ಕರ್ನಾಟಕ

karnataka

ETV Bharat / state

'ನಮ್ಮ ಮೆಟ್ರೋ' ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತರೆ ಬೀಳುತ್ತೆ ದಂಡ! - Namma Metro - NAMMA METRO

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸುಖಾಸುಮ್ಮನೇ 20 ನಿಮಿಷಕ್ಕಿಂತ ಅಧಿಕ ಸಮಯ ನಿಲ್ಲುವ ಪ್ರಯಾಣಿಕರಿಗೆ ಮೆಟ್ರೋ ಅಧಿಕಾರಿಗಳು ದಂಡ ಹಾಕುತ್ತಿದ್ದು, 2023ರಿಂದ 24 ರ ಇಲ್ಲಿಯವರೆಗೆ ಸುಮಾರು 10 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಂದ ಒಟ್ಟು 5.38 ರೂ. ಕೋಟಿಯಷ್ಟು ದಂಡ ಕಟ್ಟಿಸಿಕೊಂಡಿದೆ.

ನಮ್ಮ ಮೆಟ್ರೋ
ನಮ್ಮ ಮೆಟ್ರೋ (IANS)

By ETV Bharat Karnataka Team

Published : May 19, 2024, 7:15 AM IST

ಬೆಂಗಳೂರು:ನಮ್ಮ ಮೆಟ್ರೋ ಸುರಕ್ಷತೆ ಹಾಗೂ ಭದ್ರತೆಗಾಗಿ ಹಲವು ನಿಯಮಗಳನ್ನು ಜಾರಿಗೆ ತರುತ್ತಿದ್ದು, ಈ ಬಾರಿ ನಿಯಮ ಉಲ್ಲಂಘಿಸಿದ 10.76 ಲಕ್ಷ ಪ್ರಯಾಣಿಕರಿಂದ 11 ತಿಂಗಳಿನಲ್ಲಿ 5.38 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ.

ಮೆಟ್ರೋ ಅಧಿಕಾರಿಗಳಿಂದ ಮಾಹಿತಿ: "ನಮ್ಮ ಮೆಟ್ರೋ ಹಲವಾರು ನೀತಿ ನಿಯಮಗಳನ್ನು ಜಾರಿ ಮಾಡಿದೆ. ಮಾತ್ರವಲ್ಲದೆ ದಂಡವನ್ನೂ ಹಾಕುತ್ತಿದ್ದು, ಕಳೆದ ವಾರ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಗಳ ಕಾಲ ನಿಂತಿದ್ದ ಯುವಕನಿಗೆ 50 ರೂಪಾಯಿ ದಂಡ ಹಾಕಿತ್ತು. ಕಳೆದ ವರ್ಷ 2023ರ ಜೂನ್‌ನಿಂದ ಇಲ್ಲಿಯವರೆಗೆ ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕೂ ಹೆಚ್ಚು ಸಮಯ ಕಾಲ ಕಳೆದಿದ್ದ 10.75 ಲಕ್ಷ ಪ್ರಯಾಣಿಕರಿಗೆ, ಒಬ್ಬರಿಗೆ 50 ರೂಪಾಯಿನಂತೆ ಒಟ್ಟು 5.38 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು 'ನಮ್ಮ ಮೆಟ್ರೋ ಅಧಿಕಾರಿಗಳು' ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರು ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕೂ ಹೆಚ್ಚು ಸಮಯ ಇರಬಾರದು ಎಂಬ ನಿಯಮ ಮೊದಲಿನಿಂದಲೂ ಜಾರಿಯಿದೆ. ಒಂದು ವೇಳೆ ಪ್ರಯಾಣಿಕರು ಹೆಚ್ಚು ಸಮಯ ನಿಲ್ದಾಣದಲ್ಲಿ ಕಾಲ ಕಳೆದರೆ, ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಈ ನಿಯಮವನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಪ್ರಯಾಣಿಕರು ಟಿಕೆಟ್ ಪಡೆದ ನಂತರ ಒಂದು ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷ ಇರುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಈ ನಿಯಮ ಮೀರಿ ಇದಕ್ಕೂ ಹೆಚ್ಚು ಸಮಯ ಇದ್ದರೆ, ಗರಿಷ್ಠ 50 ರೂ. ಅಥವಾ ಗಂಟೆಗೆ 10 ರೂ. ದಂಡ ಕಟ್ಟಬೇಕಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:ನಮ್ಮ ಮೆಟ್ರೋ ರೈಲಿನಲ್ಲಿ ಯುವಕ - ಯುವತಿಯ ವರ್ತನೆಗೆ ಜನರಿಂದ ಆಕ್ರೋಶ; ಬೆಂಗಳೂರು ಪೊಲೀಸರು ಹೇಳಿದ್ದೇನು? - Namma Metro

ABOUT THE AUTHOR

...view details