ ಬಾಳುವ ಆಭರಣಗಳಿವೆ. ಪತ್ನಿ ಬಳಿ 22 ಲಕ್ಷ ಬೆಲೆ ಬಾಳುವ 450 ಗ್ರಾಂ ಚಿನ್ನ ಹಾಗೂ 1 ಕೆ.ಜಿ ಬೆಳ್ಳಿ ಇದೆ. ಒಟ್ಟು 1 ಕೋಟಿ 40 ಲಕ್ಷದ 96 ಸಾವಿರದ 246 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ 31 ಲಕ್ಷದ 14 ಸಾವಿರದ 917 ರೂ ಮೌಲ್ಯದ ಚರಾಸ್ತಿ ಇದೆ. ಶ್ರೇಯಸ್ ಅವರು ಪತ್ನಿ, ಸ್ನೇಹಿತರು ಹಾಗೂ ಬಂಧುಗಳಿಂದ 50 ಲಕ್ಷ ರೂ ಹಾಗೂ ತಾಯಿಯಿಂದ 3.64 ಲಕ್ಷ, ವ್ಯಕ್ತಿಯೊಬ್ಬರಿಂದ 88 ಲಕ್ಷ ಸಾಲ ಪಡೆದಿದ್ದಾರೆ.