ಬೆಂಗಳೂರು:2024ನೇ ಸಾಲಿನ ಎರಡನೇ ವರ್ಷದ/ ಮೂರನೇ ಸೆಮಿಸ್ಟರ್ನ ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕಾಗಿ ಡಿಸಿಇಟಿ-24ಕ್ಕೆ ನೋಂದಣಿ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಹೌದು, ಶುಲ್ಕ ಪಾವತಿಸಲು ಮೇ 31ರವರೆಗೆ ಕೊನೆ ಅವಕಾಶ ನೀಡಲಾಗಿದೆ.
ಡಿಸಿಇಟಿ -2024ಕ್ಕೆ ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ - DCET 2024 - DCET 2024
ಡಿಸಿಇಟಿ-2024ಕ್ಕೆ ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ ಮಾಡಿ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ.
ಡಿಸಿಇಟಿ-2024ಕ್ಕೆ ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ (ಕೃಪೆ: ETV Bharat Karnataka)
Published : May 29, 2024, 6:26 PM IST
ಶುಲ್ಕ ಪಾವತಿಸಿದ್ದು, ಆದರೆ ಪಾವತಿ ವಿಫಲವಾದ ಕಾರಣ ಬ್ಯಾಂಕಿನಿಂದ ಹಿಂತಿರುಗಿಸಲಾಗಿರುವ ಅಭ್ಯರ್ಥಿಗಳೂ ಸಹ ಮತ್ತೊಮ್ಮೆ ಶುಲ್ಕ ಪಾವತಿಸಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ ನೋಡಲು ಕೋರಲಾಗಿದೆ.
ಓದಿ:ಡಿಸಿಇಟಿ 2024: ಜೂನ್ 22ರಂದು ಆಫ್ ಲೈನ್ ಪರೀಕ್ಷೆ, ಈ ಜಿಲ್ಲೆಗಳಲ್ಲಿ ಮಾತ್ರ ನಡೆಯುತ್ತೆ ಎಕ್ಸಾಂ - DCET 2024