ಬಾಗಲಕೋಟೆ: ಕ್ಯಾಂಟರ್ ಹಾಗೂ ಕಾರು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಬಳಿಯ ಧನ್ನೂರು ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಲಕ್ಷ್ಮಣ ವಡ್ಡರ್ (55), ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕ (50) ಮತ್ತು ಕಾರು ಚಾಲಕ ರಫಿಕ್ ಮುಲ್ಲಾ (25) ಮೃತರು. ಮೃತರೆಲ್ಲರೂ ವಿಜಯಪುರ ಜಿಲ್ಲೆಯ ಬಿದರಕುಂದಿ ಗ್ರಾಮದವರೆಂದು ತಿಳಿದು ಬಂದಿದೆ.
ಹುನಗುಂದ ಬಳಿ ಕ್ಯಾಂಟರ್-ಕಾರು ಡಿಕ್ಕಿ: ನಾಲ್ವರು ದುರ್ಮರಣ - Hunagunda Accident - HUNAGUNDA ACCIDENT
ಹುನುಗುಂದ ಬಳಿ ಕಳೆದ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
![ಹುನಗುಂದ ಬಳಿ ಕ್ಯಾಂಟರ್-ಕಾರು ಡಿಕ್ಕಿ: ನಾಲ್ವರು ದುರ್ಮರಣ - Hunagunda Accident ಹುನಗುಂದ ಬಳಿ ಕ್ಯಾಂಟರ್ ಕಾರು ಡಿಕ್ಕಿ](https://etvbharatimages.akamaized.net/etvbharat/prod-images/26-09-2024/1200-675-22541060-thumbnail-16x9-accidentnews.jpg)
ಹುನಗುಂದ ಬಳಿ ಕ್ಯಾಂಟರ್ ಕಾರು ಡಿಕ್ಕಿ (ETV Bharat)
Published : Sep 26, 2024, 10:00 AM IST
ಮುದ್ದೇಬಿಹಾಳ ಕಡೆ ಹೊರಟಿದ್ದ ಇವರಿದ್ದ ಕಾರು ಮತ್ತು ಹುನಗುಂದತ್ತ ಬರುತ್ತಿದ್ದ ಕ್ಯಾಂಟರ್ ಮಧ್ಯೆ ತಡರಾತ್ರಿ 2 ಗಂಟೆಯ ವೇಳೆಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರು ನುಜ್ಜುಗುಜ್ಜಾಗಿದ್ದು, ಕ್ಯಾಂಟರ್ ಪಲ್ಟಿಯಾಗಿದೆ. ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮಹಾಲಕ್ಷ್ಮಿಯ ಬರ್ಬರ ಹತ್ಯೆ ಪ್ರಕರಣ: ಶಂಕಿತ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ! - Bengaluru Murder Case