ಬೆಂಗಳೂರು:ನಮ್ಮ ಮೆಟ್ರೋದ ಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ‘ಗುಲಾಬಿ’ ಮಾರ್ಗದಲ್ಲಿ ಮೊದಲ ಬಾರಿಗೆ ಚೌಕಾಕಾರದ ಸುರಂಗ ನಿರ್ಮಿಸಲಾಗಿದೆ. ಬಾಕ್ಸ್ ಪುಶಿಂಗ್ ಟೆಕ್ನಾಲಜಿ ಬಳಸಿ ಅಂದರೆ, ಟಿಬಿಎಂನಿಂದ ವೃತ್ತಾಕಾರದ ಸುರಂಗ ಕೊರೆಯದೆ. ಕಾಂಕ್ರೀಟ್‌ನ ಚೌಕಟ್ಟುಗಳನ್ನು ಅಳವಡಿಸಿ ಸುರಂಗವನ್ನು ರೂಪಿಸಲಾಗಿದೆ.
ಒಟ್ಟಾರೆ 21 ಕಿಮೀ ಇರುವ ಈ ಮಾರ್ಗದಲ್ಲಿ 13ಕಿಮೀ ಸುರಂಗ ಇರಲಿದ್ದು, ಕಾಮಗಾರಿ ಬಹುತೇಕ ಅಂತಿಮ ಘಟ್ಟ ತಲುಪಿದೆ. ನಾಗವಾರ ಅಂಡರ್‌ಗ್ರೌಂಡ್ ನಿಲ್ದಾಣದ ದಕ್ಷಿಣ ಭಾಗದಲ್ಲಿ ಸರ್ವಿಸ್ ರಸ್ತೆ ಮತ್ತು ಹೊರವರ್ತುಲ ಮೇಲ್ಸೇತುವೆಯ ಕೆಳಗೆ 77ಮೀಟರ್ ಉದ್ದ ಸುರಂಗವನ್ನು ಈ ರೀತಿ ಚೌಕಾಕಾರವಾಗಿ ನಿರ್ಮಿಸಲಾಗಿದೆ. ಇದಕ್ಕಾಗಿ ಎಂಟು ಬಾಕ್ಸ್‌ಗಳನ್ನು ಬಳಸಲಾಗಿದೆ.
ಬಾಕ್ಸ್ ಪುಶಿಂಗ್ ಟೆಕ್ನಾಲಜಿ ಬಳಸಿ ಸುರಂಗ ಮಾರ್ಗ ನಿರ್ಮಾಣ (ETV Bharat) ಈವರೆಗೆ ಮೆಟ್ರೋ ಸುರಂಗವನ್ನು ಟನಲ್ ಬೋರಿಂಗ್ ಮಷಿನ್ ಮೂಲಕ ವೃತ್ತಾಕಾರವಾಗಿ ಕೊರೆಯಲಾಗುತ್ತಿತ್ತು. ಈಗಿನ ಬಾಕ್ಸ್ ಪುಶಿಂಗ್ ತಂತ್ರಜ್ಞಾನದಿಂದ ರೂಪಿಸಿದ ಸುರಂಗ ಚೌಕಾಕಾರದಲ್ಲಿ, ಬಾಕ್ಸ್ ರೀತಿಯಲ್ಲಿ ಕಾಣಿಸುತ್ತದೆ.
ಮೇಲ್ಸೇತುವೆ ಇರುವುದರಿಂದ ಹಾಗೂ ಅದರ ಕೆಳಭಾಗದ ವೈರ್, ಕೇಬಲ್‌ಗಳ ಸ್ಥಳಾಂತರ ಮಾಡುವುದನ್ನು ತಪ್ಪಿಸಲು ಚೌಕಾಕಾರದ ಸುರಂಗ ನಿರ್ಮಿಸಲಾಗಿದೆ. ಜೊತೆಗೆ ಚೌಕ ಸುರಂಗದೊಳಗೆ ವಿದ್ಯುತ್ ಸಂಪರ್ಕ ಹಾಗೂ ಇನ್ನಿತರ ಸೌಲಭ್ಯ ಅಳವಡಿಸಲು ಸಾಕಷ್ಟು ಸ್ಥಳ ಸಿಗುವ ಕಾರಣಕ್ಕಾಗಿ ಈ ಮಾದರಿಯ ಸುರಂಗ ನಿರ್ಮಿಸಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಬಾಕ್ಸ್ ಪುಶಿಂಗ್ ಟೆಕ್ನಾಲಜಿ ಬಳಸಿ ಸುರಂಗ ಮಾರ್ಗ ನಿರ್ಮಾಣ (ETV Bharat) ಮೆಟ್ರೋ ಗುಲಾಬಿ ಮಾರ್ಗ 2025ರಲ್ಲಿ ಪೂರ್ಣಗೊಳಿಸಲಿದ್ದೇವೆ. ಎಂ.ಜಿ. ರಸ್ತೆ ನಿಲ್ದಾಣ ಈಗಿನ ನೇರಳೆ ಮಾರ್ಗ ಹಾಗೂ ಗುಲಾಬಿ ಮಾರ್ಗದ ನಡುವಣ ಇಂಟರ್‌ಚೇಂಜ್ ಆಗಿ ಬಳಕೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಈ ಋತುವಿನ ಆಳಸಮುದ್ರ ಮೀನುಗಾರಿಕೆ ಇಂದಿಗೆ ಅಂತ್ಯ: ನಷ್ಟದಲ್ಲೇ ವೃತ್ತಿ ನಡೆಸಿದ ಕಡಲ ಮಕ್ಕಳು - Deep Sea Fishing