ಕರ್ನಾಟಕ

karnataka

ETV Bharat / state

ಆ್ಯಪ್ ಮೂಲಕ ಸ್ನೇಹಿತೆಯ ಬೆತ್ತಲೆ ವಿಡಿಯೋ ಸೆರೆ: ಹಣಕ್ಕಾಗಿ ಪೀಡಿಸುತ್ತಿದ್ದ ಆರೋಪಿ ವಿರುದ್ಧ ದೂರು ದಾಖಲು - WOMEN BLACKMAIL

ಆ್ಯಪ್ ಮುಖಾಂತರ ಗೊತ್ತಿಲ್ಲದಂತೆ ಮಹಿಳೆಯ ಬೆತ್ತಲೆ ವಿಡಿಯೋ ಸೆರೆ ಹಿಡಿದು ಹಣಕ್ಕಾಗಿ ಪೀಡಿಸುತ್ತಿದ್ದ ಯುವಕನೋರ್ವನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

BLACKMAILING WOMEN
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Nov 1, 2024, 6:29 PM IST

ಬೆಂಗಳೂರು: ಮಹಿಳೆಗೆ ಅರಿವಿಲ್ಲದಂತೆ ಅವರ ಮೊಬೈಲ್​​ನಲ್ಲೇ ಆ್ಯಪ್ ಡೌನ್​ಲೋಡ್ ಮಾಡಿ ಬೆತ್ತಲೆ ವಿಡಿಯೋ ಸೆರೆ ಹಿಡಿದು, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ವಿರುದ್ಧ ಆರ್.ಆರ್.ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳೆ ನೀಡಿದ ದೂರು ಆಧರಿಸಿ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆ ವಿವಾಹಿತೆಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಮೂರನೇ ವ್ಯಕ್ತಿಯಿಂದ ಆರೋಪಿಯು ಮಹಿಳೆಗೆ ಸ್ನೇಹಿತನಾಗಿದ್ದ. ಕಾಲಕ್ರಮೇಣ ಮೂವರು ಓಡಾಡಿಕೊಂಡಿದ್ದರು. ಈ ವೇಳೆ ಮಹಿಳೆಗೆ ಅರಿವಿಲ್ಲದಂತೆ ಥರ್ಡ್ ಪಾರ್ಟಿ ಅಪ್ಲಿಕೇಷನ್ ಆ್ಯಪ್ ಅನ್ನ ಮಹಿಳೆಯ ಮೊಬೈಲ್​ನಲ್ಲಿ ಡೌನ್​ಲೋಡ್ ಮಾಡಿ ಆಕೆಗೆ ಅರಿವಿಲ್ಲದಂತೆ ಬೆತ್ತಲೆ ವಿಡಿಯೋ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲಕ್ರಮೇಣ ಮೂವರು ಆತ್ಮೀಯ ಸ್ನೇಹಿತರಾಗಿದ್ದು, ಮಹಿಳೆಯ ಮೊಬೈಲ್​ಅನ್ನ ಆರೋಪಿ ಉಪಯೋಗಿಸುತ್ತಿದ್ದ. ಈ ನಡುವೆ ಮಹಿಳೆಗೆ ಗೊತ್ತಿಲ್ಲದಂತೆ ಅಪ್ಲೀಕೇಷನ್ ಡೌನ್​ಲೋಡ್ ಮಾಡಿ ಮೊಬೈಲ್​ನಲ್ಲಿ ಹೈಡ್ ಮಾಡಿದ್ದ. ತುರ್ತು ಫೋನ್ ಬರುವುದೆಂದು ಮಹಿಳೆಯು ಸ್ನಾನದ ಮನೆಯಲ್ಲಿ ಮೊಬೈಲ್ ಇಟ್ಟುಕೊಂಡಿದ್ದರು. ಈ ವೇಳೆ ಆ್ಯಪ್ ಆನ್ ಮಾಡಿಕೊಂಡು ಮೊಬೈಲ್​ನಲ್ಲಿ ಸೆರೆಯಾಗುವ ವಿಡಿಯೋ ಹಾಗೂ ಆಡಿಯೊಗಳನ್ನ ಸಂಗ್ರಹಿಸಿದ್ದ. ಕೆಲ ದಿನಗಳ ಬಳಿಕ ಮಹಿಳೆಗೆ ಕರೆ ಮಾಡಿದ ಆರೋಪಿಯು, ನಿನ್ನ ಬೆತ್ತಲೆ ವಿಡಿಯೋಗಳಿದ್ದು, ಅವುಗಳನ್ನು ನಿನ್ನ ಸ್ನೇಹಿತನೇ ಕಳುಹಿಸಿದ್ದಾನೆ. ಹಾಗಾಗಿ ಆತನನ್ನು ನಂಬದಂತೆ ಸುಳ್ಳು ಹೇಳಿದ್ದ. ತನ್ನ ಬೆತ್ತಲೆ ವಿಡಿಯೋ ನೋಡಿ ಆತಂಕಗೊಂಡ ಮಹಿಳೆಯು, ಸ್ನೇಹಿತನನ್ನು ಪ್ರಶ್ನಿಸಿದ್ದಳು.

ಆಗ ತನ್ನ ಸ್ನೇಹಿತ ಗೊತ್ತಿಲ್ಲವೆಂದಾಗ ಅಸಲಿ ವಿಷಯ ಗೊತ್ತಾಗಿದೆ. ತನ್ನ ಮುಂದೆ ಒಳ್ಳೆಯವಂತೆ ನಟಿಸಿದ್ದ ಆರೋಪಿಯು, ಕೆಲದಿನಗಳಿಂದ ನಿನ್ನನ್ನು ಪ್ರೀತಿಸುತ್ತಿದ್ದೇನೆ, ನಿನ್ನ ಗಂಡ ಮಧ್ಯಪಾನ ಮಾಡುತ್ತಾನೆ, ಆತನನ್ನ ಬಿಟ್ಟು ತನ್ನನ್ನ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಮದುವೆಗೆ ನಿರಾಕರಿಸಿದರೂ ಬಿಡದೆ ಮಹಿಳೆ ಮೊಬೈಲ್​ಗೆ ಅಸಭ್ಯವಾಗಿ ವಾಟ್ಸಾಪ್ ಸಂದೇಶ ಕಳುಹಿಸಿದ್ದಾನೆ. ಬೆತ್ತಲೆ ವಿಡಿಯೋ ತನ್ನ ಬಳಿಯಿದೆ, ಹಣ ನೀಡದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆವೊಡ್ಡಿದ್ದಾನೆ. ಸೆ.7ರಂದು ಕರೆ ಮಾಡಿ ಮಾತನಾಡಬೇಕೆಂದು ರೂಮಿಗೆ ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ಧಾರೆ.

ಇದನ್ನೂ ಓದಿ:ಪತ್ನಿ-ಪ್ರಿಯಕರನ ಖಾಸಗಿ ವಿಡಿಯೋ ಪ್ರಕಟಿಸುವುದಾಗಿ ಬೆದರಿಕೆ: ಪತಿ ವಿರುದ್ಧ ಎಫ್ಐಆರ್

ABOUT THE AUTHOR

...view details