ಮೈಸೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಂಡತಿ ಪಾರ್ವತಿ ಅವರು 14 ಬದಲಿ ನಿವೇಶನ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಮುಂದುವರೆದಿದೆ. ಇಂದು ಮುಡಾ ಮಾಜಿ ಆಯುಕ್ತರಾದ ಕಾಂತರಾಜು ಅವರು ಲೋಕಾಯುಕ್ತ ಎಸ್. ಪಿ ಉದೇಶ್ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಮುಡಾದಲ್ಲಿ ನಡೆದ ವ್ಯವಹಾರದ ಬಗ್ಗೆ ವಿಚಾರಣೆ ಕರೆದಿದ್ದರು. 2017ರಲ್ಲಿ ನಾನು ಮುಡಾ ಆಯುಕ್ತನಾಗಿದ್ದೆ. ಆಗ ಪಾರ್ವತಿಯವರು ಪಡೆದಿದ್ದ ಭೂಮಿಯ ಪರಿಹಾರದ ಬಗ್ಗೆ ಇಂದು ವಿಚಾರಣೆ ನಡೆಯಿತು ಎಂದಿದ್ದಾರೆ.