ಕರ್ನಾಟಕ

karnataka

ETV Bharat / state

ನಾನಿನ್ನೂ ಬದುಕಿದ್ದೇನೆ, ಜೆಡಿಎಸ್ ಮುಗಿಸುವುದು ಅಷ್ಟು ಸುಲಭವಲ್ಲ: ಹೆಚ್. ಡಿ ದೇವೇಗೌಡ - HASSAN LOK SABHA CONSTITUENCY - HASSAN LOK SABHA CONSTITUENCY

ಸಿಎಂ ಸಿದ್ದರಾಮಯ್ಯ ಅವರು ಭಾಷಣವೊಂದರಲ್ಲಿ ಜೆಡಿಎಸ್ ಎಲ್ಲಿದೆ? ಎಂದು ಅಧಿಕಾರದ ಅಹಂನಿಂದ ಮಾತನಾಡಿದ್ದಾರೆ. ಅವರ ಅಹಂಕಾರಕ್ಕೆ ಈ ಬಾರಿಯ ಚುನಾವಣೆಯಲ್ಲೇ ತಕ್ಕ ಉತ್ತರವನ್ನು ಜನತೆ ನೀಡಲಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ
ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ

By ETV Bharat Karnataka Team

Published : Mar 31, 2024, 10:38 PM IST

ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ

ಹಾಸನ : ಜೆಡಿಎಸ್ ಪಕ್ಷ ಮುಗಿಸಲು ಕಾಂಗ್ರೆಸ್ ನಾಯಕರು ಕರೆ ಕೊಟ್ಟಿದ್ದಾರೆ. ಆದರೆ ನಾನು ಇನ್ನೂ ಬದುಕಿದ್ದೇನೆ. ಜೆಡಿಎಸ್ ಮುಗಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಇನ್ನು ಮೊಸಳೆ ಹೊಸಳ್ಳಿ ತಾಲೂಕು ಕೇಂದ್ರ ಆಗುವುದರಲ್ಲಿ ಯಾವ ಸಂಶಯವಿಲ್ಲ ಎಂದಿದ್ದಾರೆ.

ತಾಲೂಕಿನ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಭಾನುವಾರದಂದು ನಡೆದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಅವರು ಭಾಷಣವೊಂದರಲ್ಲಿ ಜೆಡಿಎಸ್ ಎಲ್ಲಿದೆ? ಎಂದು ಅಧಿಕಾರದ ಅಹಂನಿಂದ ಮಾತನಾಡಿದ್ದಾರೆ. ಅವರ ಅಹಂಕಾರಕ್ಕೆ ಈ ಬಾರಿಯ ಚುನಾವಣೆಯಲ್ಲೇ ತಕ್ಕ ಉತ್ತರವನ್ನು ಜನತೆ ನೀಡಲಿದ್ದಾರೆ ಎಂದರು.

ಕಾಂಗ್ರೆಸ್ ಎಲ್ಲಿದೆ? ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗುತ್ತದೆ. ಕರ್ನಾಟಕ ಸೇರಿ ಇನ್ನುಳಿದ ಎರಡು ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್, ಜೆಡಿಎಸ್ ಮುಗಿಸುವ ಮಾತನ್ನ ಆಡುತ್ತಿದ್ದಾರೆ. ಇಡೀ ಬೆಂಗಳೂರಿನ ಆದಾಯವನ್ನು ಕೇವಲ ಒಬ್ಬ ಕಾಂಗ್ರೆಸ್ ನಾಯಕ ವಸೂಲಿ ಮಾಡುತ್ತಿದ್ದಾರೆ. ರಾಜ್ಯದ ಜನರ ತೆರಿಗೆ ಹಣ ಹೊರ ರಾಜ್ಯದ ಪಾಲಾಗುತ್ತಿದೆ ಎಂದರು.

ಹಾಸನ ಜಿಲ್ಲೆಯಲ್ಲಿ ಏನು ಕೆಲಸ ಬಾಕಿ ಉಳಿದಿದೆ ಎಂಬುದು ಅವರಿಗೆ ಗೊತ್ತಿಲ್ಲ. ಅಷ್ಟು ಕೆಲಸವನ್ನು ಹೆಚ್. ಡಿ ರೇವಣ್ಣ ಅವರು ಮಾಡಿದ್ದಾರೆ. ಯಾರಾದರೂ ಶ್ರವಣಬೆಳಗೊಳದಿಂದ ಮೊಸಳೆ ಹೊಸಳ್ಳಿ ಮಾರ್ಗವಾಗಿ ರೈಲ್ವೆ ಸಂಪರ್ಕ ಕಲ್ಪಿಸುವಂತೆ ಸಲಹೆ ನೀಡಿದರೆ, ನಾಳೆ ರೈಲ್ವೆ ಸಚಿವರನ್ನು ಈ ಗಿರಾಕಿ ಬಿಡುವುದೇ ಇಲ್ಲ ಎಂದು ಹೆಚ್. ಡಿ ರೇವಣ್ಣ ಅವರನ್ನು ಹಾಡಿ ಹೊಗಳಿದರು.

ಜಿಲ್ಲೆಯಲ್ಲಿ ಏನಾದರೂ ಕೆಲಸ ಮಾಡಬೇಕು ಎಂದು ರೇವಣ್ಣ ಅವರ ಮನಸ್ಸಿಗೆ ಬಂದರೆ ಮುಗೀತು. ಅದನ್ನ ಅವರು ಮಾಡಿಯೇ ತೀರುವುದು ಸ್ವಭಾವ. ಹಾಗೆ ಅನಿಸಿದ್ದನ್ನು ಮಾಡಿ ಮುಗಿಸುವವರೆಗೂ ಬಿಡುವುದಿಲ್ಲ. ಆದುದರಿಂದ ಈಗಾಗಲೇ ಮೊಸಳೆ ಹೊಸಳ್ಳಿ ಹೋಬಳಿ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇದು ತಾಲೂಕು ಕೇಂದ್ರ ಆಗುವಲ್ಲಿ ಯಾವುದೇ ಸಂಶಯ ಇಲ್ಲ ಎಂದು ಭವಿಷ್ಯ ಹೆಚ್​ ಡಿ ದೇವೇಗೌಡರು ಭರವಸೆ ನೀಡಿದರು.

ಇದನ್ನೂ ಓದಿ :ಒಕ್ಕಲಿಗ ಸಮುದಾಯ ಈ ಚುನಾವಣೆಯಲ್ಲಿ ನನ್ನೊಂದಿಗೆ ಇರಲಿದೆ : ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ - TUMKURU LOK SABHA CONSTITUENCY

ABOUT THE AUTHOR

...view details