ಬೆಂಗಳೂರು : ಪತಿಯೇ ತನ್ನ ಪತ್ನಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಸೋಮವಾರ ಸಂಜೆ ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯ ವಿಂಡ್ ಟನಲ್ ರಸ್ತೆಯಲ್ಲಿ ನಡೆದಿದೆ. ಪತ್ನಿ ನೈಗರ್ (28) ಮೇಲೆ ಆಕೆಯ ಪತಿ ಶೇಕ್ ಮುಜೀಬ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಬೇರೊಬ್ಬನ ಜೊತೆ ಲಿವ್ ಇನ್ ನಲ್ಲಿರುವುದನ್ನು ತಿಳಿದ ಆರೋಪಿ ಮನನೊಂದು ಕೃತ್ಯ ಎಸಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಹೊಸಕೋಟೆ ಮೂಲದ ನೈಗರ್ ಹಾಗೂ ಆರ್.ಟಿ.ನಗರದ ನಿವಾಸಿಯಾಗಿದ್ದ ಶೇಕ್ ಮುಜೀಬ್ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಆರು ತಿಂಗಳ ಹಿಂದೆ ಗಂಡನಿಂದ ಬೇರ್ಪಟ್ಟಿದ್ದ ನೈಗರ್, ಕಾಲ್ ಸೆಂಟರಿನಲ್ಲಿ ಕೆಲಸ ಮಾಡಿಕೊಂಡು ಪ್ರತ್ಯೇಕವಾಗಿ ಪಿಜಿಯಲ್ಲಿ ವಾಸವಿದ್ದಳು. ಆದರೆ ಪತ್ನಿ ಇತ್ತೀಚಿಗೆ ಸಲೀಂ ಎಂಬಾತನ ಜೊತೆ ಲಿವ್ ಇನ್ ನಲ್ಲಿರುವುದನ್ನು ತಿಳಿದ ಮುಜೀಬ್ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.