ಕರ್ನಾಟಕ

karnataka

ETV Bharat / state

ದೈನಂದಿನ ತಪಾಸಣೆಗಾಗಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದೇನೆ ಅಷ್ಟೇ: ಹೆಚ್​ ಡಿ ದೇವೇಗೌಡ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

former-prime-minister-hd-devegowda-admitted-to-hospital
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆಸ್ಪತ್ರೆಗೆ ದಾಖಲು

By ETV Bharat Karnataka Team

Published : Feb 15, 2024, 5:28 PM IST

Updated : Feb 15, 2024, 7:02 PM IST

ಬೆಂಗಳೂರು : ಜ್ವರ ಮತ್ತು ಗಂಟಲು ನೋವಿನಿಂದಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು‌ ಮಧ್ಯಾಹ್ನದ ವೇಳೆ ಗೌಡರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯರು‌ ಚಿಕಿತ್ಸೆ ನೀಡುತ್ತಿದ್ದು, ಇಂದು ಆಸ್ಪತ್ರೆಯಲ್ಲೇ ಇರಲು ಸೂಚನೆ ನೀಡಿದ್ದಾರೆ. ಗಾಬರಿಯಾಗುವಂತಹ ಪರಿಸ್ಥಿತಿ ಇಲ್ಲ. ದೇವೇಗೌಡರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ದೇವೇಗೌಡ ಪೋಸ್ಟ್​:''ನನ್ನ ಆರೋಗ್ಯಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಗಳಲ್ಲಿ ಕೆಲವು ಉತ್ಪ್ರೇಕ್ಷಿತ ವರದಿಗಳು ಆಗುತ್ತಿವೆ. ನಾನು ದೈನಂದಿನ ತಪಾಸಣೆಗಾಗಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಶೀಘ್ರದಲ್ಲೇ ಮನೆಗೆ ಹಿಂತಿರುಗುತ್ತೇನೆ. ಯಾವುದೇ ಆತಂಕಪಡಬೇಕಿಲ್ಲ'' ಎಂದು ದೇವೇಗೌಡರು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:ಮಂಡ್ಯ ಅಭ್ಯರ್ಥಿ ಆಯ್ಕೆ ಕುಮಾರಸ್ವಾಮಿ ಹೆಗಲಿಗೆ: ಲೋಕಸಭೆಗೆ ಹೆಚ್​ಡಿಕೆ ಸ್ಪರ್ಧಿಸಲ್ಲವೆಂದ ದೇವೇಗೌಡರು

Last Updated : Feb 15, 2024, 7:02 PM IST

ABOUT THE AUTHOR

...view details