ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯ - Shivamogga Flood Relief Works - SHIVAMOGGA FLOOD RELIEF WORKS

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮಳೆ
ಶಿವಮೊಗ್ಗದಲ್ಲಿ ನಿರಂತರ ಮಳೆಗೆ ಕುಸಿದ ರಸ್ತೆ ತಡೆಗೋಡೆ (ETV Bharat)

By ETV Bharat Karnataka Team

Published : Jul 23, 2024, 8:06 AM IST

ಶಿವಮೊಗ್ಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳು (ETV Bharat)

ಶಿವಮೊಗ್ಗ:ಜಿಲ್ಲೆಯಲ್ಲಿ ಜುಲೈ 21ರವರೆಗೆ ಸರಾಸರಿ 831.00 ಮಿ.ಮೀ ಮಳೆಯಾಗಿದ್ದು ಇದು ವಾಡಿಕೆಗಿಂತ ಶೇ.57ರಷ್ಟು ಹೆಚ್ಚು. ಹೀಗಾಗಿ, ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಪರಿಹಾರ ಕ್ರಮಗಳು ಪ್ರಗತಿಯಲ್ಲಿವೆ.

ಮೂವರು ಸಾವು:ನೆರೆ ಹಾವಳಿಯಿಂದ ಹೊಸನಗರ ತಾಲೂಕಿನ ಬೈಸೆ ಗ್ರಾಮದ ಶಶಿಕಲಾ, ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮದ ನಾಗೇಂದ್ರ ಹಾಗೂ ಶಿಕಾರಿಪುರ ತಾಲೂಕಿನ ಅಮಟೇಕೊಪ್ಪ ಗ್ರಾಮದ ನಾಗರಾಜ ಸಾವನ್ನಪ್ಪಿದ್ದಾರೆ. ಶಶಿಕಲಾ ಮತ್ತು ನಾಗೇಂದ್ರ ಕುಟುಂಬದವರಿಗೆ ಎಸ್‍ಡಿಆರ್​ಎಫ್​ ಮತ್ತು ಎನ್‍ಡಿಆರ್​ಎಫ್​ ಮಾರ್ಗಸೂಚಿಯನ್ವಯ ತಲಾ 5 ಲಕ್ಷ ರೂ ಪರಿಹಾರ ನೀಡಲಾಗಿದೆ. ನಾಗರಾಜ ಅವರ ಕುಟುಂಬಕ್ಕೆ ಎಫ್‍ಎಲ್‍ಸಿ ವರದಿಯ ನಂತರ ಪರಿಹಾರ ದೊರೆಯಲಿದೆ ಎಂದು ತಿಳಿದುಬಂದಿದೆ.

ಜಾನುವಾರು ಸಾವು:ಪ್ರವಾಹಕ್ಕೆ 6 ಜಾನುವಾರು ಮೃತಪಟ್ಟಿದ್ದು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ.

7 ಮನೆ ಪೂರ್ಣ, 130 ಮನೆಗಳು ಭಾಗಶಃ ಹಾನಿ:ಜೂನ್‍ವರೆಗೆ ಸುಮಾರು 7 ಮನೆಗಳು ಪೂರ್ಣ ಹಾನಿಗೊಳಗಾಗಿದ್ದು, ಈ ಪೈಕಿ 4 ಮನೆಗಳಿಗೆ ತಲಾ 1.20 ಲಕ್ಷ ರೂ ಪರಿಹಾರ ನೀಡಲಾಗಿದೆ. 130 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು ಪರಿಹಾರಕ್ಕೆ ಕ್ರಮ ವಹಿಸಲಾಗಿದೆ.

ಸುಮಾರು 74,916 ಹೆಕ್ಟೇರ್​​ ಭತ್ತದ ಪ್ರದೇಶದಲ್ಲಿ 9,508 ಹೆಕ್ಟೇರ್​​ ಬಿತ್ತನೆಯಾಗಿದೆ. ಬಿತ್ತನೆಯಾದ ಪ್ರದೇಶದಲ್ಲಿ ಸಾಗರ ತಾಲೂಕಿನ ತಾಳಗುಪ್ಪ 500 ಹೆಕ್ಟೇರ್​​​, ಕಸಬಾ 20 ಹೆಕ್ಟೇರ್​, ಆನಂದಪುರ 10 ಹೆಕ್ಟೇರ್​​ ಸೊರಬ ತಾಲೂಕಿನ ಅಬಸೇ, ಕಡಸೂರು ಗ್ರಾಮಗಳು ಸೇರಿ ಒಟ್ಟು 610 ಹೆಕ್ಟೇರ್​​ ಪ್ರದೇಶ ಜಲಾವೃತಗೊಂಡಿದೆ. ಜಂಟಿ ಸಮೀಕ್ಷೆಯ ನಂತರ ಹಾನಿ ಪ್ರಮಾಣವನ್ನು ಅಂದಾಜಿಸಲಾಗುತ್ತದೆ. 47,000 ಹೆಕ್ಟೇರ್ ಪ್ರದೇಶದಲ್ಲಿ 43,345 ಹೆಕ್ಟೇರ್​ ಬಿತ್ತನೆಯಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ.

767 ವಿದ್ಯುತ್​ ಕಂಬಗಳಿಗೆ ಹಾನಿ: 767 ವಿದ್ಯುತ್​ ಕಂಬಗಳು ಮತ್ತು 16 ಟ್ರಾನ್ಸ್‌ಫಾರ್ಮರ್​​ಗಳು ಹಾನಿಯಾಗಿವೆ.

489 ಕಿ.ಮೀ ರಸ್ತೆ, 110 ಸೇತುವೆಗೆ ಹಾನಿ:ಪ್ರವಾಹದಿಂದ 24.92 ಕಿ.ಮೀ. ರಾಜ್ಯ ಹೆದ್ದಾರಿ, 42.13 ಕಿ.ಮೀ ಜಿಲ್ಲೆಯ ಮುಖ್ಯ ರಸ್ತೆ, 421.00 ಕಿ.ಮೀ ಗ್ರಾಮೀಣ ರಸ್ತೆ ಹಾಗೂ 110 ಸೇತುವೆಗಳಿಗೆ ಹಾನಿಯಾಗಿದೆ.

143 ಶಾಲಾ ಕಟ್ಟಡ, 118 ಅಂಗನವಾಡಿಗಳಿಗೆ ಹಾನಿ:143 ಶಾಲಾ ಕಟ್ಟಡಗಳು, 118 ಅಂಗನವಾಡಿ ಕಟ್ಟಡಗಳು ಹಾಗೂ 09 ಆರೋಗ್ಯ ಕೇಂದ್ರಗಳು ಹಾನಿಗೊಂಡಿವೆ. 64 ಕೆರೆಗಳು ಸಹ ಹಾನಿಗೊಳಗಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ಮಳೆಗೆ ಮನೆ ಗೋಡೆ ಕುಸಿದು ದಂಪತಿ, ಇಬ್ಬರು ಮಕ್ಕಳಿಗೆ ಗಾಯ - House Wall Collapse

ABOUT THE AUTHOR

...view details