ದಾವಣಗೆರೆ : ಸಚಿವ ಜಮೀರ್ ಅಹಮ್ಮದ್ ಖಾನ್ ಹಿಂದೂಗಳ ಮಠದ ಆಸ್ತಿ, ರೈತರ ಆಸ್ತಿ ನುಂಗಲು ಮುಂದಾಗಿದ್ದಾನೆ. ವಕ್ಫ್ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಜನ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಮೀರ್ ವಕ್ಫ್ ಸಚಿವ ಆದ ನಂತರ ದೇವಸ್ಥಾನ, ಮಠ - ಮಂದಿರಕ್ಕೆ ನೋಟಿಸ್ ಕೊಡುವ ಕೆಲಸ ಆಗಿದೆ. ಹಿಂದಿನ ಕಾಂಗ್ರೆಸ್ ನಾಯಕರು ಕರಾಳ ವಕ್ಫ್ ಕಾನೂನು ಜಾರಿಗೆ ತಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ಅವರು ಮಾತನಾಡಿದರು (ETV Bharat) ವಾಜಪೇಯಿ, ಮೋದಿ ಪ್ರಧಾನಿ ಆಗದಿದ್ದರೆ ಭಾರತ ಪಾಕಿಸ್ತಾನ ಆಗ್ತಾ ಇತ್ತು :ವಾಜಪೇಯಿ, ಮೋದಿ ಪ್ರಧಾನಿ ಆಗದಿದ್ದರೆ ಭಾರತ ಪಾಕಿಸ್ತಾನ ಆಗ್ತಾ ಇತ್ತು. ಹಿಂದೂ ರಾಷ್ಟ್ರ ಉಳಿಸಲು ಶ್ರೀರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ವಕ್ಫ್ ರದ್ದತಿಗೆ ಮೋದಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅದಕ್ಕೆ ಹಿಂದೂಗಳು ಬೆಂಬಲ ಕೊಡಬೇಕು. ಎಲ್ಲ ಮಠಾಧೀಶರು ಹೋರಾಟಕ್ಕೆ ಇಳಿಯಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಕ್ತ ಮಾಡಲು ನಾವು ಹೋರಾಟ ಮಾಡಬೇಕು, ಹಿಂದೂಗಳು ಉಳಿಯಲು ಎಲ್ಲರೂ ಒಂದಾಗಬೇಕು. ಮೂರು ಚುನಾವಣೆ ಮೇಲೆ ದುಷ್ಪರಿಣಾಮ ತಪ್ಪಿಸಲು ನೋಟಿಸ್ ಹಿಂಪಡೆಯಲು ಸಿದ್ದರಾಮಯ್ಯ ಹೇಳಿದ್ದಾರೆ. ಕಾಲಂ ನಂಬರ್ 11 ತೆಗೆಯಲು ಹೇಳಿಲ್ಲ. ವಕ್ಫ್ ಹಠಾವೋ ಅಲ್ಲ, ಕಾಂಗ್ರೆಸ್ ಹಠಾವೋ ಎನ್ನಬೇಕಿದೆ ಎಂದರು.
ಇದನ್ನೂ ಓದಿ :ಮುಜರಾಯಿ ದೇವಾಲಯಗಳ ಆಸ್ತಿ ರಕ್ಷಣೆಗೆ ಮುಂದಾದ ಸರ್ಕಾರ; ಶೀಘ್ರದಲ್ಲೇ ಒತ್ತುವರಿ ತೆರವು