ಕರ್ನಾಟಕ

karnataka

ETV Bharat / state

ಪತ್ನಿ-ಪ್ರಿಯಕರನ ಖಾಸಗಿ ವಿಡಿಯೋ ಪ್ರಕಟಿಸುವುದಾಗಿ ಬೆದರಿಕೆ: ಪತಿ ವಿರುದ್ಧ ಎಫ್ಐಆರ್ - FIR AGAINST HUSBAND

ಪತಿಯೇ ತನ್ನ ಪತ್ನಿಯ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

fir against husband
ಬ್ಯಾಡರಹಳ್ಳಿ ಪೊಲೀಸ್​ ಠಾಣೆ, ಬೆಂಗಳೂರು (ETV Bharat)

By ETV Bharat Karnataka Team

Published : Oct 27, 2024, 11:58 AM IST

ಬೆಂಗಳೂರು:ಪತ್ನಿ ಮತ್ತು ಆಕೆಯ ಮಾಜಿ ಪ್ರಿಯಕರನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಪತಿಯೇ ಬೆದರಿಸುತ್ತಿರುವ ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. 26 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಆಕೆಯ ಪತಿ ಪ್ರಸನ್ನ ಎಂಬವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ವಿವರ: ಕುಟುಂಬ ನಿರ್ವಹಣೆಗೆ ಸಹಕರಿಸದೆ ಕ್ರಿಕೆಟ್ ಬೆಟ್ಟಿಂಗ್ ಆಡುವುದು, ಪಾನಮತ್ತನಾಗಿ ಮನೆಗೆ ಬಂದು ದೈಹಿಕ ಹಿಂಸೆ ನೀಡುತ್ತಿದ್ದ ಪತಿಯ ಕಿರುಕುಳಕ್ಕೆ ದೂರುದಾರ ಮಹಿಳೆ ಬೇಸತ್ತಿದ್ದರು. ಅದೇ ಸಂದರ್ಭದಲ್ಲಿ ದೂರುದಾರ ಮಹಿಳೆಗೆ ಮಾಜಿ ಪ್ರಿಯಕರನೊಂದಿಗೆ ಸಲುಗೆ ಬೆಳೆದಿದೆ. ಇಬ್ಬರೂ ಸಹ ತಮ್ಮ ಖಾಸಗಿ ಕ್ಷಣಗಳನ್ನು ಫೋಟೋ, ವಿಡಿಯೋ ಮಾಡಿಟ್ಟುಕೊಂಡಿದ್ದರು. ಅವುಗಳನ್ನು ಪತ್ನಿಯ ಮೊಬೈಲ್ ಫೋನ್‌ನಿಂದ ತನ್ನ ಫೋನ್‌ಗೆ ಕಳಿಸಿಕೊಂಡಿರುವ ಆರೋಪಿ ಪತಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಕಿರುಕುಳ ನೀಡುತ್ತಿದ್ದಾನೆ. ಮತ್ತು ಆ ವಿಡಿಯೋಗಳನ್ನು ಆತನ ಹಾಗೂ ನನ್ನ ಸ್ನೇಹಿತರಿಗೆ ಕಳಿಸುತ್ತಿದ್ದಾನೆ. ನನಗೆ ಮತ್ತು ನನ್ನ ಮಾಜಿ ಪ್ರಿಯಕರನಿಗೆ ಜೀವ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು, ತನಿಖೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ‌.

ಇದನ್ನೂ ಓದಿ:ಮಾಜಿ ಸಚಿವರಿಗೆ ಬ್ಲ್ಯಾಕ್​ಮೇಲ್: ನಲಪಾಡ್ ಬ್ರಿಗೇಡ್ ಜಿಲ್ಲಾ ಘಟಕದ ಅಧ್ಯಕ್ಷೆ, ಪತಿ ಬಂಧನ

ABOUT THE AUTHOR

...view details