ಬೆಳಗಾವಿ: ಮಾಜಿ ವಿಧಾನ ಪರಿಷತ್ ಸದಸ್ಯೆ ಸುನಂದಾ ಲಿಂಗನಗೌಡ ಪಾಟೀಲ (71) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದವರಾದ ಸುನಂದಾ ಪಾಟೀಲ ಒಂದು ಬಾರಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಬೆಳಗಾವಿ: ಮಾಜಿ ಎಂಎಲ್ಸಿ ಸುನಂದಾ ಪಾಟೀಲ ವಿಧಿವಶ - Sunanda Patil passes away - SUNANDA PATIL PASSES AWAY
ಅನಾರೋಗ್ಯದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಎಂಎಲ್ಎಸಿ ಸುನಂದಾ ಲಿಂಗನಗೌಡ ಪಾಟೀಲ (71) ಭಾನುವಾರ ನಿಧನರಾಗಿದ್ದಾರೆ.
![ಬೆಳಗಾವಿ: ಮಾಜಿ ಎಂಎಲ್ಸಿ ಸುನಂದಾ ಪಾಟೀಲ ವಿಧಿವಶ - Sunanda Patil passes away former-mlc-sunanda-patil-passes-away](https://etvbharatimages.akamaized.net/etvbharat/prod-images/14-04-2024/1200-675-21221822-thumbnail-16x9-ck.jpg)
ಬೆಳಗಾವಿ: ಮಾಜಿ ಎಂಎಲ್ಸಿ ಸುನಂದಾ ಪಾಟೀಲ ವಿಧಿವಶ
Published : Apr 14, 2024, 3:18 PM IST
ಅಂತ್ಯಸಂಸ್ಕಾರವನ್ನು ಇಂದು ಸಂಜೆ ಹಿರೇಬಾಗೇವಾಡಿ ಗ್ರಾಮದ ತೋಟದ ಮನೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.