ಬೆಂಗಳೂರು: ಆನ್ಲೈನ್ನಲ್ಲಿ ಫುಡ್ ಡೆಲಿವರಿ ಮಾಡುವಾಗ ಯುವತಿ ಕೈ ಸ್ಪರ್ಶಿಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಡೆಲಿವರಿ ಬಾಯ್‌ವೋರ್ವನನ್ನು ಎಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಕಲಬುರಗಿಯ ಚಿಂಚೋಳಿ ಮೂಲದ ಆಕಾಶ್ ಬಂಧಿತ ಆರೋಪಿ. ಕುಂದಲಹಳ್ಳಿಯ ಪಿ.ಜಿ.ಯಲ್ಲಿ ವಾಸವಾಗಿದ್ದ. ಇದೇ ತಿಂಗಳು 17ರಂದು ಯುವತಿ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಿದ್ದಳು. ಡೆಲಿವರಿ ನೀಡಲು ಆಕಾಶ್, ಯುವತಿಯ ಮನೆಗೆ ಬಂದಿದ್ದಾನೆ. ಫುಡ್ ಡೆಲಿವರಿ ವೇಳೆ ಕುಡಿಯಲು ನೀರು ಕೊಡುವಂತೆ ಕೇಳಿದ್ದಾನೆ. ಇದೇ ಸಂದರ್ಭದಲ್ಲಿ ವಾಶ್ ರೂಮ್‌ಗೆ ಹೋಗಬೇಕೆಂದೂ ಹೇಳಿದ್ದು, ಯುವತಿ ಅನುವು ಮಾಡಿಕೊಟ್ಟಿದ್ದಳು.