ಕರ್ನಾಟಕ

karnataka

ಮುಳ್ಳಯ್ಯನಗಿರಿ ಸೇರಿದಂತೆ 77 ಪ್ರದೇಶಗಳಲ್ಲಿ ಜಿಯೋಲಾಜಿಕಲ್ ಸರ್ವೇ ತಂಡ ಪರಿಶೀಲನೆ: ಏಕೆ ಗೊತ್ತೆ? - geological survey

By ETV Bharat Karnataka Team

Published : Aug 11, 2024, 10:50 PM IST

ಗುಡ್ಡ, ಭೂ ಕುಸಿತ ಹಿನ್ನೆಲೆ ಜಿಯೋಲಾಜಿಕಲ್ ಸರ್ವೇ ತಂಡದಿಂದ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಪರಿಶೀಲನೆ ಆರಂಭವಾಗಿದೆ.

ಮುಳ್ಳಯ್ಯನಗಿರಿ ಸೇರಿದಂತೆ 77 ಪ್ರದೇಶಗಳಲ್ಲಿ ಜಿಯೋಲಾಜಿಕಲ್ ಸರ್ವೇ ತಂಡ ಪರಿಶೀಲನೆ
ಮುಳ್ಳಯ್ಯನಗಿರಿ ಸೇರಿದಂತೆ 77 ಪ್ರದೇಶಗಳಲ್ಲಿ ಜಿಯೋಲಾಜಿಕಲ್ ಸರ್ವೇ ತಂಡ ಪರಿಶೀಲನೆ (ETV Bharat)

ಚಿಕ್ಕಮಗಳೂರು:ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ ತಂಡದಿಂದ ಪರಿಶೀಲನೆ ಆರಂಭವಾಗಿದೆ.

ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ (ETV Bharat)

ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಮಲೆನಾಡು ಭಾಗದ ಅಪಾಯಕಾರಿ ಸ್ಥಳಗಳ ಪಟ್ಟಿ ಕೇಳಿತ್ತು. ಚಿಕ್ಕಮಗಳೂರು ಜಿಲ್ಲಾಡಳಿತ 77 ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿ ವರದಿ ಕಳುಹಿಸಿತ್ತು. ಈ ಹಿನ್ನೆಲೆ ಭಾನುವಾರದಿಂದ ಚಂದ್ರದ್ರೋಣ ಪರ್ವತಗಳ ಸಾಲಿನ ಕವಿಕಲ್ ಗಂಡಿ, ಮುಳ್ಳಯ್ಯನಗಿರಿ ಮಾರ್ಗ, ದತ್ತಪೀಠ ಸೇರಿದಂತೆ ಗಿರಿ ಭಾಗದಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್​ ಇಂಡಿಯಾ ತಂಡದಿಂದ ಪರಿಶೀಲನೆ ಆರಂಭವಾಗಿದೆ.

ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ (ETV Bharat)

ಹಿರಿಯ ಭೂ ವಿಜ್ಞಾನ ಅಧಿಕಾರಿ ಸೆಂಥಿಲ್ ಕುಮಾರ್ ನೇತೃತ್ವದ ತಂಡದಿಂದ ಸರ್ವೇ ಆರಂಭವಾಗಿದ್ದು, ಇನ್ನೂ ಎರಡು ದಿನ ಜಿಲ್ಲೆಯಾದ್ಯಂತ ಆಯಕಟ್ಟಿನ ಪ್ರದೇಶದಲ್ಲಿ ಸರ್ವೇ ನಡೆಸಲಿದ್ದಾರೆ.‌ ಚಿಕ್ಕಮಗಳೂರು ತಾಲೂಕಿನ ದತ್ತಪೀಠ ರಸ್ತೆಯಲ್ಲಿ ನೂರಾರು ಅಡಿ ಪ್ರಪಾತಕ್ಕೆ ರಸ್ತೆ ಕುಸಿದಿತ್ತು. ಆ ಜಾಗವೂ ಸೇರಿ ಮಲೆನಾಡು ಭಾಗದ ಚಿಕ್ಕಮಗಳೂರು, ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ ಸೇರಿದಂತೆ ಒಟ್ಟು 77 ಪ್ರದೇಶಗಳು ಡೇಂಜರಸ್​ ಎಂದು ಜಿಲ್ಲಾಡಳಿತ ವರದಿ ನೀಡಿದ್ದು, ಅಲ್ಲಿ ಸರ್ವೇ ಕಾರ್ಯ ಆರಂಭವಾಗಿದೆ.

ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ (ETV Bharat)

ಇದನ್ನೂ ಓದಿ:ಭತ್ತ ನಾಟಿ ಮಾಡಿದ ಕೇಂದ್ರ ಸಚಿವ ಹೆಚ್ ​ಡಿ ಕುಮಾರಸ್ವಾಮಿ; ಹೀಗೆ ಎಲ್ರೂ ಗದ್ದೆಗಿಳಿದ್ರೆ ನಮ್ಮ ಹುಡುಗರಿಗೆ ಹೆಣ್ಣು ಸಿಗೋದು ಸುಲಭ ಅಂದ್ರು ಮಂಡ್ಯ ರೈತ - HD KUMARASWAMY PLANTS PADDY

ABOUT THE AUTHOR

...view details