ಕರ್ನಾಟಕ

karnataka

ETV Bharat / state

ಪಕ್ಷ, ದೇಶದ ಹಿತ ನೋಡಿ ಈಶ್ವರಪ್ಪ ತೀರ್ಮಾನ ಕೈಗೊಳ್ಳಲಿ: ಸಿ ಟಿ ರವಿ - Former minister C T Ravi

ಈಶ್ವರಪ್ಪ ನಮ್ಮ ಹಿರಿಯ ನಾಯಕರು, ಅವರು ಯಾವುದೇ ನಿರ್ಣಯ ತೆಗೆದುಕೊಂಡರೂ ಸಾವಿರ ಬಾರಿ ಯೋಚಿಸಲಿ ಎಂದು ಮಾಜಿ ಸಚಿವ ಸಿ ಟಿ ರವಿ ಸಲಹೆ ನೀಡಿದ್ದಾರೆ.

former-minister-c-t-ravi-reaction-on-k-s-eshwarappa
ದೇಶದ ಹಿತ ನೋಡಿ ಈಶ್ವರಪ್ಪ ತೀರ್ಮಾನ ಮಾಡಲಿ: ಸಿ ಟಿ ರವಿ

By ETV Bharat Karnataka Team

Published : Mar 15, 2024, 3:48 PM IST

ಬೆಂಗಳೂರು: ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ಪಕ್ಷ, ದೇಶದ ಹಿತ ನೋಡಿಕೊಂಡು ಈಶ್ವರಪ್ಪ ತೀರ್ಮಾನ ಮಾಡಲಿ ಎಂದು ಮಾಜಿ ಸಚಿವ ಸಿ ಟಿ ರವಿ ಮನವಿ ಮಾಡಿದ್ದಾರೆ. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅಸಮಾಧಾನ ಮತ್ತು ಇಂದು ಬೆಂಬಲಿಗರ ಸಭೆ ಕರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಈಶ್ವರಪ್ಪ ನಮ್ಮ ಹಿರಿಯ ನಾಯಕರು ಅವರು ಯಾವುದೇ ನಿರ್ಣಯ ತೆಗೆದುಕೊಂಡರೂ ಸಾವಿರ ಬಾರಿ ಯೋಚಿಸಲಿ. ಅವರ ನೋವು, ಅವರ ಭಾವನೆ ನಮಗೆ ಅರ್ಥ ಆಗುತ್ತದೆ ಎಂದರು.

ಯಾರಿಗೂ ಅಸಮಾಧಾನ ಇಲ್ಲ, ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಕೆಲವು ಕ್ಷೇತ್ರಗಳಲ್ಲಿ ಒಳಪೆಟ್ಟು ಆತಂಕ ವಿಚಾರದ ಸನ್ನಿವೇಶವಿರಬಹುದು. ಆದರೆ, ಯಾವುದೂ ಒಳಪೆಟ್ಟು ಇರಲ್ಲ. ಎಲ್ಲರ ಜತೆ ವೈಯಕ್ತಿಕವಾಗಿ ಮಾತಾಡುವ ಕೆಲಸ ಆಗಿದೆ. ಒಂದೊಂದು ಮತವೂ ಎಲ್ಲರಿಗೂ‌ ಮುಖ್ಯ, ಒಂದೊಂದು ಸೀಟೂ‌ ಮುಖ್ಯ. ಅಸಮಾಧಾನಿತರ ಮನವೊಲಿಕೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದವರಿಗೂ ಟಿಕೆಟ್ ಸಿಕ್ಕಿಲ್ಲ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಯಾರನ್ನು ಉದ್ದೇಶವಾಗಿ ಇಟ್ಟುಕೊಂಡು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಹಾಗಾಗಿ ನಾನು ಆ ಬಗ್ಗೆ ಮಾತನಾಡಲ್ಲ, ನಾನು ಆಕಾಂಕ್ಷಿಯೇ ಆಗಿರಲಿಲ್ಲ. ನಾನು ಆಕಾಂಕ್ಷಿಯೇ ಅಲ್ಲ ಅಂದ ಮೇಲೆ ಆ ಪ್ರಶ್ನೆಯೇ ಬರಲ್ಲ ನಾನು ಟಿಕೆಟ್ ಕೇಳಿರಲಿಲ್ಲ. ಹೈಕಮಾಂಡ್ ಟಿಕೆಟ್ ಕೊಟ್ಟಿದ್ದರೆ ಸ್ಪರ್ಧೆ ಮಾಡುತ್ತಿದ್ದೆ ಅಷ್ಟೆ. ನಾನು ಆಕಾಂಕ್ಷಿ ಆಗಿದ್ದಿದ್ದರೆ ಅದಕ್ಕೆ ಪೂರಕ ಪ್ರಯತ್ನ ಮಾಡುತ್ತಿದ್ದೆ. ಇಡೀ 28 ಕ್ಷೇತ್ರಗಳಲ್ಲಿ ಯಾವ್ಯಾವ ವ್ಯಕ್ತಿಗೆ ಯಾವ್ಯಾವ ಪಕ್ಷದವರಿಗೆ ಜನಾಭಿಪ್ರಾಯ ಇತ್ತು ಅಂತ ಗೊತ್ತಾಗುತ್ತದೆ. ಸರ್ವೆಗಳು ಆರ್ಟಿಫಿಶಿಯಲ್, ಫ್ಯಾಬ್ರಿಕ್, ಆರ್ಗ್ಯಾನಿಕ್, ಮಾಧ್ಯಮಗಳ‌ ಸಮೀಕ್ಷೆಯೇ ವಾಸ್ತವಿಕತೆ ಮುಂದಿಟ್ಟಿದೆ ಎಂದರು.

ಬಹುತೇಕ ಜನ ಮೋದಿ ಹೆಸರಿಗೇ ಮತ ಹಾಕೋದು: ಕಳೆದ ಸಲವೂ ಮಾರ್ಚ್ 16 ರಂದೇ ಲೋಕಸಭೆ ಚುನಾವಣೆ ದಿನಾಂಕ ಘೋಷಿಸಿದ್ದರು. ಈ ಬಾರಿಯೂ ಮಾರ್ಚ್ 16 ರಂದೇ ಘೋಷಣೆ ಆಗುತ್ತಿದೆ. ಈ ಬಾರಿ ಏಳೆಂಟು ಹಂತಗಳಲ್ಲಿ ಚುನಾವಣೆ ನಡೆಯಬಹುದು. ಜನಾಭಿಪ್ರಾಯ ಬಿಜೆಪಿ ಕಡೆ ಇರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾಂಗ್ರೆಸ್​ಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಒಂದು ಮಾತು ಸತ್ಯ, ಬಹುತೇಕ ಜನ ಮೋದಿ ಹೆಸರಿಗೇ ಮತ ಹಾಕೋದು ಹಾಗಾಗಿ ಯಾರೂ ಸಹ ಮತ ನನಗೆ ಬಂತು ನನಗೆ ಬಂತು ಅಂತ ಅಂದುಕೊಳ್ಳಬಾರದು. ಆ ಮತ ಮೋದಿಯವರಿಗೇ ಬಂದಿದ್ದು ಅಂತ ಮನಸಲ್ಲಿ ಇಟ್ಕೊಂಡಿರಬೇಕು. ನಮ್ಮ ಊರಿನ ಸುಗ್ಗಿ ಹಬ್ಬಕ್ಕೂ ಮುನ್ನ ಕರ್ನಾಟಕದ ಚುನಾವಣೆ ಮುಗಿಯಲಿ. ಈ ವರ್ಷವಾದರೂ ಹಬ್ಬದಲ್ಲಿ ಆನಂದವಾಗಿ ಪಾಲ್ಗೊಳ್ಳಬಹುದು ಎಂದು ಹೇಳಿದರು.

ಇದನ್ನೂ ಓದಿ:ನನ್ನ ಮಗನಿಗೆ ಟಿಕೆಟ್ ತಪ್ಪಲು ಯಡಿಯೂರಪ್ಪ-ವಿಜಯೇಂದ್ರ ಕಾರಣ: ಈಶ್ವರಪ್ಪ ಆರೋಪ

ABOUT THE AUTHOR

...view details