ಬೆಂಗಳೂರು:ಗ್ಯಾಸ್ ಸೋರಿಕೆಯಿಂದ ಸಿಲಿಂಡರ್ ಗೋದಾಮಿನ ಬಳಿ ಸ್ಫೋಟ ಸಂಭವಿಸಿರುವ ಘಟನೆ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯ ಮಾವಳ್ಳಿಯ ಕೃಂಬಿಗಲ್ ರಸ್ತೆಯಲ್ಲಿ ನಡೆದಿದೆ. ಸುಮಾರು 300ಕ್ಕೂ ಅಧಿಕ ಸಿಲಿಂಡರ್ಗಳನ್ನ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ನೋಡಿಕೊಳ್ಳಲು ಓರ್ವ ವ್ಯಕ್ತಿ ಸಹ ಇದ್ದ. ಗ್ಯಾಸ್ ಗೋದಾಮಿನ ಪಕ್ಕದಲ್ಲೇ ಆತನ ರೂಮ್ ಇತ್ತು. ಆತನ ರೂಮ್ನಲ್ಲಿದ್ದ ಸಿಲಿಂಡರ್ನಿಂದ ಗ್ಯಾಸ್ ಸೋರಿಕೆಯಾದ ಪರಿಣಾಮ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು, ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ.
ಬೆಂಗಳೂರು: ಸಿಲಿಂಡರ್ ಗೋದಾಮಿನ ಪಕ್ಕದಲ್ಲೇ ಸ್ಫೋಟ, ತಪ್ಪಿದ ಭಾರೀ ಅನಾಹುತ - Gas leakage and explosion - GAS LEAKAGE AND EXPLOSION
ಸಿಲಿಂಡರ್ ಗೋದಾಮಿನ ಪಕ್ಕದಲ್ಲೇ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡಿದ್ದು, ಸಂಭವಿಸಬೇಕಾಗಿದ್ದ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತಪ್ಪಿದ ಭಾರಿ ಅನಾಹುತ
Published : Mar 22, 2024, 1:47 PM IST
ಸ್ಫೋಟದಿಂದ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಸ್ಥಳಕ್ಕೆ ಕಲಾಸಿಪಾಳ್ಯ ಠಾಣಾ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ:ಕೇಜ್ರಿವಾಲ್ ಬಂಧನ ಖಂಡಿಸಿ ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ ಆಪ್ - AAP Protest