ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ಆನೆ ದಾಳಿಗೆ ರೈತ ಸಾವು - ರೈತ ಸಾವು

ರಾಗಿ ಹುಲ್ಲನ್ನು ಕಾಯಲು ಹೊಲದಲ್ಲಿ ಮಲಗಿದ್ದ ರೈತ ಆನೆ ದಾಳಿಗೆ ಸಾವನ್ನಪ್ಪಿದ್ದಾರೆ.

ಆನೆ ದಾಳಿಗೆ ರೈತ ಸಾವು
ಆನೆ ದಾಳಿಗೆ ರೈತ ಸಾವು

By ETV Bharat Karnataka Team

Published : Jan 25, 2024, 1:26 PM IST

ರಾಮನಗರ:ಪದೇ ಪದೇ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಲೇ ಇದೆ. ಮತ್ತೆ ಕಾಡಾನೆ ದಾಳಿಗೆ ರೈತ ಬಲಿಯಾದ ಘಟನೆ ಕನಕಪುರ‌ ತಾಲೂಕಿನ ಗೇರಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟ ನಂಜಯ್ಯ(62) ಮೃತಪಟ್ಟಿರುವ ವೃದ್ಧ. ರಾತ್ರಿ ಹೊಲದಲ್ಲಿ ಒಕ್ಕಣೆ ಮಾಡಿದ್ದ ರಾಗಿ ಹುಲ್ಲನ್ನು ಕಾಯಲು ಹೋಗಿದ್ದ ನಂಜಯ್ಯ ಅಲ್ಲೇ ಮಲಗಿದ್ದರು. ಇಂದು ನಸುಕಿನ ಜಾವ ದಾಳಿ ನಡೆಸಿದ ಕಾಡಾನೆಗಳು ತಲೆ ಮೇಲೆ‌ ಕಾಲು ಇಟ್ಟಿರುವ ಪರಿಣಾಮ ನಂಜಯ್ಯ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ನಿರಂತರವಾಗಿ ಇಲ್ಲಿ ಆನೆ ದಾಳಿ ನಡೆಯುತ್ತಲೇ ಇದ್ದು, ಅರಣ್ಯಾಧಿಕಾರಿಗಳು ಶಾಶ್ವತ ಪರಿಹಾರ ಕಂಡು ಹಿಡಿಯಬೇಕಾಗಿದೆ ಎಂದು ಸ್ಥಳೀಯರು ಮನವಿ ಮಾಡುತ್ತಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮೇಲುಕೋಟೆ ಶಿಕ್ಷಕಿ ಹತ್ಯೆ ಪ್ರಕರಣ: ಬರ್ತ್‌ಡೇ ನೆಪದಲ್ಲಿ ಕರೆಸಿ ಕೊಲೆಗೈದ ಆರೋಪಿ ಅರೆಸ್ಟ್

ABOUT THE AUTHOR

...view details