ಬೆಂಗಳೂರು: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾ ಮಾತಿದೆ. ಇದಕ್ಕೆ ಪ್ರತಿರೋಧ ಎಂಬಂತೆ ಹೆಂಡತಿಯೊಂದಿಗೆ ಜಗಳವಾಡಿ ಒಂದು ವರ್ಷದಿಂದ ದೂರವಾಗಿರುವ ಪತಿ ಆಕೆಯ ಹೆಸರಿನಲ್ಲಿ ಫೇಸ್ ಬುಕ್ ಪೇಜ್ ತೆರೆದು ಕಾಲ್ ಗರ್ಲ್ ಬೇಕಾದರೆ ಕರೆ ಮಾಡಿ ಎಂದು ಫೋಟೊ ಹಾಗೂ ನಂಬರ್ ಸಮೇತ ಪೋಸ್ಟ್ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ನೊಂದ ಪತ್ನಿ ದೂರು ನೀಡಿದ್ದಾರೆ.
ವಿದೇಶದಲ್ಲಿರುವ ಪತಿಯ ವಿರುದ್ಧ ಪತ್ನಿ ದೂರು ನೀಡಿದ್ದಾರೆ. 2019ರಲ್ಲಿ ಮದುವೆಯಾಗಿದ್ದು, ಆರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ನಡುವೆ ಕಾಲಕ್ರಮೇಣ ವೈಷ್ಯಮ ಮೂಡಿತ್ತು. ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರಿಂದ ಕಳೆದ ಒಂದು ವರ್ಷದ ಹಿಂದೆ ಪತಿಯಿಂದ ಪತ್ನಿ ದೂರವಾಗಿದ್ದರು.
ಇದೇ ಹಗೆತನವನ್ನು ಮುಂದುವರೆಸಿದ ಪತಿ, ಹೆಂಡತಿ ಹೆಸರಿನಲ್ಲಿ ಫೇಸ್ ಬುಕ್ ಫೇಜ್ ತೆರೆದು ಕಾಲ್ ಗರ್ಲ್ ಬೇಕಾಗಿದಲ್ಲಿ ಸಂಪರ್ಕಿಸಿ ಎಂದು ಪತ್ನಿ ಫೋಟೊ ಹಾಗೂ ಮೊಬೈಲ್ ನಂಬರ್ ಸಮೇತ ಪೋಸ್ಟ್ ಮಾಡಿದ್ದನು. ಅಲ್ಲದೇ ಕೆಲ ಪೋರ್ನ್ ವೆಬ್ ಸೈಟ್ಗಳಲ್ಲಿಯೂ ತನ್ನ ನಂಬರ್ ನೀಡಿದ್ದು, ಇದರ ಪರಿಣಾಮ ಪ್ರತಿ ದಿನ ಕರೆಗಳು ಹಾಗೂ ವಾಟ್ಸ್ಆ್ಯಪ್ ಸಂದೇಶಗಳು ಬರುತ್ತಿವೆ. ಅಲ್ಲದೆ, ನನ್ನ ತಂದೆಯ ನಂಬರ್ ಕೂಡ ಒದಗಿಸಿದ್ದು, ಇದರಿಂದ ನಿತ್ಯ ಹತ್ತಾರು ಕರೆ ಹಾಗೂ ವಾಟ್ಸ್ಆ್ಯಪ್ ಸಂದೇಶಗಳು ಬರುತ್ತಿವೆ. ಇದರಿಂದ ಸಾಕಷ್ಟು ಮಾನಸಿಕ ಕಿರುಕುಳ ಅನುಭವಿಸಿದ್ದೇನೆ. ಹೀಗಾಗಿ ನನ್ನ ಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಸಂತ್ರಸ್ತೆ ಮಹಿಳೆ ಕೋರಿದ್ದಾರೆ.
ಇದನ್ನೂ ಓದಿ :ಬೆಂಗಳೂರು: ಬಿಜೆಪಿ ನಾಯಕನಿಗೆ ಹನಿಟ್ರ್ಯಾಪ್, ಆರೋಪಿಗಳ ವಿರುದ್ಧ ಪ್ರಕರಣ ದಾಖಲು - Honeytrap Case